ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 'ಕಿಸಸ್' ಪರಿಚಯಿಸಿದ ಅಮೆರಿಕದ ಹರ್ಷೆ ಚಾಕೊಲೆಟ್

|
Google Oneindia Kannada News

ಮುಂಬೈ, ಅಕ್ಟೋಬರ್ 18: ಹರ್ಷೆ(Hershey) ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್, ಉತ್ತರ ಅಮೆರಿಕದಲ್ಲಿ ಗುಣಮಟ್ಟದ ಚಾಕೊಲೆಟ್‍ಗೆ ಹೆಸರಾಗಿರುವ ಹರ್ಷೆ ಕಂಪನಿಯ ಭಾಗವಾಗಿದ್ದು, ಈಗ ಭಾರತದಲ್ಲಿ ಹರ್ಷಿಸ್ ಕಿಸೆಸ್ ಹೆಸರಿನ ಚಾಕೊಲೆಟ್ ಬ್ರಾಂಡ್ ಅನ್ನು ಬಿಡುಗಡೆ ಮಾಡಿದೆ.

ಕ್ರೀಮಿ, ಹೆಸರಿನ ಸ್ವಾದಿಷ್ಟವಾದ ಹರ್ಷಿಸ್ ಕಿಸೆಸ್ ಚಾಕೊಲೆಟ್ ಭಿನ್ನವಾಗಿದ್ದು, ತನ್ನ ಭಿನ್ನ ಆಕಾರ, ಪ್ಯಾಕಿಂಗ್‍ನಿಂದಾಗಿ ಗಮನಸೆಳೆಯಲಾಗಿದೆ. ಆತ್ಮೀಯರೊಂದಿಗೆ ಹಂಚಿಕೊಳ್ಳಲು ಸೂಕ್ತವಾದುದಾಗಿದೆ.

ವಿಶ್ವ ಚಾಕೋಲೇಟ್ ದಿನ: ಚಾಕೋಲೇಟ್ ಸೇವನೆಯಿಂದಾಗುವ 5 ಲಾಭವಿಶ್ವ ಚಾಕೋಲೇಟ್ ದಿನ: ಚಾಕೋಲೇಟ್ ಸೇವನೆಯಿಂದಾಗುವ 5 ಲಾಭ

ಹರ್ಷಿಸ್ ಕಿಸೆಸ್ ಮೂರು ಭಿನ್ನ ಮಾದರಿಗಳಲ್ಲಿ ಲಭ್ಯವಿದೆ. ಮೊದಲನೆಯದು ಎಲ್ಲ ರೀತಿಯಲ್ಲೂ ಮೆಚ್ಚುಗೆಗೆ ಪಾತ್ರವಾದ ಮಿಲ್ಕ್ ಚಾಕೊಲೆಟ್, 2) ಜನಪ್ರಿಯವಾದ ಅಲ್ಮಂಡ್ - ಇದರಲ್ಲಿ ಕೆನೆಯುಕ್ತ ಹಾಲಿನ ಚಾಕೊಲೆಟ್ ಹಾಗೂ ಅಲ್ಮಂಡ್ ಇದೆ; 3) ಭಿನ್ನವಾದ ಕೂಕಿ-ಎನ್-ಕ್ರೀಮೆ ಸ್ವಾದದ ಕೂಕಿ ಬಿಟ್ಸ್‍ವುಳ್ಳ ಮಿಲ್ಕ್ ಚಾಕೊಲೆಟ್‍ನ ಮಿಶ್ರಣವಾಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ
ಹರ್ಷಿಸ್ ಕಿಸೆಸ್‍ನ ಸರಣಿಯು ಭಾರತದಲ್ಲಿ ಗ್ರಾಹಕರ ಆಭಿರುಚಿಯನ್ನು ಕುರಿತ ಸಮೀಕ್ಷೆಯನ್ನು ಆಧರಿಸಿದ್ದಾಗಿದೆ. ಪ್ರೀಮಿಯಂ ಚಾಕೊಲೆಟ್ ಅನ್ನು ಸವಿಯುವ ಭಾರತೀಯ ಗ್ರಾಹಕರ ಬಯಕೆಯನ್ನು ತಣಿಸಲಿದೆ.

ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?

ಉತ್ಪನ್ನ ಬಿಡುಗಡೆ ಕುರಿತು ಮಾತನಾಡಿದ ಹರ್ಷೆ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಧ್ಯಕ್ಷ ಮಿಷೆಲ್ ಬಕ್ ಅವರು, 'ಹರ್ಷಿಸ್ ಕಂಪನಿಯ ಉತ್ಕøಷ್ಟ ಚಾಕೊಲೆಟ್ ಸಂಪ್ರದಾಯವನ್ನು ಬಿಂಬಿಸಲಿದ್ದು, 125 ವರ್ಷಗಳ ಅನುಭವವನ್ನು ಕಂಪನಿ ಹೊಂದಿದೆ. ಹರ್ಷೆ ಕಿಸೆಸ್ ಕಂಪನಿಯ ಜನಪ್ರಿಯ ಬ್ರಾಂಡ್ ಆಗಿದ್ದು, ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿದೆ. ಈ ಪ್ರಮುಖವಾದ ಬ್ರಾಂಡ್ ಈಗ ಭಾರತಕ್ಕೆ ಬಂದಿದೆ. ಕಂಪನಿಯ ಯಶಸ್ಸಿನಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಲಿದೆ' ಎಂದು ಆಶಿಸಿದರು.

ಭಾರತೀಯ ಗ್ರಾಹಕರು ಹರ್ಷಿಸ್ ಕಿಸೆಸ್ ಅನ್ನು ಇಷ್ಟಪಡುತ್ತಾರೆ

ಭಾರತೀಯ ಗ್ರಾಹಕರು ಹರ್ಷಿಸ್ ಕಿಸೆಸ್ ಅನ್ನು ಇಷ್ಟಪಡುತ್ತಾರೆ

ಕಂಪನಿಯ ಅಂತರರಾಷ್ಟ್ರೀಯ ವಿಭಾಗದ ಅಧ್ಯಕ್ಷ ಸ್ಟೀವೆನ್ ಸ್ಕಿಲ್ಲರ್ ಅವರು, 'ಭಾರತದಲ್ಲಿ ಹರ್ಷೆ ಕಂಪನಿಗೆ ವ್ಯಾಪಕವಾದ ಅವಕಾಶಗಳಿವೆ. ಅಂತರರಾಷ್ಟ್ರೀಯ ಪ್ರಗತಿಗೆ ಮಾದರಿಯಾಗಿ ಈ ಮಾರುಕಟ್ಟೆಯು ಸಂಸ್ಥೆಗೆ ಮುಖ್ಯವಾದುದಾಗಿದೆ. ಹರ್ಷಿಸ್ ಬ್ರ್ಯಾಂಡ್ ಭಾರತದಲ್ಲಿ ಕಂಪನಿ ಪ್ರಗತಿಯ ನೇತೃತ್ವವನ್ನು ವಹಿಸಲಿದ್ದು, ಪ್ರಗತಿಯ ಮಾರ್ಗವನ್ನು ಮುಂದುವರಿಸಲು ಹಾಗೂ ಪ್ರಗತಿಶೀಲ ಚಾಕೊಲೆಟ್ ವಲಯದಲ್ಲಿ ಅಭಿವೃದ್ಧಿಯನ್ನು ದಾಖಲಿಸಲು ಹರ್ಷಿಸ್ ಕಿಸೆಸ್ ಮುಂಚೂಣಿಯಲ್ಲಿ ಇರಲಿದೆ' ಎಂದು ಹೇಳಿದರು.


ಉತ್ಪನ್ನ ಬಿಡುಗಡೆ ಸಂದರ್ಭದಲ್ಲಿ ಬ್ರಾಂಡ್‍ನ ಭವಿಷ್ಯದ ಯೋಜನೆ ಕುರಿತು ಮಾತನಾಡಿದ ಹರ್ಷೆ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹರ್ಜಿತ್ ಭಲ್ಲಾ ಅವರು, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹರ್ಷಿಸ್ ವಿವಿಧ ಉತ್ಪನ್ನಗಳನ್ನು ಬಯಸುತ್ತಿರುವುದು ನಮಗೆ ಖುಷಿ ಮೂಡಿಸಿದೆ. ಅದು ಹರ್ಷೆಯ ಸಿರಪ್, ಮಿಲ್ಕ್ ಶೇಕ್ಸ್, ಕೊಕಾ ಪೌಡರ್ ಇರಬಹುದು. ಹರ್ಷೆಯು ಚಾಕೊಲೆಟ್ ವಲಯವನ್ನು ಪ್ರವೇಶಿಸುತ್ತಿರುವುದು ಹೆಚ್ಚು ಉತ್ಸುಕತೆ ಮೂಡಿಸಿದೆ. ನಮ್ಮ ಗ್ರಾಹಕರ ಸಮೀಕ್ಷೆಯ ಅನುಸಾರ ಭಾರತೀಯ ಗ್ರಾಹಕರು ಹರ್ಷಿಸ್ ಕಿಸೆಸ್ ಅನ್ನು ಇಷ್ಟಪಡುತ್ತಾರೆ. ಹರ್ಷೆ ಈಗ ಹೆಚ್ಚು ಸಂತಸವನ್ನು ಪಸರಿಸಲಿದೆ ಎಂದು ನಾವು ವಿಶ್ವಾಸಹೊಂದಿದ್ದೇವೆ' ಎಂದರು.

ಭಾರತದಲ್ಲಿ ಹರ್ಷಿಸ್ ಬ್ಯಾಂಡ್ ಗೆ ದಶಕದ ಇತಿಹಾಸ

ಭಾರತದಲ್ಲಿ ಹರ್ಷಿಸ್ ಬ್ಯಾಂಡ್ ಗೆ ದಶಕದ ಇತಿಹಾಸ

ಹರ್ಷಿಸ್ ಕಿಸೆಸ್‍ನ ಮಿಲ್ಕ್ ಚಾಕೋಲೆಟ್‍ಗಳು ಭಿನ್ನ ದರ ಪಟ್ಟಿಯಲ್ಲಿ ಲಭ್ಯವಿದೆ. 36 ಗ್ರಾಂ ತೂಕದ ಸಣ್ಣ ಪ್ಯಾಕ್ ರೂ. 50, 108 ಗ್ರಾಂ ತೂಕದ ದೊಡ್ಡ ಪ್ಯಾಕ್ ರೂ. 140 ದರದಲ್ಲಿ ಲಭ್ಯವಿದೆ. ಬಿಡುಗಡೆಯ ಸಂದರ್ಭದಲ್ಲಿ ಹರ್ಷಿಸ್ ಕಿಸೆಸ್ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಲಭ್ಯವಿದೆ. ಇದು, ಆಧುನಿಕ ಶೈಲಿ ಮಾರಾಟ ಮಳಿಗೆ, ಜನರಲ್ ಟ್ರೇಡ್ ಮತ್ತು ಇ-ಕಾಂ ಮಳಿಗೆಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಹರ್ಷಿಸ್ ಬ್ಯಾಂಡ್ ಗೆ ದಶಕದ ಇತಿಹಾಸವಿದ್ದು, ಹರ್ಷಿಸ್ ಚಾಕೊಲೆಟ್ ಸಿರಪ್ ಜೊತೆಗೆ ಆರಂಭವಾಯಿತು.

ಹರ್ಷಿಸ್ ಸರಣಿಯ ಉತ್ಪನ್ನಗಳು ದೇಶಾದ್ಯಂತ ಅನೇಕ ಕುಟುಂಬಗಳಿಗೆ ಪಾತ್ರವಾಗಿದೆ. ಹರ್ಷಿಸ್ ಸ್ಪಷ್ಟವಾಗಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇದ್ದು, ಚಾಕೊಲೆಟ್ ಸಿರಪ್, ಕೋಕಾ ಪೌಡರ್ ಇದೆ. ಎರಡು ವರ್ಷಕ್ಕೂ ಹಿಂದೆ ಹರ್ಷಿಸ್ ಸ್ವಾದಿಷ್ಟವಾದ ಮಿಲ್ಕ್ ಶೇಕ್ ಮತ್ತು ಚಾಕೊಲೇಟ್ ಸ್ಪ್ರೆಡ್ ಅನ್ನು ಬಿಡುಗಡೆ ಮಾಡಿತು.

ಚಾಕೊಲೆಟ್ ಸ್ಪ್ರೆಡ್‍ನಲ್ಲಿ ಹರ್ಷಿಸ್ ನಂ. 2 ಬ್ರಾಂಡ್

ಚಾಕೊಲೆಟ್ ಸ್ಪ್ರೆಡ್‍ನಲ್ಲಿ ಹರ್ಷಿಸ್ ನಂ. 2 ಬ್ರಾಂಡ್

2018ರಲ್ಲಿ ಚಾಕೊಲೆಟ್ ಸ್ಪ್ರೆಡ್‍ನಲ್ಲಿ ಹರ್ಷಿಸ್ ನಂ. 2 ಬ್ರಾಂಡ್ ಆಗಿದ್ದು, ಮಿಲ್ಕ್ ಶೇಕ್‍ನಲ್ಲಿ ನಂ. 3 ಬ್ರಾಂಡ್ ಆಗಿದೆ. ಇಂದು ಹರ್ಷೆ ಉತ್ಪನ್ನಗಳು ಸಮಾರಂಭದಲ್ಲಿ ಬಳಕೆಯಾಗುತ್ತಿದೆ. ಅದು ಬೆಳಗಿನ ಹಾಲು, ಉಪಾಹಾರ, ಶಾಲೆಯ ಟಿಫಿನ್ ಬಾಕ್ಸ್, ಸ್ನ್ಯಾಕಿಂಗ್ಸ್, ಪಾನೀಯ, ಡೆಸರ್ಟ್‍ಗಳ ಜೊತೆಗೆ ಬಳಕೆಯಾಗುತ್ತಿದೆ ಹರ್ಷಿಸ್ ಕಿಸೆಸ್ ದೇಶದಲ್ಲಿ ಬ್ರಾಂಡ್ ಪ್ರಗತಿಯನ್ನು ಇನ್ನಷ್ಟು ಎತ್ತರಿಸಲಿದೆ.

ಹರ್ಷೆ ಕಂಪನಿ ಚಾಕೊಲೆಟ್ ಉತ್ಪಾದನೆಯಲ್ಲಿ 125 ವರ್ಷಗಳ ಇತಿಹಾಸ ಹೊಂದಿದ್ದು, ಭಾರತದಲ್ಲಿ ಈಗ ಹರ್ಷಿಸ್ ಕಿಸೆಸ್ ಬಿಡುಗಡೆ ಮಾಡಿದೆ. ಕಂಪನಿ ಫಾರ್ಚ್ಯೂನ್ 500 ಪಟ್ಟಿಯಲ್ಲಿದ್ದು, ವಿಶ್ವದರ್ಜೆಯ ಉತ್ಪಾದನಾ ಅನುಭವ ಹೊಂದಿದೆ. ಕಂಪನಿ ನಿತ್ಯ 70 ಮಿಲಿಯನ್ ಹರ್ಷಿಸ್ ಕಿಸೆಸ್ ಉತ್ಪಾದಿಸುತ್ತಿದ್ದು, ಸುಮಾರು 60 ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ.

 ಹರ್ಷೆ ಕಂಪನಿ ಕುರಿತು

ಹರ್ಷೆ ಕಂಪನಿ ಕುರಿತು

ಹರ್ಷೆ ಕಂಪನಿಯ ಮುಖ್ಯ ಕಚೇರಿಯು ಹರ್ಷೆ, ಪಿ.ಎ., ಯಲ್ಲಿ ಇದ್ದು, ಸ್ನ್ಯಾಕ್‍ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇರುವ ಕಂಪನಿಯಾಗಿದೆ. ಹರ್ಷೆ ಸುಮಾರು 17,000 ಸಿಬ್ಬಂದಿಯನ್ನು ವಿಶ್ವದಾದ್ಯಂತ ಹೊಂದಿದ್ದು, ಸ್ವಾದಿಷ್ಟವಾದ, ಗುಣಮಟ್ಟದ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಸುಮಾರು 80 ಬ್ರಾಂಡ್ ಗಳನ್ನು ಹೊಂದಿದ್ದು, $ 7.5 ಬಿಲಿಯನ್ ವಾರ್ಷಿಕ ವಹಿವಾಟು ಹೊಂದಿದೆ. ಇದರ ಮುಂಚೂಣಿ ಬ್ರ್ಯಾಂಡ್‍ಗಳಲ್ಲಿ ಹರ್ಷಿಸ್ ರೀಸೀ, ಕಿಟ್ ಕ್ಯಾಟ್, ಜಾಲಿ ರ್ಯಾಂಚರ್, ಐಸ್ ಬ್ರೇಕರ್ಸ್, ಸ್ಕಿನ್ನಿ ಪಾಪ್ ಹೊಂದಿದೆ. 120ಕ್ಕೂ ಹೆಚ್ಚು ವರ್ಷಗಳಲ್ಲಿ ಹರ್ಷೆ ನ್ಯಾಯಸಮ್ಮತವಾದ, ನೈತಿಕ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದೆ. ಹರ್ಷೆ ಕಂಪನಿಯ ಸ್ಥಾಪಕರಾದ ಮಿಲ್ಟನ್ ಹರ್ಷೆ ಅವರು 1909ರಲ್ಲಿ ಮಿಲ್ಟನ್ ಹರ್ಷೆ ಸ್ಕೂಲ್ ಅನ್ನು ಸ್ಥಾಪಿಸಿದ್ದು, ಅಂದಿನಿಂದಲೂ ಕಂಪನಿಯು ಮಕ್ಕಳ ಶ್ರೇಯೋಭಿವೃದ್ಧಿಗೂ ಒತ್ತು ನೀಡುತ್ತಿದೆ.

English summary
Hershey India Pvt Ltd, a part of The Hershey Company, a leading global snacking giant and the largest producer of quality chocolates in North America, has launched its iconic and much-loved ‘Hershey’s Kisses’ chocolate brand in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X