ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸಿಯಾಜ್ ಗೆ ಸಡ್ಡು ಹೊಡೆದ ಹೋಂಡಾ

ಸಾಕಷ್ಟು ದಿನಗಳಿಂದ ತನ್ನ ಶ್ರೇಣಿಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಮಾರುತಿ ಸೆಡಾನ್ ಮಾದರಿಗೆ ಸವಾಲು ಹಾಕಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 14: ಜಪಾನ್ ನ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ಹೋಂಡಾ, ಭಾರತದಲ್ಲಿ ಚಾಲ್ತಿಯಲ್ಲಿರುವ ತನ್ನ ಸೆಡಾನ್ ಮಾದರಿಯ ಹೋಂಡಾ ಸಿಟಿಯನ್ನು ಅಪ್ ಗ್ರೇಡ್ ಮಾಡಿದ್ದು, 'ಹೋಂಡಾ ಸಿಟಿ 2017' ಎಂಬ ಹೊಸ ಆವೃತ್ತಿಯ ಕಾರುಗಳನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೊಸ ಮಾದರಿಯ ಕಾರುಗಳನ್ನು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಯೊಚಿರೊ ಉನೋ ಬಿಡುಗಡೆಗೊಳಿಸಿದರು. ಈ ವೇಳೆ, ಹೋಂಡಾ ಕಂಪನಿಯ ಭಾರತ ಶಾಖೆಯ ಮುಖ್ಯಸ್ಥ ರಮಣ ಕುಮಾರ್ ಶರ್ಮಾ ಕೂಡ ಇದ್ದರು.

Honda launches upgraded City sedans to compete with Maruti Ciaz

ಈ ಹೊಸ ಕಾರಿನಿಂದ ಸೆಡಾನ್ ಮಾದರಿಯಲ್ಲಿ ಭಾರತದಲ್ಲಿ ತಾನು ಈ ಹಿಂದೆ ಹೊಂದಿದ್ದ ಅಗ್ರಸ್ಥಾನವನ್ನು ಮರಳಿ ಪಡೆಯಲು ಹೋಂಡಾ ಕಂಪನಿ ಆಲೋಚಿಸಿದೆ.

ಹೊಸ 'ಹೋಂಡಾ ಸಿಟಿ 2017' ಕಾರಿನ ಬೆಲೆ 8.5 ಲಕ್ಷ ರು.ಗಳಿಂದ 13.58 ಲಕ್ಷ ರು. (ದೆಹಲಿ ಎಕ್ಸ್ ಷೋ ರೂಂ ಬೆಲೆ) ಇದ್ದು, ಈ ಮೂಲಕ ಮಾರುತಿ ಸುಝುಕಿ ಕಂಪನಿಯ ಉನ್ನತ ದರ್ಜೆಯ ಸೆಡಾನ್ ಕಾರು ಆದ ಮಾರುತಿ ಸಿಯಾಜ್ ಗೆ ಸಡ್ಡು ಹೊಡೆಯಲು ಹೋಂಡಾ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಮಾರುತಿ ಸುಜುಕಿಯ ಸಿಯಾಜ್ ನ ಬೆಲೆ ದೆಹಲಿ ಎಕ್ಸ್ ಷೋ ರೂಂ ಪ್ರಕಾರ, 7.86 ಲಕ್ಷ ರು. ನಿಂದ 9.96 ಲಕ್ಷ ರು. ಇದೆ. ಈ ಮಾದರಿಯ ಕಾರುಗಳ ಮಾರಾಟದಲ್ಲಿ ಈವರೆಗೆ ಮಾರುತಿ ಸಿಯಾಜ್ ನ ಮಾರಾಟವನ್ನು ಕುಗ್ಗಿಸಲು ಉಳಿದ ಕಂಪನಿಗಳಿಂದ ಆಗಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿರುವ ಹೋಂಡಾ, ತನ್ನ ಹೋಂಡಾ ಸಿಟಿಯನ್ನೇ ಉನ್ನತೀಕರಿಸಿ ಸಡ್ಡು ಹೊಡೆಯಲು ಮುಂದಾಗಿದೆ ಎಂದು ಹೇಳಲಾಗಿದೆ.

English summary
Japanese auto major Honda on Tuesday launched the new upgraded version of its best selling sedan City in India, aim to regain top slot from rival Maruti Suzuki's Ciaz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X