ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?

By Mahesh
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ರುಪಾಯಿ ಅಪಮೌಲ್ಯ, ಹಣದುಬ್ಬರ, ಆರ್ಥಿಕ ಸ್ಥಿರತೆಗಾಗಿ ಹೊಸ ನೀತಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮತ್ತೊಮ್ಮೆ ರೆಪೋ ದರ ಏರಿಸುವ ಸಾಧ್ಯತೆ ಕಂಡು ಬಂದಿದೆ. ಹೀಗಾಗಿ, ಬ್ಯಾಂಕಿನಿಂದ ಪಡೆಯುವ ಸಾಲದ ಇಎಂಐ ಗ್ರಾಹಕರ ಜೇಬು ಕಚ್ಚಲಿದೆ.

ಅಕ್ಟೋಬರ್ 4ರಂದು ಹಣಕಾಸು ನೀತಿ ಘೋಷಣೆ ಮಾಡಲಿದೆ. ಈ ನೀತಿಯಲ್ಲಿ ಆರ್. ಬಿ .ಐ. ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಇದಕ್ಕೆ ಕಾರಣವಾಗಲಿದೆ.

Your home, auto loan EMIs likely go up as RBI may up rates

ಐಟಿ ಪ್ರಕಾರ, ಆರ್. ಬಿ. ಐ . ರೆಪೋ ದರವನ್ನು ಶೇಕಡಾ 0.5 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳನ್ನು ಸೇರಿಸಿ ಆರ್. ಬಿ. ಐ. ರೆಪೋ ದರವನ್ನು ಏರಿಕೆ ಮಾಡಲಿದೆ. ಕೆಲ ದಿನಗಳ ಹಿಂದಷ್ಟೇ ಆರ್. ಬಿ. ಐ. ರೆಪೋ ದರದಲ್ಲಿ ಏರಿಕೆ ಮಾಡಿತ್ತು. ರೂಪಾಯಿ ಮೌಲ್ಯ ಕುಸಿತಕ್ಕೆ ಬ್ರೇಕ್ ಹಾಕಲು ಮತ್ತೆ ರೆಪೋ ದರವನ್ನು ಏರಿಸಲಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗುರುವಾರ ರೂಪಾಯಿ ಮೌಲ್ಯ 72 ಕ್ಕೆ ಬಂದು ನಿಂತಿದೆ. ಆರ್. ಬಿ. ಐ. ರೆಪೋ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕ್ ಕೂಡ ಸಾಲದ ಬಡ್ಡಿ ದರವನ್ನು ಏರಿಸಲಿದೆ. ಇದ್ರಿಂದ ಮನೆ ಹಾಗೂ ಆಟೋ ಸಾಲ ದುಬಾರಿಯಾಗಲಿದೆ.

English summary
Home, auto loan borrowers may soon have to shell out more for their equated monthly instalments (EMIs) as the Reserve Bank of India is expected to raise key policy rates by another 50 basis points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X