ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ ರೆಪೋ ದರ ಏರಿಕೆ, ಗೃಹ ಸಾಲ ಆಗಲಿದೆ ದುಬಾರಿ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 01: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ(ಆರ್ ಬಿಐ) ಸತತವಾಗಿ ಎರಡನೇ ಬರಿಗೆ ರೆಪೋ ದರ​​ ಹೆಚ್ಚಳ ಮಾಡಿದೆ. ಈ ಮೂಲಕ ಗೃಹ ಸಾಲ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.​​​​ 25 ಮೂಲಾಂಶದಷ್ಟು ರೆಪೋ ರೇಟ್ ಹೆಚ್ಚಳವಾಗಿ 6.50% ಆಗಿದೆ.

2013ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ಬಾರಿಗೆ ರೆಪೋ ದರ ಈ ರೀತಿ ಏರಿಕೆ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ಆರು ಮಂದಿ ಸದಸ್ಯರ ಪೈಕಿ ಐದು ಮಂದಿ ದರ ಏರಿಕೆ ಪರ ಮತ ಹಾಕಿದರು.

ರೆಪೋ ದರದಲ್ಲಿ ಶೇ. 0.25 ಏರಿಕೆ ಮಾಡಿದ ರಿಸರ್ವ್ ಬ್ಯಾಂಕ್ರೆಪೋ ದರದಲ್ಲಿ ಶೇ. 0.25 ಏರಿಕೆ ಮಾಡಿದ ರಿಸರ್ವ್ ಬ್ಯಾಂಕ್

ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಸಾಲ ಬಡ್ಡಿದರ ಬಗ್ಗೆ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಿಲ್ಲ.

Home Loans Costlier After RBIs Second Back-To-Back Rate Hike In 5 Years

ರೆಪೋ (ರೀಪರ್ಚೇಸಿಂಗ್​​ ರೇಟ್): ಕಮರ್ಷಿಯಲ್ ಬ್ಯಾಂಕ್​​ಗಳಿಗೆ ಆರ್ ಬಿಐ ನೀಡುವ ಅಲ್ಪಾವಧಿಯ ಸಾಲದ ಮೇಲಿನ ಬಡ್ಡಿದರ. ಇನ್ನು ಬ್ಯಾಂಕ್​ಗಳಿಂದ ಸಾಲ ತೆಗೆದುಕೊಳ್ಳುವ ರಿವರ್ಸ್​​ ರೆಪೋ ರೇಟ್ ಶೇ.6.25% ರಷ್ಟು ಏರಿಕೆಯಾಗಿದೆ.

ಜೂನ್ ನಲ್ಲಿ ಆರ್ ಬಿಐ ರಾಜ್ಯಪಾಲ ಊರ್ಜಿತ್ ಪಟೇಲ್ ಅವರು ರೆಪೋ ದರವನ್ನು 25 ಮೂಲಾಂಶ ಏರಿಕೆ ಮಾಡಿ 6.25 %ಕ್ಕೇರಿಸಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ರೆಪೋ ದರ ಏರಿಕೆಯಾಗಿತ್ತು.

ಆರ್‌ಬಿಐನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿಆರ್‌ಬಿಐನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ

ಗ್ರಾಹಕರ ವಸ್ತುಗಳ ಹಣದುಬ್ಬರ ಇಳಿಕೆಗೆ ಆರ್​ಬಿಐ ಕಸರತ್ತು ನಡೆಸಿದೆ. ಜೂನ್ ತಿಂಗಳಿನಲ್ಲಿ ವಾರ್ಷಿಕ ಗ್ರಾಹಕ ಹಣದುಬ್ಬರ ದರ ಶೇ 5ರಷ್ಟಿತ್ತು. ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ರೆಪೋ ದರ ಏರಿಕೆ ಅನಿವಾರ್ಯ ಎಂದು ಆರ್ ಬಿಐ ಹೇಳಿದೆ.

ನಗದು ಮೀಸಲು ಅನುಪಾತ (ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡಿಲ್ಲ. ಅದರೆ, ಈಗ ಸಿಆರ್ ಅರ್ ದರ 50 ಮೂಲಾಂಶ ದರದಂತೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ.

ಗಮನಿಸಿ:
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
* ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ.

English summary
The Reserve Bank of India (RBI) on Wednesday announced a second straight 25 basis points hike in repo rate to 6.5 per cent. This the first time since October 2013 that the central bank has hiked borrowing costs at two consecutive policy meetings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X