ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಪಿ ಇಬ್ಭಾಗ ಖಚಿತ, 5 ಸಾವಿರ ಉದ್ಯೋಗ ಗೋತಾ

By Mahesh
|
Google Oneindia Kannada News

ಬೆಂಗಳೂರು, ಅ.8: ಹ್ಯೂಲೆಟ್ ಪ್ಯಾಕರ್ಡ್ ಕೋ(ಎಚ್ ಪಿ) ಸಂಸ್ಥೆ ಇಬ್ಭಾಗವಾಗುವುದು ಖಾತ್ರಿಯಾಗಿದೆ. ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಹಾರ ಹಾಗೂ ಹಾರ್ಡ್ ವೇರ್ ಮತ್ತು ಇನ್ನಿತರ ಸರ್ವೀಸ್ ವಿಭಾಗಗಳು ಪ್ರತ್ಯೇಕಗೊಳ್ಳಲಿವೆ. ಪರಿಣಾಮ ಸುಮಾರು 5 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಎಚ್ ಪಿ ಇಬ್ಭಾಗವನ್ನು ಸಂಸ್ಥೆಯ ಸಿಇಒ ಮೆಗ್ ವಿಟ್ಮನ್ ಸಮರ್ಥಿಸಿಕೊಂಡಿದ್ದಾರೆ.

ಕಂಪ್ಯೂಟರ್ (ಪಿಸಿ) ಕ್ಷೇತ್ರದಲ್ಲಿ ಹೊಸತನ ಹುಟ್ಟುಹಾಕಿದ ಎಚ್ ಪಿ ಸಂಸ್ಥೆ ಈಗ ತನ್ನ ಮೂಲ ಶಕ್ತಿಯನ್ನೇ ವಿಭಜನೆ ಮಾಡುತ್ತಿದೆ. ಪೆಪ್ಸಿಕೋ ಸಂಸ್ಥೆ ಕೂಡಾ ತಂಪು ಪಾನೀಯ ಹಾಗೂ ಸ್ನ್ಯಾಕ್ಸ್ ವಿಭಾಗ ಇಬ್ಭಾಗಕ್ಕೆ ಮುಂದಾಗಿದೆ. ಇದೇ ರೀತಿ ಇಬ್ಭಾಗದ ಯೋಜನೆ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲೂ ಚಾಲ್ತಿಯಲ್ಲಿದೆ.

ಈ ವರ್ಷ ಹಲವು ದೊಡ್ಡ ಜಾಗತಿಕ ಕಂಪನಿಗಳ ವಿಭಜನೆಯನ್ನು ಕಾಣಬಹುದಾಗಿದೆ. ಹೂಡಿಕೆದಾರರು ಇದರಿಂದ ಅಷ್ಟೇನು ವಿಚಲಿತರಾಗಿಲ್ಲ. ಮಾನವ ಸಂಪನ್ಮೂಲ ಹೊಂದಾಣಿಕೆ ಸಮಸ್ಯೆ ಹೊರತು ಪಡಿಸಿದರೆ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದು ಕಂಪನಿಗಳ ಮುಂದಿರುವ ದೊಡ್ಡ ಸವಾಲು.

Hewlett-Packard Confirms Plans To Split In Two Will Slimmer Make Stronger?

2001ರಲ್ಲಿ ಕಂಪ್ಯಾಕ್ ಕಂಪ್ಯೂಟರ್ ಖರೀದಿಸಿದ ಎಚ್ ಪಿ ಸಂಸ್ಥೆ ಡೆಲ್ ಹಾಗೂ ಐಬಿಎಂ ವಿರುದ್ಧ ಪಿಸಿ ವಿಭಾಗದಲ್ಲಿ ಭಾರಿ ಪೈಪೋಟಿ ನೀಡಿತ್ತು. ಎಚ್ ಪಿಯಲ್ಲಿ ಸದ್ಯಕ್ಕೆ 3,00,000 ಉದ್ಯೋಗಿಗಳಿದ್ದಾರೆ.ವಿಟ್ ಮನ್ ಅವರು ಹ್ಯೂಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್ ನ ಸಿಇಒ ಆಗಿ ಮುಂದುವರೆಯಲಿದ್ದಾರೆ. ಎಚ್ ಪಿ ಐಎನ್ ಸಿ(ಪ್ರಿಂಟಿಂಗ್, ಪರ್ಸನಲ್ ಕಂಪ್ಯೂಟರ್)ಗೆ ಡಿಯಾನ್ ವೈಸ್ಲರ್ ಚೇರ್ಮನ್ ಆಗಲಿದ್ದಾರೆ.

1939ರಲ್ಲಿ ಕ್ಯಾಲಿಫೋರ್ನಿಯಾದ ಗ್ಯಾರೇಜ್ ನಲ್ಲಿ ಬಿಲ್ ಹ್ಯೂಲೆಟ್ ಹಾಗೂ ಡೇವ್ ಪ್ಯಾಕರ್ಡ್ ಅವರು ಆರಂಭಿಸಿದ ಈ ಸಂಸ್ಥೆ ಸಿಲಿಕಾನ್ ವ್ಯಾಲಿಯಲ್ಲಿ ಸದ್ದು ಮಾಡಿದ್ದಲ್ಲದೆ ಪಿಸಿ ವಿಭಾಗದಲ್ಲಿ ಕ್ರಾಂತಿ ಹುಟ್ಟುಹಾಕಿತ್ತು.

ಎಚ್ ಪಿ ಸಂಸ್ಥೆಗೆ ಗೋಲ್ಡ್ ಮನ್ ಸಾಚ್ಸ್ ಅಂಡ್ ಕೋ ಆರ್ಥಿಕ ಸಲಹೆಗಾರ ಸಂಸ್ಥೆಯಾಗಿತ್ತು, ವಾಚ್ ಟೆಲ್, ಲಿಪ್ಟನ್, ರೊಸೆನ್ ಹಾಗೂ ಕಾಟ್ಜ್ ಕಾನೂನು ಸಲಹೆಗಾರ ಸಂಸ್ಥೆಗಳಾಗಿ ವ್ಯವಹರಿಸಿದ್ದವು.ಒಟ್ಟಾರೆ ಕಾರ್ಪೋರೇಟ್ ಬ್ರೇಕ್ ಅಪ್ ಗಳಿಂದ ಇನ್ವೆಷ್ಟ್ಮೆಂಟ್ ಬ್ಯಾಂಕ್ ಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದು ಮಾರುಕಟ್ಟೆ ತಜ್ಞ ಸಂಸ್ಥೆ ಡೀಲ್ ಲಾಜಿಕ್ ಹೇಳಿದೆ. ಕಳೆದ ಈ ವರ್ಷ ಸುಮಾರು 9.4 ಬಿಲಿಯನ್ ಡಾಲರ್ ವಹಿವಾಟು ನಡೆಸಲಾಗಿದೆ.

English summary
Computer and printing giant Hewlett-Packard said that it plans to split into two separate publicly traded companies, confirming the speculation that broke out over the weekend.The company also confirmed its plan to cut another 5,000 jobs and pledged to invest the money saved from the lower headcount into research and development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X