ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲಿ ಹೋಂಡಾ ಇಂಡಿಯಾ ವಾಹನಗಳ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಡಿ. 20: ಜಪಾನ್ ಮೂಲದ ವಾಹನ ಉತ್ಪಾದನಾ ಸಂಸ್ಥೆ ಹೋಂಡಾದ ಇಂಡಿಯಾ ಘಟಕವು 2021ರಲ್ಲಿ ಎಲ್ಲಾ ಬಗೆಯ ವಾಹನಗಳ ಬೆಲೆ ಏರಿಕೆ ಮಾಡಲು ಮುಂದಾಗಿರುವುದಾಗಿ ಘೋಷಣೆ ಮಾಡಿದೆ. ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್ ಸಿ ಐಎಲ್) ಸೆಡಾನ್ ಅಮೇಜ್ ನಿಂದ ಪ್ರೀಮಿಯಂ ಎಸ್ ಯುವಿ ಸಿಆರ್ -ವಿ ತನಕ ವಿವಿಧ ಬಗೆಯ ವಿವಿಧ ಶ್ರೇಣಿಯ ವಾಹನಗಳನ್ನು ಮಾರುಕಟ್ಟೆಯಲ್ಲಿ ಹೊಂದಿದೆ.

ಹೋಂಡಾ ಅಮೇಜ್ ಬೆಲೆ ಸದ್ಯ 6.17 ಲಕ್ಷ ರು ಬೆಲೆ ಇದ್ದರೆ, ಸಿಆರ್ -ವಿ ಆರಂಭಿಕ ಬೆಲೆ 28.71 ಲಕ್ಷ ರು (ದೆಹಲಿ ಎಕ್ಸ್ ಶೋರೂಮ್) ಇದೆ. ಉತ್ಪದನಾ ವೆಚ್ಚ ಏರಿಕೆ ಕಂಡಿರುವುದರಿಂದ ವಾಹನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಡೀಲರ್ ಹೇಳಿದ್ದಾರೆ.

5,000 ರೂಪಾಯಿಗೆ Honda Jazz ಕಾರು ಬುಕ್ ಮಾಡಿ5,000 ರೂಪಾಯಿಗೆ Honda Jazz ಕಾರು ಬುಕ್ ಮಾಡಿ

ಆಗಸ್ಟ್ ತಿಂಗಳಿನಲ್ಲಿ ಹೋಂಡಾ ಇಂಡಿಯಾ ಲಿಮಿಟೆಡ್ ತನ್ನ ಪ್ರಿಮಿಯಂ ಹ್ಯಾಚ್ ಬ್ಯಾಕ್ ಜಾಜ್ (Jazz) ಕಾರಿನ ಪ್ರೀ ಲಾಂಚ್ ಬುಕಿಂಗ್ ಆರಂಭಿಸಿ, 5,000 ರೂಪಾಯಿಗೆ Honda Jazz ಕಾರು ಬುಕ್ ಮಾಡಿ ಎಂದು ಆಫರ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Honda to increase vehicle prices from January 2021

ಹೀರೋ ವಾಹನ ಈ ತಿಂಗಳೇ ಖರೀದಿಸಿ, 2021ರಲ್ಲಿ ಬೆಲೆ ಏರಿಕೆ! ಹೀರೋ ವಾಹನ ಈ ತಿಂಗಳೇ ಖರೀದಿಸಿ, 2021ರಲ್ಲಿ ಬೆಲೆ ಏರಿಕೆ!

ರೆನೋ ಇಂಡಿಯಾ ಎಲ್ಲಾ ಮಾದರಿ ಬೆಲೆ 28,000 ರು ಏರಿಕೆಯಾಗಲಿದೆ ಎಂದು ಘೋಷಿಸಿದೆ. ಕ್ವಿಡ್, ಡಸ್ಟರ್, ಟೈಬರ್ ಎಲ್ಲವೂ ಜನವರಿಯಿಂದ ದುಬಾರಿಯಾಗಲಿವೆ. ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಈಗಾಗಲೇ ಬೆಲೆ ಏರಿಕೆ ಮುನ್ಸೂಚನೆ ನೀಡಿವೆ. ಉತ್ಪಾದನೆಗೆ ಬೇಕಾದ ಕಚ್ಚಾವಸ್ತು ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಸರಿದೂಗಿಸಲು ಇದು ಅನಿವಾರ್ಯ ಎಂದು ಎಲ್ಲಾ ಸಂಸ್ಥೆಗಳು ಹೇಳಿವೆ. ದ್ವಿಚಕ್ರವಾಹನ ಸಂಸ್ಥೆ ಹೀರೋ ಮೋಟೋ ಕಾರ್ಪ್ ಕೂಡಾ ಜನವರಿ 01,2021ರಿಂದ ಎಲ್ಲಾ ಮಾದರಿ ವಾಹನ ಬೆಲೆ 1,500 ರು ಏರಿಕೆಯಾಗಲಿದೆ ಎಂದು ಪ್ರಕಟಿಸಿದೆ.(ಪಿಟಿಐ)

English summary
Japanese auto major Honda plans to increase vehicle prices in India from next month and company dealers have been informed about the decision, industry sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X