ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಮ ವರ್ಗದ ಜನರಿಗೆ ಜಿಎಸ್ ಟಿಯಿಂದಾಗುವ ಲಾಭಗಳು!

ಜಿಎಸ್ ಟಿಯಡಿಯಲ್ಲಿ ಮಧ್ಯಮ ವರ್ಗ ಹಾಗೂ ಬಡವರು ಬಳಸುವ ಅನೇಕ ವಸ್ತುಗಳು ಶೇ. 5ರೊಳಗಿನ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಆದ್ದರಿಂದ, ಜಿಎಸ್ ಟಿಯು ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗಗಳ ಮೇಲೆ ಹೆಚ್ಚು ಹೊರೆಯಾಗದು ಎಂದು ಹೇಳಲಾಗಿದೆ.

|
Google Oneindia Kannada News

ದೀರ್ಘಕಾಲದಿಂದ ಹಲವಾರು ನಿರೀಕ್ಷೆಗಳ ಜತೆಗೆ ಗೊಂದಲಗಳನ್ನೂ ಹುಟ್ಟಿಸಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ದೇಶಾದ್ಯಂತ ಜಾರಿಗೊಂಡಿದೆ.

ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆ - ಎಂಬ ಸೂತ್ರದಡಿ ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಹೊಸ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆ ಸಲ್ಲಿಸಲಿದೆ ಎಂದು ಹೇಳಲಾಗಿದೆ.

ಜಿಎಸ್ ಟಿ ಜಾರಿಯಾದ ನಂತರದ ಎಂಟಿ ಆರ್ ನ ಕಾಫಿ ಬಿಲ್ ನೋಡಿದ್ರಾ!ಜಿಎಸ್ ಟಿ ಜಾರಿಯಾದ ನಂತರದ ಎಂಟಿ ಆರ್ ನ ಕಾಫಿ ಬಿಲ್ ನೋಡಿದ್ರಾ!

ಜಿಎಸ್ ಟಿ ಬಗ್ಗೆ ಇಷ್ಟೆಲ್ಲಾ ಹೇಳಲಾಗುತ್ತಿದ್ದರೂ, ಅನೇಕ ಜನರಿಗೆ ಅನೇಕ ರೀತಿಯ ಗೊಂದಲಗಳು ಹಾಗೇ ಇವೆ. ಒಟ್ಟಾರೆಯಾಗಿ, ಇದು ಮಧ್ಯಮ ವರ್ಗಕ್ಕೆ ಅನುಕೂಲವಾಗಲಿದೆಯೇ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇದು ಸಹಕಾರಿಯೇ ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯ ಜನರನ್ನು ಕಾಡುತ್ತಿವೆ.

ಜಿಎಸ್ ಟಿ ಎಂದರೆ 'ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್' : ಪ್ರಧಾನಿ ಮೋದಿಜಿಎಸ್ ಟಿ ಎಂದರೆ 'ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್' : ಪ್ರಧಾನಿ ಮೋದಿ

ಹಾಗಾದರೆ, ಈ ಜಿಎಸ್ ಟಿ ಮಧ್ಯಮ ವರ್ಗದವರಿಗೆ ಹೇಗೆ ಸಹಕಾರಿ? ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೇಗೆ ಅನುಕೂಲಕರ? ದೇಶದ ಪ್ರಗತಿಗೆ ಇದು ನೆರವಾಗುವ ಅಂಶಗಳೇನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಆತನಿಗೇನು ಅನುಕೂಲ?

ಆತನಿಗೇನು ಅನುಕೂಲ?

- ಜನ ಸಾಮಾನ್ಯರ ನಿತ್ಯ ಬಳಕೆಯ ಬಹುಪಾಲು ಸಾಮಗ್ರಿಗಳು ಶೇ. 5ರೊಳಗಿನ ತೆರಿಗೆ ವ್ಯಾಪ್ತಿಗೆ ಬರುತ್ತವೆ.

- ಬಡವರಿಗೆ, ಸಾಮಾನ್ಯ ಜನರಿಗೆ ಇದು ಹೆಚ್ಚು ಉಪಯುಕ್ತ.

- ಬಡವರಿಗೆ ತಮ್ಮ ನಿತ್ಯ ವಸ್ತುಗಳನ್ನು ಕೊಳ್ಳಲು, ತರಕಾರಿ, ಬೇಳೆ ಮುಂತಾದ ಆಹಾರ ಧಾನ್ಯಗಳು ಕೈಗೆಟುವ ದರದಲ್ಲಿ ಸಿಗುತ್ತವೆ.


- ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಇದರಿಂದ ಹೆಚ್ಚು ಅನುಕೂಲ

ತೆರಿಗೆ ಸಲ್ಲಿಕೆಯೂ ಸರಳ

ತೆರಿಗೆ ಸಲ್ಲಿಕೆಯೂ ಸರಳ

- ವ್ಯಾಪಾರಸ್ಥರ ನೊಂದಾವಣಿ, ರಿಟರ್ನ್ ಸಲ್ಲಿಕೆ, ಟ್ಯಾಕ್ಸ್ ರಿಫಂಡ್ ಎಲ್ಲವೂ ಸರಳ ಹಾಗೂ ಸುಸೂತ್ರ.

- ಉತ್ಪಾದಕರಿಂದ ವಿತರಕರವರೆಗೆ ಸರಕುಗಳು ಸುಲಭವಾಗಿ ಯಾವುದೇ ಅಡೆ ತಡೆಯಿಲ್ಲದೆ ಸಾಗುತ್ತವೆ. ಈ ಹಂತದಲ್ಲಿ ಒಂದರ ಮೇಲೊಂದು ತೆರಿಗೆ ಬೀಳುವ ಪ್ರಮೇಯವೇ ಇರುವುದಿಲ್ಲ.

- ಹಲವಾರು ತೆರಿಗೆಗಳ ಕಾಟವಿಲ್ಲದಿರುವುದರಿಂದ ವಿದೇಶಗಳಿಗೆ ಸರಕುಗಳನ್ನು ರಫ್ತು ಮಾಡುವಂಥ ಉದ್ಯಮಗಳಿಗೆ ಹೆಚ್ಚಿನ ಅನುಕೂಲ.

- ಅನೇಕ ಉದ್ಯಮಿಗಳಿಗೆ ಸಿಗುತ್ತಿದ್ದ ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಇಳಿಮುಖವಾಗುವುದಿರಿಂದ ಕೆಲ ಉತ್ಪಾದನೆಗಳ ಉತ್ಪಾದನಾ ವೆಚ್ಛದಲ್ಲೂ ಇಳಿಮುಖ.

ಏಕೀಕೃತ ಮಾರುಕಟ್ಟೆ ಸ್ಥಾಪನೆ

ಏಕೀಕೃತ ಮಾರುಕಟ್ಟೆ ಸ್ಥಾಪನೆ

- ಹೊಸತೊಂದು ಏಕೀಕೃತ ಮಾರುಕಟ್ಟೆ ಸ್ಥಾಪನೆ.

- ಭಾರತವನ್ನು ಉತ್ಪಾದನಾ ಸ್ವರ್ಗವನ್ನಾಗಿಸುವ ಪ್ರಯತ್ನ.

- ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ರಫ್ತಿಗೆ ಹೆಚ್ಚು ಉತ್ತೇಜನ.

- ಹೆಚ್ಚಿನ ಉದ್ಯೋಗಾವಕಾಶದಿಂದ ನಿರುದ್ಯೋಗ ಸಮಸ್ಯೆಗೆ ತಕ್ಕ ಮಟ್ಟಿನ ಮುಕ್ತಿ.

ಗೊಂದಲಗಳಿಲ್ಲ ವ್ಯವಸ್ಥೆ

ಗೊಂದಲಗಳಿಲ್ಲ ವ್ಯವಸ್ಥೆ

- ವಿವಿಧ ನಗರಗಳಲ್ಲಿನ ವಿವಿಧ ತೆರಿಗೆಗಳ ಬಗ್ಗೆ ಲೆಕ್ಕಾಚಾರ ಹಾಕುವ ಒತ್ತಡ ಈಗಿಲ್ಲ.

- ತೆರಿಗೆ ಲೆಕ್ಕಾಚಾರ ಸುಲಭ. ಕೆಲವು ಸೇವೆಗಳಿಗೆ ತೆರಿಗೆ ಮುಕ್ತವಾಗಿರಿಸಿರುವುದರಿಂದ ಅವುಗಳ ಬಗ್ಗೆ ಅನವಶ್ಯಕ ಗೊಂದಲವಿಲ್ಲ.

- 1000ಕ್ಕೂ ಹೆಚ್ಚು ಸಾಮಗ್ರಿಗಳು ಹಾಗೂ ಸೇವೆಗಳನ್ನು ನಾಲ್ಕೇ ನಾಲ್ಕು ತೆರಿಗೆ ಕ್ಯಾಟಗರಿಯಲ್ಲಿ ತಂದಿರುವುದರಿಂದ ತೆರಿಗೆ ಲೆಕ್ಕಾಚಾರ ಇನ್ನು ಸುಲಭ.

ಎಲ್ಲವೂ ಸರಾಗ, ಐಕ್ಯತೆಗೆ ನಾಂದಿ

ಎಲ್ಲವೂ ಸರಾಗ, ಐಕ್ಯತೆಗೆ ನಾಂದಿ

- ಸರಕು ಮತ್ತು ಸೇವೆಗಳು ಸರಾಗವಾಗಿ ನಡೆಯುವಂಥ ವಾತಾವರಣ.

- ಗ್ರಾಹಕರಿಗೆ ಹೆಚ್ಚು ಅನುಕೂಲ.

- ಉತ್ಪಾದಕರು ಹಾಗೂ ಗ್ರಾಹಕರಿನ್ನು ಒಂದೇ ಸೂರಿನಡಿ.

- ರಾಷ್ಟ್ರೀಯತೆ ಹಾಗೂ ಐಕ್ಯತೆಗೆ ನಾಂದಿ.

English summary
There are lot of confusion over the newly implemented GST (Goods and Service Tax) in India. Many of the economists say that it would be helpful in country's progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X