ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ದರ: ಜಿಎಸ್‌ಟಿಗೂ ಮುನ್ನ ಹಾಗೂ ಜಿಎಸ್‌ಟಿ ನಂತರದ ವ್ಯತ್ಯಾಸ ತಿಳಿದುಕೊಳ್ಳಿ!

|
Google Oneindia Kannada News

ನವದೆಹಲಿ, ಆಗಸ್ಟ್‌ 24: ದೇಶದಲ್ಲಿ ನಾನಾ ರೀತಿಯ ವಾಣಿಜ್ಯ ತೆರಿಗೆಗಳನ್ನು ರದ್ದುಪಡಿಸಿ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಮೇಲೆ ತೆರಿಗೆ ದರಗಳಲ್ಲಿ ಹಲವಾರು ಬದಲಾವಣೆ ಆಗಿದ್ದು, ಪೂರ್ವ ಜಿಎಸ್‌ಟಿ ತೆರಿಗೆ ದರಕ್ಕಿಂತ ಬಹುತೇಕ ವಸ್ತುಗಳು, ಸೇವೆಗಳ ಮೇಲಿನ ತೆರಿಗೆ ಕಡಿತಗೊಂಡಿದೆ.

ಹಣಕಾಸು ಸಚಿವಾಲಯ ಈ ಕುರಿತು ಟ್ವೀಟ್ ಮಾಡಿದ್ದು, ಗೃಹಬಳಕೆ ವಸ್ತುಗಳ ಮೇಲಿನ ಪೂರ್ವ ಜಿಎಸ್‌ಟಿ ತೆರಿಗೆ ದರ ಮತ್ತು ಪ್ರಸ್ತುತ ಜಿಎಸ್‌ಟಿ ದರವು ಯಾವ ರೀತಿಯಲ್ಲಿ ಬದಲಾವಣೆ ಕಂಡು ಬಂದಿದೆ ಎಂಬುದನ್ನ ಅಂಕಿ-ಅಂಶಗಳ ಮೂಲಕ ತಿಳಿಸಿದೆ.

ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿ

ಹೇರ್ ಆಯಿಲ್, ಟೂತ್‌ಪೇಸ್ಟ್ ಮತ್ತು ಸೋಪ್‌ನಂತಹ ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆ ದರಗಳು ಜಿಎಸ್‌ಟಿ ಪೂರ್ವ ಯುಗದಲ್ಲಿ ಶೇಕಡಾ 29.3 ರಿಂದ ಜಿಎಸ್‌ಟಿ ಅಡಿಯಲ್ಲಿ ಕೇವಲ ಶೇಕಡಾ 18ಕ್ಕೆ ಇಳಿದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

How GST Has Significantly Reduced Tax on Household Items

ಪೂರ್ವ ಜಿಎಸ್‌ಟಿ ಹಾಗೂ ಪ್ರಸ್ತುತ ಜಿಎಸ್‌ಟಿ ದರಗಳು ಹೇಗೆ ವ್ಯತ್ಯಾಸಗೊಂಡಿವೆ ಎಂಬುದರ ವಿವರ ಈ ಕೆಳಗಿನಂತಿದೆ.

ಸರಕುಗಳ ಹೆಸರು ಜಿಎಸ್‌ಟಿಗೂ ಮುನ್ನ ಪ್ರಸ್ತುತ ಜಿಎಸ್‌ಟಿ ದರ
ಹಾಲಿನ ಪುಡಿ 6% 5%
ಮೊಸರು,ಲಸ್ಸಿ,ಮಜ್ಜಿಗೆ 4% 0%
ನೈಸರ್ಗಿಕ ಜೇನುತುಪ್ಪ 6% 0%
ಅಲ್ಟ್ರಾ ಹೆಚ್ಚಿನ ತಾಪಮಾನದ ಹಾಲು 6% 5%
ಗೋಡಂಬಿ 7% 5%
ಒಣದ್ರಾಕ್ಷಿ 6% 5%
ಮಸಾಲೆಗಳು 6% 5%
ಗೋಧಿ 2.5% 0%
ಅಕ್ಕಿ 2.75% 0%
ಹಿಟ್ಟು 3.5% 0%
ಸೋಯಾಬಿನ್ ಎಣ್ಣೆ 6% 5%
ಕಡ್ಲೆಕಾಯಿ ಎಣ್ಣೆ 6% 5%
ತಾಳೆ ಎಣ್ಣೆ(ಪಾಮಾಯಿಲ್) 6% 5%
ಸೂರ್ಯಕಾಂತಿ ಎಣ್ಣೆ 6% 5%
ತೆಂಗಿನಕಾಯಿ ಎಣ್ಣೆ 6% 5%
ಸಾಸಿವೆ ಎಣ್ಣೆ 6% 5%
ಇತರ ತರಕಾರಿ ಖಾದ್ಯ ತೈಲ 6% 5%
ಸಕ್ಕರೆ 6% 5%
ಸ್ವೀಟ್‌ಮೀಟ್ 7% 5%
ಕೆಚಪ್&ಸಾಸ್‌ 12% 12%
ಸಾಸಿವೆ ಸಾಸ್‌ 12% 12%
ಮಿನರಲ್ ವಾಟರ್ 29.3% 18%
ಅಗರಬತ್ತಿ 10% 5%
ಹಲ್ಲಿನಪುಡಿ 17% 12%
ಹೇರ್ ಆಯಿಲ್ 29.3% 18%
ಟೂತ್‌ಪೇಸ್ಟ್‌ 29.3% 18%
ಸೋಪು 29.3% 18%
ಗಾಳಿಪಟಗಳು 11% 5%
ಪಾದರಕ್ಷೆಗಳು(1,000 ರೂ.ವರೆಗೆ) 10% 5%
ಇತರೆ ಪಾದರಕ್ಷೆಗಳು 21% 18%
ಪೇಂಟ್&ವಾರ್ನಿಷಸ್ 31.3% 18%
ರೆಫ್ರಿಜರೇಟರ್ 31.3% 18%
ವಾಷಿಂಗ್ ಮಶಿನ್ 31.3% 18%
ವಾಕ್ಯುಮ್ ಕ್ಲೀನರ್ 31.3% 18%
ದೇಸಿ ಎಲೆಕ್ಟ್ರಿಕ್ ಉಪಕರಣಗಳು/td> 31.3% 18%
ವಾಟರ್ ಹೀಟರ್/ಡ್ರೈಯರ್ಸ್ 31.3% 18%
ಟಿವಿ (32 ಇಂಚುಗಳವರೆಗೆ) 31.3% 18%
ಎಲ್‌ಪಿಜಿ ಸ್ಟವ್ 31.3% 18%
ಎಲ್‌ಇಡಿ 15% 12%
ಸ್ಕೂಲ್ ಬ್ಯಾಗ್ 22% 18%
English summary
In this article explained How GST Has Significantly Reduced Tax on Household goods. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X