ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್ ಕಂಪನಿಗೆ ಬ್ರ್ಯಾಂಡ್ ಅಂಬಾಸಡರ್ ಮಾರಾಟ

ಐದಾರು ದಶಕಗಳ ಕಾಲ ಜನ ಸಾಮಾನ್ಯರಿಂದ ಜನ ಪ್ರತಿನಿಧಿಗಳ ತನಕ ಎಲ್ಲರ ಮೆಚ್ಚಿನ ಕಾರಿನ ಬ್ರ್ಯಾಂಡ್ ಆಗಿದ್ದ ಹಿಂದೂಸ್ತಾನ್ ಮೋಟರ್ಸ್ ನ 'ಅಂಬಾಸಡರ್' ಈಗ ಫ್ರೆಂಚ್ ಕಂಪನಿ ಪಾಲಾಗಿದೆ

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 11: ಐದಾರು ದಶಕಗಳ ಕಾಲ ಜನ ಸಾಮಾನ್ಯರಿಂದ ಜನ ಪ್ರತಿನಿಧಿಗಳ ತನಕ ಎಲ್ಲರ ಮೆಚ್ಚಿನ ಕಾರಿನ ಬ್ರ್ಯಾಂಡ್ ಆಗಿದ್ದ ಹಿಂದೂಸ್ತಾನ್ ಮೋಟರ್ಸ್ ನ 'ಅಂಬಾಸಡರ್' ಈಗ ಫ್ರೆಂಚ್ ಕಂಪನಿ ಪಾಲಾಗಿದೆ. ಸಿಕೆ ಬಿರ್ಲಾ ಸಮೂಹ ಈ ಕುರಿತಂತೆ ಯುರೋಪಿನ ಪ್ರಮುಖ ಕಂಪನಿ ಪಿಯುಗಿಯೋ(Peugeot) ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸುಮಾರು 80 ಕೋಟಿ ರುಗಳಿಗೆ ಅಂಬಾಸಡರ್ ಬ್ರ್ಯಾಂಡ್ ಹಾಗೂ ಟ್ರೇಡ್ ಮಾರ್ಕ್ ಪಡೆಯುವ ಮೂಲಕ ಪಿಯುಗಿಯೋ ಭಾರತದ ಕಾರು ಮಾರುಕಟ್ಟೆಗೆ ಅಧಿಕೃತವಾಗಿ ಮರು ಪ್ರವೇಶ ಪಡೆದುಕೊಂಡಿದೆ.[ಕೊಹ್ಲಿ ಕುರಿತ ಪುಸ್ತಕದಲ್ಲಿರುವ ಸ್ಕೋಡಾ ಕಾರು ಕಥೆ]

Hindustan Motors Sells Ambassador Brand To Peugeot For ₹ 80 Crore

ಇದಕ್ಕೂ ಮುನ್ನ 1999ರಲ್ಲಿ ಪಿಯುಗಿಯೋ ಪ್ರೀಮಿಯರ್ ಕಂಪನಿಯೊಂದಿಗೆ ಪಾಲುದಾರಿಕೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿತ್ತು. ಕಾರಣಾಂತರಗಳಿಂದಾಗಿ 2001ರಲ್ಲಿ ಪಿಯುಗಿಯೋ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಈಗ ಭಾರತದಲ್ಲಿ 700 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧತೆ ನಡೆದಿದೆ.[ಕಾರಲ್ಲೇ ಉದ್ಯಾನವನ ತಕ್ಕಳೊಪ್ಪ!]

80ರ ದಶಕದಲ್ಲಿ ವಷಕ್ಕೆ 24,000 ಕಾರುಗಳನ್ನು ರಸ್ತೆಗಿಳಿಸುತ್ತಿದ್ದ ಅಂಬಾಸಡರ್, 2000ರ ವೇಳೆಗೆ 6000ಕ್ಕೆ ಇಳಿಯಿತು. ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಕುಂಠಿತವಾದ ಹಿನ್ನಲೆಯಲ್ಲಿ ಹಿಂದೂಸ್ತಾನ್ ಮೋಟಾರ್ಸ್ 2014ರ ಮೇ 24 ರಂದು ಅಂಬಾಸಡರ್ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಈಗ ಭಾರತದ ಒಂದು ಕಾಲದ ನೆಚ್ಚಿನ ಬ್ರ್ಯಾಂಡ್ ಫ್ರೆಂಚ್ ಕಂಪನಿ ಪಾಲಾಗಿದೆ.(ಪಿಟಿಐ)[ 1953: ಶ್ರೀಕಂಠದತ್ತ ಒಡೆಯರ್ ಲವ್ ಸ್ಟೋರಿ]

English summary
The iconic brand Ambassador has changed hands with Hindustan Motors selling it to European auto major Peugeot for Rs 80 crore. It was the C K Birla group firm that has inked an agreement with Peugeot SA, which will see the French company make its foray into India soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X