ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್‌ಗಳು ಸರ್ವಿಸ್ ಚಾರ್ಜ್ ವಿಧಿಸುವಂತಿಲ್ಲ: ಕೇಂದ್ರದ ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಜುಲೈ 4: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಸರ್ವಿಸ್ ಚಾರ್ಜ್ ವಿಧಿಸುವಂತಿಲ್ಲ ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ, ಸರ್ವರ್‌ಗೆ ಗ್ರಾಹಕ ಸ್ವ ಇಚ್ಛೆಯಿಂದ ನೀಡುವ ಟಿಪ್ಸ್ ಹಣವನ್ನು ಹೋಟೆಲ್‌ನವರು ಬಿಲ್‌ನಲ್ಲೇ ವಸೂಲಿ ಮಾಡುವುದು ತಪ್ಪಲಿದೆ.

ಹೋಟೆಲ್‌ನವರು ಸೇವಾ ಶುಲ್ಕ ವಿಧಿಸುತ್ತಾರೆ ಎಂದು ದೇಶವ್ಯಾಪಿ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಇಂದು ಆದೇಶ ಹೊರಡಿಸಿದ್ದು, ಯಾವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ಸರ್ವಿಸ್ ಚಾರ್ಜ್ ಸೇರಿಸುವಂತಿಲ್ಲ ಎಂದು ತಿಳಿಸಿದೆ. ಹಾಗೆಯೇ, ಈ ಸಂಬಂಧ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ.

ಹೋಟೆಲ್‌ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ?ಹೋಟೆಲ್‌ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ?

ಈ ಆದೇಶದ ಮೂಲಕ ಸರ್ವಿಸ್ ಚಾರ್ಜ್ ವಿಚಾರದಲ್ಲಿ ಹೋಟೆಲ್‌ನವರು ಮತ್ತು ಗ್ರಾಹಕರಿಗೆ ಇದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

Hotels Cannot Impose Service Charge or Tips on Customers, Says Govts New Guidelines

ಹೋಟೆಲ್‌ನವರು ಮತ್ತು ರೆಸ್ಟೋರೆಂಟ್‌ಗಳು ಸರ್ವಿಸ್ ಚಾರ್ಜ್ ವಿಧಿಸಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಹಿಂದೆಯೇ ತಿಳಿಸಿತ್ತಾದರೂ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಿರಲಿಲ್ಲ. ಹೀಗಾಗಿ, ಸರ್ವಿಸ್ ಚಾರ್ಜ್ ಕಾನೂನಾತ್ಮಕವಾಗಿ ಜಾರಿಯಾಗುವವರೆಗೂ ಅದನ್ನು ಮುಂದುವರೆಸಲು ಹೋಟೆಲ್‌ಗಳ ಸಂಘಟನೆ ನಿರ್ಧಾರ ತೆಗೆದುಕೊಂಡಿತ್ತು. ಈಗ ಸಿಸಿಪಿಎ ಹೊರಡಿಸಿರುವ ಮಾರ್ಗಸೂಚಿಗಳು ಗೊಂದಲಕ್ಕೆ ತೆರೆ ಎಳೆದಿವೆ.

ಹೊಸ ವೇತನ ಸಂಹಿತೆ: ಕೆಲಸ, ಸಂಬಳ, ಪಿಎಫ್‌ನಲ್ಲಿ ಆಗುವ ಬದಲಾವಣೆಗಳುಹೊಸ ವೇತನ ಸಂಹಿತೆ: ಕೆಲಸ, ಸಂಬಳ, ಪಿಎಫ್‌ನಲ್ಲಿ ಆಗುವ ಬದಲಾವಣೆಗಳು

ಸಿಸಿಪಿಎ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಬಹಳ ಸ್ಪಷ್ಟವಾಗಿ ಸರ್ವಿಸ್ ಚಾರ್ಜ್ ವಿಚಾರದ ಬಗ್ಗೆ ತಿಳಿಸಿದೆ. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ನೀಡುವಂತೆ ಕಡ್ಡಾಯಪಡಿಸಿದಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರು ದಾಖಲಿಸುವ ಅವಕಾಶ ಇರುತ್ತದೆ.

ಹಾಗೆಯೇ, ಇ-ದಾಖಿಲ್ (e-daakhil) ಪೋರ್ಟಲ್ ಮೂಲಕವೂ ಗ್ರಾಹಕರು ದೂರು ದಾಖಲಿಸಬಹುದು. ಬಹಳ ತ್ವರಿತವಾಗಿ ಮತ್ತು ಸಮರ್ಪಕವಾಗಿ ಪರಿಹಾರ ಪಡೆಯುವ ಸಾಧ್ಯತೆ ಇದೆ.

Hotels Cannot Impose Service Charge or Tips on Customers, Says Govts New Guidelines

ಮಾರ್ಗಸೂಚಿಯಲ್ಲಿ ಏನಿದೆ?
"ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಕೂಡ ಬಿಲ್‌ನಲ್ಲಿ ಸರ್ವಿಸ್ ಚಾರ್ಜ್ ಸೇರಿಸುವಂತಿಲ್ಲ," ಎಂದು ಸ್ಪಷ್ಟವಾಗಿ ಬರೆದಿದೆ. ಬೇರೆ ಹೆಸರಿನಲ್ಲೂ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ ಎಂದು ನಿರ್ದಿಷ್ಟಪಡಿಸಿದೆ.

ಸರ್ವಿಸ್ ಚಾರ್ಜ್ ಕೊಡದ ಗ್ರಾಹಕರಿಗೆ ಪ್ರವೇಶ ನಿರಾಕರಿಸುವುದು, ಅಥವಾ ಸರಿಯಾದ ಸೇವೆ ನೀಡದೇ ಇರುವುದು ಇದ್ಯಾವುದನ್ನೂ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮಾಡುವಂತಿಲ್ಲ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಗ್ರಾಹಕರು ಇಚ್ಛಿಸಿದಲ್ಲಿ ಮಾತ್ರ
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಸೇವೆ ನೀಡುವ ಸಿಬ್ಬಂದಿಗೆ ಗ್ರಾಹಕ ಸ್ವ ಇಚ್ಛೆಯಿಂದ ಕೊಡುವ ಹಣವೇ ಟಿಪ್ಸ್. ಈ ಟಿಪ್ಸ್ ಹಣವನ್ನೇ ಹೋಟೆಲ್‌ನವರು ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಪಡೆಯುತ್ತಾರೆ. ಬಿಲ್ ಜೊತೆಗೇ ಈ ಸರ್ವಿಸ್ ಚಾರ್ಜ್ ಸೇರಿಸಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ. ಅಂದರೆ, ಗ್ರಾಹಕ ಟಿಪ್ಸ್ ಜೊತೆಗೆ ಸರ್ವಿಸ್ ಚಾರ್ಜ್ ಅನ್ನೂ ಕೊಡುವಂತಾಗುತ್ತದೆ. ಇದು ಹೋಟೆಲ್‌ನವರು ಗ್ರಾಹಕರಿಂದ ಮಾಡುತ್ತಿರುವ ಸುಲಿಗೆ ಎಂದು ಹಲವು ಜನರು ದೂರಿತ್ತದಿಂದ ಕೇಂದ್ರ ಸರಕಾರ ಈಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಇವತ್ತಿನ‌ Top 5 ರಾಜಕೀಯ ಸುದ್ದಿಗಳತ್ತ ಒಂದು‌ ನೋಟ | OneIndia Kannada

English summary
The government has barred hotels and restaurants from forcing customers to pay service charge as part of the food bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X