ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಫೌಂಡೇಷನ್ ನೋಂದಣಿ ರದ್ದುಪಡಿಸಿದ ಸರ್ಕಾರ

|
Google Oneindia Kannada News

ನವದೆಹಲಿ/ಬೆಂಗಳೂರು, ಮೇ 14: ಇನ್ಫೋಸಿಸ್ ಸಹ ಸ್ಥಾಪಕ ಎನ್. ಆರ್ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರ ನೇತೃತ್ವದ ಸರ್ಕಾರೇತರ ಸಂಸ್ಥೆ ಇನ್ಫೋಸಿಸ್ ಫೌಂಡೇಷನ್ ನ ನೋಂದಣಿ ರದ್ದಾಗಿದೆ.

ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ವಲಸೆ ಕಾನೂನು ಉಲ್ಲಂಘನೆ: ಇನ್ಫೋಸಿಸ್, ಆಪಲ್ ವಿರುದ್ಧದ ಪ್ರಕರಣ ವಜಾ ವಲಸೆ ಕಾನೂನು ಉಲ್ಲಂಘನೆ: ಇನ್ಫೋಸಿಸ್, ಆಪಲ್ ವಿರುದ್ಧದ ಪ್ರಕರಣ ವಜಾ

ವಿದೇಶಿ ಕೊಡುಗೆ ಕಾಯ್ದೆ(ನಿಯಂತ್ರಣ) FCRA ಅಡಿಯಲ್ಲಿ ಎಲ್ಲಾ ಸರ್ಕಾರೇತರ ಸಂಸ್ಥೆ(ಎನ್ ಜಿಒ)ಗಳಿಗೆ ಆರ್ಥಿಕ ವ್ಯವಹಾರಗಳನ್ನು ದಾಖಲಿಸುವುದು ಕಡ್ಡಾಯವಾಗಿದೆ. ವಿದೇಶದಿಂದ ಪಡೆದ ಪ್ರತಿ ಮೊತ್ತವನ್ನು ಐಟಿ ರಿಟರ್ನ್ಸ್ ಹಾಗೂ ಎಫ್ ಸಿ ಆರ್ ಎ ಅಡಿಯಲ್ಲಿ ದಾಖಲೆ ಸಮೇತ ತೋರಿಸಬೇಕಾಗುತ್ತದೆ.

Home Ministry cancels registration of Infosys Foundation

ಆದರೆ, ಇನ್ಫೋಸಿಸ್ ಸಂಸ್ಥೆ ಕಳೆದ ಎರಡು ವರ್ಷಗಳಲ್ಲಿ ವಾರ್ಷಿಕ ಆದಾಯ ಹಾಗೂ ಖರ್ಚು ವೆಚ್ಚಗಳ ವಿವರಗಳನ್ನು ನೀಡಿಲ್ಲ. ಕಳೆದ 6 ವರ್ಷಗಳಿಂದ ವಿದೇಶಿ ದೇಣಿಗೆ ವಿವರ ನೀಡಿಲ್ಲ. ಹಲವು ಬಾರಿ ನೋಟಿಸ್ ನೀಡಿದ್ದರೂ, ಈ ಬಗ್ಗೆ ಗಮನ ಹರಿಸದ ಕಾರಣ, ನೋಂದಣಿ ರದ್ದು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷ 1755 ಎನ್ ಜಿಒ ಗಳಿಗೆ ಈ ಕುರಿತಂತೆ ನೋಟಿಸ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಪ್ರತಿಷ್ಠಾನ, ನಮ್ಮ ಸಂಸ್ಥೆ FCRA ಅಡಿಯಲ್ಲಿ ಬರುವುದಿಲ್ಲ. 2016ರಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಬಗ್ಗೆ ಇಲಾಖೆಗೆ ತಿಳಿಸಲಾಗಿದೆ ಎಂದು ಕಾರ್ಪೊರೆಟ್ ವ್ಯವಹಾರಗಳ ಸಂವಹನ ವಿಭಾಗದ ರಿಷಿ ಬಸು ಪ್ರತಿಕ್ರಿಯಿಸಿದ್ದಾರೆ.

ಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆ ಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆ

1996ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಸುಧಾಮೂರ್ತಿ ಅವರು ಅಧ್ಯಕ್ಷರಾಗಿದ್ದಾರೆ. ಗ್ರಾಮೀಣ ಭಾರತ ಅಭಿವೃದ್ಧಿ, ಆರೋಗ್ಯ, ಕಲೆ, ಶಿಕ್ಷಣ, ಸಂಸ್ಕೃತಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

English summary
The Home Ministry has cancelled the registration of Bengaluru-based NGO Infosys Foundation for alleged violation of norms in receiving foreign grants, officials said on May 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X