ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಶುಲ್ಕದ ಹೊರೆ ಬಗ್ಗೆ ಮಾರುಕಟ್ಟೆ ತಜ್ಞರ ವಿಶ್ಲೇಷಣೆ

ಉಳಿತಾಯ ಖಾತೆದಾರರು ಬ್ಯಾಂಕ್ ಗಳಿಗೆ ಹಣ ಜಮೆ ಮಾಡುವುದಕ್ಕೆ, ಹಣ ತೆಗೆದುಕೊಳ್ಳುವುದಕ್ಕೂ ಮಿತಿ ಹಾಕಿ, ಅದರ ಮೇಲೆ ಶುಲ್ಕ ವಿಡಿಸಲು ಬ್ಯಾಂಕ್ ಗಳು ಮುಂದಾಗಿವೆ. ಈ ಬಗ್ಗೆ ಮಾರುಕಟ್ಟೆ ತಜ್ಞರಾದ ಕೆಜಿ ಕೃಪಾಲ್ ವಿಶ್ಲೇಷಣೆ ಮಾಡಿದ್ದಾರೆ

By ಕೆಜಿ ಕೃಪಾಲ್
|
Google Oneindia Kannada News

ನಾವು ಪ್ರಶ್ನಿಸುವ ಗುಣವನ್ನೇ ಕಳೆದುಕೊಂಡು ಬಿಟ್ಟಿದ್ದೀವಿ. ಹಾಲಿನ ಬೆಲೆ ಜಾಸ್ತಿ ಮಾಡ್ತೀವಿ, ವಿದ್ಯುತ್ ದರ ಯೂನಿಟ್ ಗೆ ಇಷ್ಟು ಜಾಸ್ತಿ ಮಾಡ್ತೀವಿ, ಬ್ಯಾಂಕ್ ನಲ್ಲಿ ಹಣ ಕಟ್ಟುವುದಕ್ಕೆ-ತೆಗೆಯುವುದಕ್ಕೆ ಶುಲ್ಕ ಹಾಕ್ತೀವಿ..ಉಹುಂ, ಏನೇ ಹೇಳಿದರೂ ಹೂಂಗುಟ್ಟಿ ಸುಮ್ಮನಾಗ್ತೀವಿ ವಿನಾ, ಏಕೆ-ಎತ್ತ ಎಂಬ ಪ್ರಶ್ನೆಯೂ ಕೇಳಲ್ಲ. ನಮ್ಮ ವಿರೋಧವೂ ವ್ಯಕ್ತಪಡಿಸಲ್ಲ.

ಇದು ನಿಮಗೆ ಗೊತ್ತಿರಲಿ, ಬ್ಯಾಂಕಿಂಗ್ ವಲಯದಲ್ಲಿ ಸ್ಪರ್ಧಾತ್ಮಕವಾದ ರೀತಿಯಲ್ಲಿ ಸಾಲ ನೀಡುವ ಪ್ರಕ್ರಿಯೆಗಳು ಕಂಡುಬರುತ್ತಿವೆ. ಬಡ್ಡಿದರ ಮೊಟಕುಗೊಳಿಸುವುದಕ್ಕೆ ಅಬ್ಬರದ ಪ್ರಚಾರ ನೀಡುತ್ತಿದ್ದಾರೆ. ಮತ್ತೊಂದೆಡೆ ಉಳಿತಾಯ ಖಾತೆಗಳ ಮೇಲೆ ಹಣ ಹಿಂತಿರುಗಿ ಪಡೆದಲ್ಲಿ ಶುಲ್ಕ ವಿಧಿಸುವ ಅನೈತಿಕ ಪ್ರಕ್ರಿಯೆಗಳಿಗೆ ಮುಂದಾಗಿವೆ.[ಏಪ್ರಿಲ್ 01ರಿಂದ ದೇಶ ಬದಲಾಗುತ್ತಿದೆ, ಏನೆಲ್ಲ ವ್ಯವಸ್ಥೆ ಬದಲು?]

ಉಳಿತಾಯ ಖಾತೆಗಳನ್ನು ಸಾಮಾನ್ಯವಾಗಿ ಸಣ್ಣ ಹಾಗೂ ಮಾಧ್ಯಮ ವರ್ಗದ ನಾಗರಿಕರು ಹೊಂದಿರುತ್ತಾರೆ. ಕೆಲವೊಮ್ಮೆ ಈ ಖಾತೆಯಿಂದ ಹಣ ವಿತ್ ಡ್ರಾ ಮಾಡಬೇಕಾದಲ್ಲಿ ಹತ್ತಾರು ಬಾರಿ ಯೋಚಿಸುತ್ತಾರೆ. ಏಕೆಂದರೆ ಬ್ಯಾಂಕ್ ನಲ್ಲೇ ಇದ್ದರೆ ಒಂದಿಷ್ಟು ಬಡ್ಡಿ ಬರಬಹುದೇನೋ ಎಂಬ ನಿರೀಕ್ಷೆ. ಈಗ ಏನಾಗಿದೆಯೆಂದರೆ ಆ ಬಡ್ಡಿಯ ಪ್ರಮಾಣವನ್ನು ಕೂಡ ತಗ್ಗಿಸಲು ಮುಂದಾಗಿವೆ ಬ್ಯಾಂಕ್ ಗಳು.

ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಶುಲ್ಕ ಬೀಳುತ್ತೆ

ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಶುಲ್ಕ ಬೀಳುತ್ತೆ

ಇನ್ನು ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಹೋದಾಗ ಹೆಚ್ಚಿನ ಬಾರಿ ನೋ ಕ್ಯಾಶ್ ಎಂದು ಬೋರ್ಡ್ ನೇತಾಡುತ್ತಿರುತ್ತದೆ. ಹಣದ ಅವಶ್ಯಕತೆ ಕಾರಣಕ್ಕೆ ಮತ್ತೊಂದು ಬ್ಯಾಂಕ್ ನ ಎಟಿಎಂನಲ್ಲಿ ಡ್ರಾ ಮಾಡಿದರೆ ಅಲ್ಲಿ ಅದಕ್ಕೆ ಶುಲ್ಕ ವಿಧಿಸುತ್ತಾರೆ. ಇದು ಬ್ಯಾಂಕ್ ಗಳು ಒಂದು ರೀತಿಯ ಕಾರ್ಟೆಲ್ ಮಾಡಿಕೊಂಡಿರುವರೇನೋ ಎಂಬಂತೆ ಅನುಮಾನ ಮೂಡುವುದು ಸಹಜ.

ಲೇಟ್ ಫೀ ಎಂಬ ಭಾರ

ಲೇಟ್ ಫೀ ಎಂಬ ಭಾರ

ಕೆಲವೊಮ್ಮೆ ಬೇರೆ ಶಾಖೆಯಲ್ಲಿ ಹಣ ಡ್ರಾ ಮಾಡಿದಾಗಲೂ ಶುಲ್ಕ ಹಾಕುತ್ತಾರೆ. ಕ್ರೆಡಿಟ್ ಕಾರ್ಡ್ ಪೇಮೆಂಟ್ ಚೆಕ್ ಗಳು ಹೆಚ್ಚಿನ ಬಾರಿ ಕಲೆಕ್ಷನ್ ಲೇಟಾಗಿ ಅಗಾಧ ಪ್ರಮಾಣದ ಲೆಟ್ ಫೀ ಸಹ ವಸೂಲು ಮಾಡುವರು. ಇಂತಹ ಅನೈತಿಕ ಶುಲ್ಕಗಳನ್ನು ಬ್ಯಾಂಕ್ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬಹುದಾಗಿದೆ. ಆದರೆ ಇದು ಪ್ರತಿ ಬಾರಿಯೂ ಮುಂದುವರೆದಾಗ ಶಪಿಸುತ್ತಾ ಸುಮ್ಮನಿರುವ ನಿದರ್ಶನಗಳು ಉಂಟು.

ಗ್ರಾಹಕರು ದೂರು ನೀಡಲು ಒಂಬಡ್ಸ್ ಮನ್

ಗ್ರಾಹಕರು ದೂರು ನೀಡಲು ಒಂಬಡ್ಸ್ ಮನ್

ಬ್ಯಾಂಕಿಂಗ್ ವಲಯದ ತಗಾದೆಗಳು, ತೊಂದರೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ 'ಒಂಬಡ್ಸ್ ಮನ್' ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಪ್ರಕಾರ ಗ್ರಾಹಕರ ದೂರು ಬಂದಾಗ ಸಂಬಂಧಪಟ್ಟ ಬ್ಯಾಂಕ್ ನ ಅಧಿಕಾರಿಗಳಿಂದ ವಿವರಣೆ ಪಡೆದು ಪರಿಹಾರ ಒದಗಿಸುವುದಾಗಿದೆ. ಬ್ಯಾಂಕಿಂಗ್ ವಲಯದ ಉಪಟಳವನ್ನು ಪರಿಹರಿಸಿಕೊಳ್ಳಲು 'ಒಂಬಡ್ಸ್ ಮನ್' ಒಂದು ಉತ್ತಮ ವೇದಿಕೆಯಾಗಿದೆ.

ಜನರ ಜೇಬಿಗೆ ಕೈ ಹಾಕಿವೆ

ಜನರ ಜೇಬಿಗೆ ಕೈ ಹಾಕಿವೆ

ಬ್ಯಾಂಕ್ ಗಳು ಕ್ವಾಲಿಟಿ ಬಾರೋವರ್ಸ್ ಗಳಿಗೆ ಬೇಟೆಯಾಡುತ್ತಿದ್ದು, ಸಾಲ ಪಡೆಯುವವರ ಸಂಖ್ಯೆ ಕ್ಷೀಣವಾಗುತ್ತಿದೆ. ಬ್ಯಾಂಕ್ ಗಳಲ್ಲಿ ಹಣ ತುಂಬಿ ತುಳುಕಾಡುತ್ತಿರುವ ಕಾರಣ ಬ್ಯಾಂಕ್ ಬಡ್ಡಿ ದರ ಇಳಿಕೆಯಾಗುತ್ತಿದೆ. ಇನ್ನು ಖಜಾನೆಯಲ್ಲಿ ತುಂಬಿರುವ ಹಣವನ್ನು ದುಡಿಯಲು ತೊಡಗಿಸಲು ಸಾಧ್ಯವಾಗದ ಕಾರಣ ಬ್ಯಾಂಕ್ ಗಳು ಜನಸಾಮಾನ್ಯರ ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ಮಿನಿಮಮ್ ಬ್ಯಾಲೆನ್ಸ್, ವಿತ್ ಡ್ರಾವಲ್ ಫೀಸ್ ಮುಂತಾದವುಗಳನ್ನು ವಿಧಿಸಿ ತಮ್ಮ ಗಳಿಕೆಯ ದಾರಿ ಕಂಡುಕೊಳ್ಳುತ್ತಿವೆ.

ಒಂದು ಲಕ್ಷ ಕೋಟಿ ರುಪಾಯಿ ಬ್ಯಾಡ್ ಲೋನ್ಸ್ ಹೆಚ್ಚಳ

ಒಂದು ಲಕ್ಷ ಕೋಟಿ ರುಪಾಯಿ ಬ್ಯಾಡ್ ಲೋನ್ಸ್ ಹೆಚ್ಚಳ

ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಹಿಂದಿನ ವರ್ಷ, ಮಾರ್ಚ್ 2016ರಲ್ಲಿ 5.02 ಲಕ್ಷ ಕೋಟಿ ಬ್ಯಾಡ್ ಲೋನ್ಸ್ ಇದ್ದು, ಮಾರ್ಚ್ 2017ರಲ್ಲಿ ಅದು 6.07 ಲಕ್ಷ ಕೋಟಿಗೆ ಏರಿಕೆ ಕಂಡಿದ್ದು, ಸುಮಾರು ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ಬ್ಯಾಡ್ ಲೋನ್ಸ್
ಏರಿಕೆಯಾಗಿದ್ದರೂ ಷೇರುಪೇಟೆಯಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಏರಿಕೆ ಕಾಣುತ್ತಿವೆ.

ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಅಂಡ್ ಟೋಬ್ರೋ ಉದಾಹರಣೆ

ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಅಂಡ್ ಟೋಬ್ರೋ ಉದಾಹರಣೆ

ಷೇರುಪೇಟೆಯಲ್ಲಿ ಷೇರಿನ ದರಕ್ಕೂ, ಆ ಕಂಪೆನಿಯ ಸಾಧನೆಗೂ ಸಂಬಂಧವಿಲ್ಲ. ಕೇವಲ ಬಾಹ್ಯ ಕಾರಣಗಳಿಗೆ ಪೇಟೆ ಸ್ಪಂದಿಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರು ರು.1,200ರ ಗಡಿ ದಾಟಲು ಸುಮಾರು 8 ವರ್ಷ ಬೇಕಾಯಿತು. ಲಾರ್ಸನ್ ಅಂಡ್ ಟೋಬ್ರೋ ಕಂಪೆನಿಯ ಷೇರು ರು.1600 ದಾಟಲು ಕೆಲವು ವರ್ಷಗಳೇ ಬೇಕಾದವು. ಅಂದರೆ ಸಾಧನೆ ಆಧಾರಿತ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಲ್ಲಿ, ಷೇರಿನ ಬೆಲೆ ಕುಸಿದರೂ ಅದು ಪುಟಿದೇಳುವ ಸಾಧ್ಯತೆ ಹೆಚ್ಚು. ಆದರೆ ಕಳಪೆ, ಟೊಳ್ಳು- ಜೊಳ್ಳು, ಕೆಳಮಧ್ಯಮ ಶ್ರೇಣಿಯ ಕಂಪೆನಿಗಳ ಷೇರಿನ ಬೆಲೆಗಳು ಏರಿಕೆಯಲ್ಲಿದ್ದಾಗ ಕೇವಲ ಪ್ರಾಫಿಟ್ ಬುಕಿಂಗ್ ಗೆ ಮಾತ್ರ ಬಳಸಿಕೊಳ್ಳುವುದು ಉತ್ತಮ.

ಡೆರಿವೇಟಿವ್ಸ್ ವಿಭಾಗದಿಂದ ಒಂದು ವರ್ಷ ನಿಷೇಧ

ಡೆರಿವೇಟಿವ್ಸ್ ವಿಭಾಗದಿಂದ ಒಂದು ವರ್ಷ ನಿಷೇಧ

ರಿಲಯನ್ಸ್ ಇಂಡಸ್ಟ್ರೀಸ್ ಷೇರಿಗೆ ಡೆರಿವೇಟಿವ್ಸ್ ವಿಭಾಗದಿಂದ ಒಂದು ವರ್ಷ ನಿಷೇಧ ಹೇರಿದ 'ಸೆಬಿ' ಕ್ರಮಕ್ಕೆ ಸುಮಾರು 60 ರುಪಾಯಿಗಳ ಕುಸಿತ ಕಂಡು, ನಂತರ ಆ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದರೂ ಬೆಲೆ ಪುಟಿದೆದ್ದು ನೂತನ ದಾಖಲೆ ನಿರ್ಮಿಸಿರುವುದು ವಿಸ್ಮಯಕಾರಿ ಅಂಶವಾಗಿದೆ. ಇದಕ್ಕೆ ಮುಖ್ಯ ಕಾರಣ ಪೇಟೆಯ ಕಡೆ ಹಣದ ಒಳಹರಿವು ಅತಿ ಹೆಚ್ಚಾಗಿ, ಬೇಡಿಕೆ ಹೆಚ್ಚಿಸಿ, ಬೆಲೆಗಳು ಗಗನಕ್ಕೇರುವಂತೆ ಮಾಡಿದೆ.

ಇಂಡೆಕ್ಸ್ ಗಳು ಗಗನಕ್ಕೇರಿರುವಾಗ ಎಚ್ಚರ ಅಗತ್ಯ

ಇಂಡೆಕ್ಸ್ ಗಳು ಗಗನಕ್ಕೇರಿರುವಾಗ ಎಚ್ಚರ ಅಗತ್ಯ

ಎಲ್ಲಾ ವಲಯದ ಇಂಡೆಕ್ಸ್ ಗಳು ಗಗನಕ್ಕೇರಿರುವಾಗ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕೈಲಿ ಹಣವಿದ್ದರೆ ಅವಕಾಶಗಳು ಲಭ್ಯವಾಗುತ್ತವೆ ಎನ್ನುವುದಕ್ಕೆ ಇತ್ತೀಚಿನ ಕೆಲವು ಫಾರ್ಮಾ ವಲಯದ ಕಂಪೆನಿಗಳಾದ ಅಲೆಂಬಿಕ್, ಕ್ಯಾಡಿಲ್ಲ ಹೆಲ್ತ್ , ಸಾರ್ವಜನಿಕ ವಲಯದ ಕಂಪೆನಿಗಳಾದ ಆರ್ಇಸಿ, ಬಿಎಚ್ಇಎಲ್, ಬಿಇಎಲ್ ಹಾಗೂ ಇಂಜಿನಿಯರಿಂಗ್, ಮ್ಯಾನುಫ್ಯಾಕ್ಚರಿಂಗ್ ಕಂಪೆನಿಗಳು ವೈವಿಧ್ಯಮಯ ಕಾರಣಗಳಿಂದ ಲಾಭ ಗಳಿಕೆ ಅವಕಾಶ ಕಲ್ಪಿಸಿಕೊಟ್ಟಿರುವ ಉಧಾಹರಣೆಗಳಿವೆ. ವ್ಯಾಲ್ಯೂ ಪಿಕ್ -ಪ್ರಾಫಿಟ್ ಬುಕ್ ಶೈಲಿಯ ಚಟುವಟಿಕೆಯಿಂದ ಬಂಡವಾಳ ಸುರಕ್ಷತೆಯೊಂದಿಗೆ ಲಾಭ ಗಳಿಕೆಯೂ ಸಾಧ್ಯವೆಂದು ಇವು ದೃಢೀಕರಿಸಿವೆ.

ಕೆಜಿ ಕೃಪಾಲ್ ಅವರ ಸಂಪರ್ಕ ಮಾಹಿತಿ

ಕೆಜಿ ಕೃಪಾಲ್ ಅವರ ಸಂಪರ್ಕ ಮಾಹಿತಿ

ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರಶ್ನೆ, ಗೊಂದಲ, ಸಲಹೆಗಳಿಗೆ ಕೆಜಿ ಕೃಪಾಲ್ ಅವರನ್ನು ಸೋಮವಾರದಿಂದ ಬುಧವಾರದವರೆಗೆ ಸಂಜೆ 4.30ರ ನಂತರ ಸಂಪರ್ಕಿಸಬಹುದು. ಮೊಬೈಲ್ ಫೋನ್ ಸಂಖ್ಯೆ 9886313380.

English summary
After demonetisation, 8th November 2016, how Banks in India busy exploiting Common man through various charges. Stock market expert, Oneindia Kannada columnist K J Kripal explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X