• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ

|

ನವದೆಹಲಿ, ಆಗಸ್ಟ್‌ 28: ಹೊಸ ಮೋಟಾರ್ ಸೈಕಲ್ ಮಾರುಕಟ್ಟೆಗೆ ತರಲು ಹೋಂಡಾ ಸಿದ್ಧತೆ ನಡೆಸಿದೆ. ಈಗಾಗಲೇ ಹೋಂಡಾ ಕಂಪನಿಯು ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಒಳ್ಳೆಯ ಹಿಡಿತವನ್ನುಹೊಂದಿದ್ದು, ಬೈಕ್ ಅಲ್ಲದೆ ಸ್ಕೂಟರ್ ವಿಭಾಗದಲ್ಲೂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮತ್ತು ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಹೋಂಡಾ ಹೊಸ ಬೈಕ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಪ್ರಮುಖ ವಿಚಾರ ಏನಪ್ಪಾ ಅಂದ್ರೆ ಈ ಹೊಸ ಹೋಂಡಾ ಬೈಕ್‌ ತುಂಬಾ ಅಗ್ಗವಾಗಿರಲಿದೆ.

ಹೊಸ ಆವೃತ್ತಿಯ ಬಜಾಜ್ KTM 250 ಡ್ಯೂಕ್‌ ಬೈಕ್ ಬಿಡುಗಡೆ

ಹೋಂಡಾದ ಹೊಸ ಬೈಕು ಅದರ ಸಿಡಿ 110 ವ್ಯಾಪ್ತಿಯಲ್ಲಿರುತ್ತದೆ. ಪ್ರಸ್ತುತ, ಸಿಡಿ 110 ಶ್ರೇಣಿಯು ಕಂಪನಿಯ ಅತ್ಯಂತ ಒಳ್ಳೆ ಬೈಕುಗಳಲ್ಲಿ ಒಂದಾಗಿದ್ದು , ದೆಹಲಿಯ ಸಿಡಿ 100 ರ ಎಕ್ಸ್ ಶೋ ರೂಂ ಬೆಲೆ 64,505 ರೂಪಾಯಿ. ಇಂತಹ ವೇಳೆಯಲ್ಲಿ ಹೋಂಡಾದ ಹೊಸ ಮೋಟಾರ್‌ ಸೈಕಲ್ ಬೆಲೆ 60 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು.

ಹೀರೋ ಸ್ಪ್ಲೆಂಡರ್, ಟಿವಿಎಸ್ ರೇಡಿಯನ್, ಬಜಾಜ್ ಸಿಟಿ 100, ಟಿವಿಎಸ್ ವಿಕ್ಟರ್‌ಗೆ ಹೋಲಿಸಿದರೆ ಹೋಂಡಾದ ಹೊಸ ಬೈಕು ಕಡಿಮೆಗೆ ಸಿಗಬಹುದು ಎನ್ನಲಾಗಿದೆ. ಹೆಚ್ಚಿನ ಗ್ರಾಹಕರನ್ನು ಪಡೆಯಲು ಕಂಪನಿಯು ತನ್ನ ಈ ಹೊಸ ಬೈಕ್‌ ಅನ್ನು ಗುರಿಯಾಗಿರಿಸಿದೆ.

English summary
Honda motorcycle company will bring cheap bike price may be less than Rs 60,000. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X