ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ನಕಲಿ ಪ್ರಿಂಟರ್ ಬಿಡಿಭಾಗಗಳ ಅಡ್ಡ : ಎಚ್ಪಿ

By Mahesh
|
Google Oneindia Kannada News

ಬೆಂಗಳೂರು, ಅ.29: ಕರ್ನಾಟಕ ರಾಜ್ಯಾದ್ಯಂತ ಇತ್ತೀಚೆಗೆ ಸ್ಥಳೀಯ ವಾಣಿಜ್ಯ ಅಧಿಕಾರಿಗಳು 1.4 ಕೋಟಿ ರೂ.ಗೂ ಅಧಿಕ ನಕಲಿ ಪ್ರಿಂಟ್ ಕಾಟ್ರೇಜಸ್ ಮತ್ತು ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹ್ಯೂಲೆಟ್ ಪ್ಯಾಕರ್ಡ್ ಸಂಸ್ಥೆ ತಿಳಿಸಿದೆ. ಕರ್ನಾಟಕ ನಕಲಿ ಸಾಧನ ಮಾರಾಟದ ಅಡ್ಡಿವಾಗುತ್ತಿದ್ದು, ಈ ಬಗ್ಗೆ ಪೊಲೀಸರು ತೆಗೆದುಕೊಳ್ಳುವ ಕ್ರಮಕ್ಕೆ ಎಚ್ ಪಿ ಸಂಸ್ಥೆ ಸಂಪೂರ್ಣ ಸಹಕ

ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹಾಸನದಲ್ಲಿ ನಕಲಿ ಉತ್ಪನ್ನ ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದೆ.

ಒಟ್ಟಾರೆ, 1,149 ಟೋನರ್ ಕಾಟ್ರೆಜಸ್ ಮತ್ತು ಇಂಕ್ ಕಾಂಟ್ರೆಜಸ್ ಹಾಗೂ 12,080ಕ್ಕೂ ಅಧಿಕ ನಕಲಿ ಬಿಡಿಭಾಗಗಳನ್ನು 2015ರ ಜನವರಿಯಿಂದ ಅಕ್ಟೋಬರ್ ನಡುವೆ ವಶಪಡಿಸಿಕೊಳ್ಳಲಾಗಿದೆ. ಇದನ್ನು ಸಾಧ್ಯವಾಗಿಸಲು ಎಚ್ ಪಿ ಸ್ಥಳೀಯ ಕಾನೂನು ಅಧಿಕಾರಿಗಳೊಂದಿಗೆ ಕೈಜೋಡಿಸಿದೆ.

Hewlett-Packard on counterfeit print cartridges in Karnataka

ವಂಚಕರ ವಿರುದ್ಧ ಹೋರಾಟ: ಎಚ್ ಪಿ ಉದ್ಯಮದಲ್ಲಿ ನಕಲಿಯ ವಿರುದ್ಧ ಹೋರಾಡುವ ಅಭ್ಯಾಸವನ್ನು ರೂಢಿಸಿಕೊಂಡಿದೆ. ಎಚ್ ಪಿಗೆ ನಕಲಿ ಸೃಷ್ಟಿಯ ಉತ್ಪಾದನೆ, ವಿತರಣೆ ಮತ್ತು ಮಾರಾಟವನ್ನು ತಡೆಯುತ್ತ ಬಂದಿದೆ. 2015ರ ಜನವರಿಯಿಂದ ಭಾರತದ 18 ರಾಜ್ಯಗಳ 46 ನಗರಗಳಲ್ಲಿ 35.5 ಕೋಟಿ ರೂ. ಮೌಲ್ಯದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. 3.45 ಲಕ್ಷ ಕಾಟ್ರೆಜ್ಸ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ದಾಳಿ ನಕಲಿ ಹಾವಳಿ ತಡೆಗೆ ಸಹಕಾರಿಯಾಗಿದ್ದು, ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಪ್ರಿಂಟಿಂಗ್ ಅನುಭವವನ್ನು ನೀಡುತ್ತಿದೆ.

'ನಕಲಿ ಎಚ್ ಪಿ ಪ್ರಿಂಟ್ ಕಾಟ್ರೆಜಸ್ ಗಳನ್ನು ಖರೀದಿಸಿದ ಗ್ರಾಹಕರು ಅಸಲಿ ಉತ್ಪನ್ನ ಖರೀದಿಸಿದ್ದೇವೆಂದು ಭಾವಿಸಿ ಗುಣಮಟ್ಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಚ್ ಪಿ ನಮ್ಮ ಗ್ರಾಹಕರನ್ನು ರಕ್ಷಿಸಲು ಬದ್ಧವಾಗಿದೆ. ಅಸಲಿ ಎಚ್ ಪಿ ಪ್ರಿಂಟ್ ಕಾಟ್ರೆಜಸ್ ಗಳನ್ನು ಕೊಂಡರೆ ಉತ್ಕೃಷ್ಟ ಮಟ್ಟದ ಪ್ರಿಂಟ್ ಭರವಸೆಯನ್ನು ಎಚ್ ಪಿ ನೀಡುತ್ತದೆ' ಎಂದು ಎಚ್ ಪಿ ವಕ್ತಾರರು ತಿಳಿಸಿದ್ದಾರೆ.

ಎಚ್ ಪಿ ನಕಲಿ ಪ್ರಿಂಟ್ ಪೂರೈಕೆ ಗುರುತಿಸಲು ರಕ್ಷಣಾತ್ಮಕ ಕ್ರಮವನ್ನು ಕೈಗೆತ್ತಿಕೊಂಡಿದೆ. ಅಸಲಿ ಎಚ್ ಪಿ ಪ್ರಿಂಟ್ ಕಾಟ್ರೆಜಸ್ ಗಳು ಸೆಕ್ಯುರಿಟಿ ಸೀಲ್ ನೊಂದಿಗೆ ಕಲರ್ ಶಿಫ್ಟಿಂಗ್ ಆಯ್ಕೆ ಮತ್ತು ಕ್ಯುಆರ್ ಕೋಡ್ ಹಾಗೂ ಸೀರಿಯಲ್ ಸಂಖ್ಯೆಯನ್ನು ಹೊಂದಿರುತ್ತದೆ. ಆ ಸಂಖ್ಯೆಯನ್ನು (www.hp.com/go/ok) ತಾಣದಲ್ಲಿ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬಹುದು.

English summary
Hewlett-Packard, a global IT major, says raids by enforcement agencies have yielded counterfeit print cartridges and components worth Rs 1.4 crore agencies in four cities across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X