ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆದಾರರ ಮೇಲೆ CRISIL ರೇಟಿಂಗ್ ಹೇಗೆ ಪ್ರಭಾವ ಬೀರುತ್ತದೆ?

Google Oneindia Kannada News

CRISIL(ಕ್ರೆಡಿಟ್ ರೇಟಿಂಗ್ ಇನ್‍ಫಾರ್‍ಮೇಷನ್ ಸರ್ವಿಸಸ್ ಆಫ್ ಇಂಡಿಯಾ ಲಿಮಿಟೆಡ್) ಭಾರತದ ಮೊದಲ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಲ್ಲಿ ಒಂದು. ಇದನ್ನು 1987ರಲ್ಲಿ ಸ್ಥಾಪಿಸಲಾಯಿತು. ಇದು ಹಣಕಾಸು ಕಂಪನಿಗಳ ದರ ನಿರ್ಧರಿಸಲು CRAMEL ಫ್ರೇಮ್ ವರ್ಕ್ ಅನ್ನು ಬಳಸುತ್ತದೆ.

ಇದು ಆರು ಪ್ರಮುಖ ಮಾನದಂಡ/ ನಿಯತಾಂಕಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. 1. ಬಂಡವಾಳ, 2. ಸಂಪನ್ಮೂಲ ಸಂಗ್ರಹ ಸಾಮರ್ಥ್ಯ, 3. ಆಸ್ತಿ ಗುಣಮಟ್ಟ, 4. ನಿರ್ವಹಣೆ, 5. ಸಂಪಾದನೆ, 6. ಲಿಕ್ವಿಡಿಟಿ. ಇವು ಆರು ಸಂಕ್ಷಿಪ್ತ ರೂಪವನ್ನು ನೀಡುತ್ತದೆ. ಪ್ರತಿಯೊಬ್ಬರು ತಮ್ಮ ಹಣವು ಅಪಾಯ ಮುಕ್ತ ವಾತಾವರಣದಲ್ಲಿ ಇರಬೇಕು ಎಂದು ಭಾವಿಸುತ್ತಾರೆ. CRISIL ದರ ನಿರ್ಣಯವು ಅಪಾಯ ಮುಕ್ತ ಪರಿಸರವನ್ನು ಒದಗಿಸಿಕೊಡುವುದು.

ನೀವು ನಿಶ್ಚಿತ ಠೇವಣಿಯೊಂದರಲ್ಲಿ ಹೂಡಿಕೆ ಮಾಡಿದ್ದರೆ, CRISIL ಲಿಕ್ವಿಡಿಟಿಯನ್ನು ಅಳೆಯುತ್ತದೆ. ಜೊತೆಗೆ ಅಳೆಯುವ ಪರಿಪಕ್ವತೆಯ ನವೀಕರಣ ದರವನ್ನು ಅಳೆಯುತ್ತದೆ. ತದನಂತರ ನಿಶ್ಚಿತ ಠೇವಣಿ (ಎಫ್‍ಡಿ)ಯ ದರವನ್ನು/ರೇಟಿಂಗ್‍ಅನ್ನು ಉತ್ಪಾದಿಸುತ್ತದೆ. ಇದು ನಿಶ್ಚಿತ ಠೇವಣಿಯು ಅಧಿಕ ಅಥವಾ ಕಡಿಮೆ ಅಪಾಯ ಹೊಂದಿದೆಯೇ ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದೊಂದು ಬುದ್ಧಿವಂತ ಹೂಡಿಕೆಯ ನಿರ್ಧಾರ ಕೈಗೊಳ್ಳಲು ಸಹಕರಿಸುವುದು.

How CRISIL Rating Affect Investors

CRISIL ರೇಟಿಂಗ್‍ನ ಪಾತ್ರ ಏನು?

30,000ಕ್ಕೂ ಹೆಚ್ಚಿನ ಸಂಸ್ಥೆಗಳಿಗೆ ರೇಟಿಂಗ್ ನೀಡಿದೆ. CRISIL ರೇಟಿಂಗ್ ಸಾಧನವು ಉತ್ತಮ ಮಟ್ಟದ ಸುರಕ್ಷತೆಯನ್ನು ನೀಡುತ್ತದೆ. ಇದು ಹಣಕಾಸಿನ ಸಂಸ್ಥೆ. ಸಾಲಗಾರ ಅಥವಾ ಹೂಡಿಕೆದಾರರ ನಡುವಿನ ಅಂತರಕ್ಕೆ ಸೇತುವೆಯಾಗಿ ನಿಲ್ಲುತ್ತದೆ. ಒಂದು ನಿಯತಾಂಕದ ಹೋಸ್ಟ್ ಆಧಾರದ ಮೇಲೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಮತಿ ನೀಡುತ್ತದೆ. ಎಫ್‍ಎಎಎ ಇಂದ ಎಫ್‍ಡಿ ವರೆಗಿನ ಪ್ರಮಾಣದಲ್ಲಿ ಹೂಡಿಕೆಯ ಗುಣಮಟ್ಟವನ್ನು CRISIL ರೇಟಿಂಗ್ ಸೂಚಿಸುತ್ತದೆ.

ಒಂದು ವರ್ಷದ ಎಫ್‍ಡಿಯಲ್ಲಿ CRISIL ರೇಟಿಂಗ್‍ನ ಒಂದು ನೋಟ ಇಲ್ಲಿದೆ...

* ಎನ್‍ಎಮ್: ಅರ್ಥ ಪೂರ್ಣವಲ್ಲ.
* ಎಫ್‍ಡಿ: ಪೂರ್ವನಿಯೋಜಿತ
* ಎಫ್‍ಸಿ: ಹೆಚ್ಚಿನ ಅಪಾಯ
* ಎಫ್‍ಬಿ: ಅಸಮರ್ಪಕ ಸುರಕ್ಷತೆ
* ಎಫ್‍ಎ: ಸಾಕಷ್ಟು ಸುರಕ್ಷತೆ
* ಎಫ್‍ಎಎ: ಹೆಚ್ಚಿನ ಸುರಕ್ಷತೆ
* ಎಫ್‍ಎಎಎ: ಗರಿಷ್ಠ ಸುರಕ್ಷತೆ

ದರ ಪ್ರಮಾಣದಲ್ಲಿ ಈ ರೀತಿಯ ಸ್ಪಷ್ಟತೆ ಕಂಡುಬಂದರೆ, ನೀವು ಸುರಕ್ಷಿತವಾದ ಶ್ರೇಯಾಂಕ ಹೊಂದಿರುವ ಎಫ್‍ಡಿ ಅನ್ನು ಆರಿಸಬೇಕು. ಅದು ಎಫ್‍ಎಎ ಅಥವಾ ಎಫ್‍ಎಎಎ ಆಗಿರುತ್ತದೆ. ಹೀಗೆ ಮಾಡುವುದರಿಂದ ಸೂಕ್ತ ಸಮಯದಲ್ಲಿ ಉತ್ತಮ ಲಾಭವನ್ನು ಹೊಂದಬಹುದು ಎಂದು ಭರವಸೆ ನೀಡುವುದು.

CRISIL ರೇಟಿಂಗ್ ಹೂಡಿಕೆದಾರರಿಗೆ ಹೇಗೆ ಸಹಾಯ ಮಾಡುತ್ತದೆ?

* ಹೂಡಿಕೆದಾರರಾಗಿ, ಎಫ್‍ಡಿಯಂತಹ ಬಂಡವಾಳ ಹೂಡಿಕೆಯನ್ನು ಆಯ್ಕೆ ಮಾಡುವಾಗ ಲಭ್ಯವಿರುವ ಆಯ್ಕೆಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ವಿವಿಧ ವಿತರಕರನ್ನು ಹೋಲಿಸಲು CRISIL ರೇಟಿಂಗ್ ನಿಮಗೆ ಸಹಾಯ ಮಾಡುತ್ತದೆ. ಮರುಪಾವತಿ, ಲಿಕ್ವಿಡಿಟಿ ಮತ್ತು ನಿಧಿಸಂಗ್ರಹ ಮೂಲಗಳಿಗೆ ಸಂಬಂಧಿಸಿದ ವಿತರಕರ ದಾಖಲೆಯ ಕುರಿತು ರೇಟಿಂಗ್ ಒದಗಿಸುತ್ತದೆ.

* ಪ್ರತಿ ಬಂಡವಾಳ ಆಯ್ಕೆಗೆ ಸಂಬಂಧಿಸಿದ ಅಪಾಯವನ್ನು ಅಳತೆ ಮಾಡಲು ಮತ್ತು ನಿರ್ವಹಣೆ ಮಾಡಲು CRISIL ರೇಟಿಂಗ್ ಸಹಾಯ ಮಾಡುತ್ತದೆ. ಹೂಡಿಕೆದಾರರಾಗಿ, ನಿಮ್ಮ ವಿತರಕರಿಗೆ ಒತ್ತಡವನ್ನುಂಟು ಮಾಡುವುದಿಲ್ಲ ಎನ್ನುವುದು ತಿಳಿದು ಬಂದಾಗ, ರಿಟರ್ನ್‍ಗಳ ಹಣಕಾಸಿನ ಅರಿವು ಹೇಗಿದೆ? ಅದು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆಯೇ? ಎನ್ನುವುದರ ಕುರಿತು ವಿಶ್ವಾಸಾರ್ಹ ನಿರ್ಣಯ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

* ಬಂಡವಾಳ ಆಯ್ಕೆಗಳ ರಚನೆ ಅಗಾಧವಾಗಿರಬಹುದು. ಆದರೆ ಬಡ್ಡಿದರ, ಮರುಪಾವತಿಯ ಕ್ರಮಬದ್ಧತೆ ಮತ್ತು ಹಣಕಾಸು ಸಂಸ್ಥೆಯ ಪಾರದರ್ಶಕತೆ ಮುಂತಾದ ವಿವಿಧ ನಿಯತಾಂಕಗಳನ್ನು ಹೋಲಿಸುವುದು ಕಷ್ಟಕರವಾಗಿರುತ್ತದೆ. ಈ ವಿಚಾರದಲ್ಲಿ CRISIL ರೇಟಿಂಗ್ ಸಮಗ್ರವಾಗಿದೆ. ಇದು ಹೂಡಿಕೆಯ ಸಲಕರಣೆಗಳ ಕುರಿತು ನಿಖರವಾದ ಅವಲೋಕನವನ್ನು ನೀಡುತ್ತದೆ. ಅಲ್ಲದೆ ಸುಲಭವಾಗಿ ತಿಳಿದುಕೊಳ್ಳುವ ನಿರ್ಧಾರವನ್ನು ನಿಮಗೆ ನೀಡುತ್ತದೆ.

ಹಾಗಾಗಿ, ಎಫ್‍ಡಿಯಂತಹ ಹೂಡಿಕೆಯನ್ನು ಕೈಗೊಳ್ಳಲು CRISIL ರೇಟಿಂಗ್‍ನ ಪರಿಣಾಮವನ್ನು ನೀವು ನೋಡಬಹುದು. ಎಫ್‍ಡಿ ಕ್ಯಾಲ್ಕ್ಯುಲೇಟರ್‍ಅನ್ನು ಬಳಸುವುದರ ಮೂಲಕ ಉತ್ತಮ ನಿಶ್ಚಿತ ಠೇವಣಿಯನ್ನು ತೆಗೆದುಕೊಳ್ಳುವ ಒಂದು ಉತ್ತಮ ವಿಧಾನವಾಗಿದೆ. ಬಜಾಜ್ ಫೈನಾನ್ಸ್ ತನ್ನ ಸ್ಥಿರ ನಿಕ್ಷೇಪಗಳೊಂದಿಗೆ ಶೇ. 8.75ರಷ್ಟು ಬಡ್ಡಿದರವನ್ನು ನೀಡುತ್ತದೆ ಮತ್ತು CRISIL‍ನ ಎಫ್‍ಎಎಎ/ಸ್ಥಿರ ರೇಟಿಂಗ್‍ಅನ್ನು ಸಹ ಹೊಂದಿದೆ. ಕೇವಲ ಹೂಡಿಕೆಯ ಮೊತ್ತ, ಬಡ್ಡಿದರ ಮತ್ತು ಟೆನ್ಯೂರ್‍ಅನ್ನು ನಮೂದಿಸಿ. ಜೊತೆಗೆ ನಿಮ್ಮ ಹಣವು ಹೇಗೆ ಲಾಭ ಹೊಂದುವುದು ಎನ್ನುವುದನ್ನು ತಿಳಿಯಲು ಸಂಚಿತ ಮತ್ತು ಸಂಚಿತ ಬಡ್ಡಿ ಪಾವತಿಗಳ ನಡುವೆ ಆಯ್ಕೆ ಮಾಡಿ.

ಬಜಾಜ್ ಹಣಕಾಸು ಸ್ಥಿರ ಠೇವಣಿ ಹೂಡಿಕೆಯಲ್ಲಿ ಆಸಕ್ತಿ ಇದ್ದರೆ ಸ್ಥಿರವಾದ ಠೇವಣಿ ಅರ್ಜಿ ಇರುವ ಪುಟಕ್ಕೆ ಭೇಟಿ ನೀಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X