ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀರೋ ಮೊಟೊಕಾರ್ಪ್ ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ: ಈ ಬೈಕ್‌ಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ!

|
Google Oneindia Kannada News

ನವದೆಹಲಿ, ನವೆಂಬರ್ 26: ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನಗಳ ತಯಾರಕ ಹೀರೋ ಮೊಟೊಕಾರ್ಪ್ ದೇಶೀಯ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಪ್ರಮಾಣವನ್ನು ದಾಖಲಿಸಿದೆ. 2020 ರ ಅಕ್ಟೋಬರ್ ತಿಂಗಳಿಗೆ ಕಂಪನಿಯು ಹಂಚಿಕೊಂಡ ಇತ್ತೀಚಿನ ಮಾರಾಟ ಅಂಕಿಅಂಶಗಳು ಹೀರೊ ಕಂಪನಿಯ ದ್ವಿಚಕ್ರ ವಾಹನಗಳ ಬೇಡಿಕೆಗೆ ಸ್ಪಷ್ಪ ಉದಾಹರಣೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿರುವ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.

 ಸುಜುಕಿ ವಿ-ಸ್ಟ್ರೋಮ್ 650XT ABS ಬೈಕ್ ಬಿಡುಗಡೆ: ಬೆಲೆ 8.84 ಲಕ್ಷ ರೂಪಾಯಿ ಸುಜುಕಿ ವಿ-ಸ್ಟ್ರೋಮ್ 650XT ABS ಬೈಕ್ ಬಿಡುಗಡೆ: ಬೆಲೆ 8.84 ಲಕ್ಷ ರೂಪಾಯಿ

ದೇಶೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ

ದೇಶೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ

ಹೀರೋ ಮೊಟೊಕಾರ್ಪ್ ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಒಟ್ಟು 7,91,137 ದ್ವಿಚಕ್ರ ವಾಹನಗಳನ್ನು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ 15,711 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 34.78 ರಷ್ಟು ಮತ್ತು ತಿಂಗಳಿಂದ ತಿಂಗಳಿಗೆ ಶೇಕಡಾ 13.46ರಷ್ಟು ಏರಿಕೆ ಕಂಡಿದೆ.


ಕಳೆದ ವರ್ಷ ಹೀರೋ ಇದೇ ಅವಧಿಯಲ್ಲಿ 5,86,988 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಕಂಪನಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ 6,97,293 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್‌ಗೆ ಅಗ್ರಸ್ಥಾನ

ದೇಶೀಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್‌ಗೆ ಅಗ್ರಸ್ಥಾನ

ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಮಾರಾಟದಲ್ಲಿ ಹೀರೋ ಬೈಕ್‌ಗಳಲ್ಲಿ ಸ್ಪ್ಲೆಂಡರ್ ಅತಿ ಹೆಚ್ಚು ಮಾರಾಟವಾದ ಬೈಕ್ ಆಗಿದೆ. ಹೀರೋ ಮೊಟೊಕಾರ್ಪ್ ಎಂಟ್ರಿ ಲೆವೆಲ್ ಬೈಕ್‌ನ 3,15,798 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 19.56ರಷ್ಟು ಮತ್ತು ತಿಂಗಳಿಂದ ತಿಂಗಳಿಗೆ ಶೇಕಡಾ 12.68 ರಷ್ಟು ಬೆಳವಣಿಗೆಯಾಗಿದೆ.

ಕಂಪನಿಯು ಅಕ್ಟೋಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಕ್ರಮವಾಗಿ 2,64,137 ಮತ್ತು 2,80,250 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರ ನಂತರ ಮತ್ತೊಂದು ಮೋಟಾರ್‌ಸೈಕಲ್ ಎಚ್‌ಎಫ್ ಡಿಲಕ್ಸ್ ಈ ವರ್ಷದ ಅಕ್ಟೋಬರ್‌ನಲ್ಲಿ 2,33,061 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ರಾಯಲ್‌ ಎನ್‌ಫೀಲ್ಡ್‌ ಬೈಕ್‌ : ಅರ್ಧ ಬೆಲೆಗೆ ಬುಲೆಟ್‌ ಬೈಕ್ ಖರೀದಿಸುವುದು ಹೇಗೆ?ರಾಯಲ್‌ ಎನ್‌ಫೀಲ್ಡ್‌ ಬೈಕ್‌ : ಅರ್ಧ ಬೆಲೆಗೆ ಬುಲೆಟ್‌ ಬೈಕ್ ಖರೀದಿಸುವುದು ಹೇಗೆ?

ಹೀರೊ ಸ್ಪ್ಲೆಂಡರ್ ಬಳಿಕ ಹೆಚ್‌ಎಫ್ ಡಿಲಕ್ಸ್ ಹೆಚ್ಚು ಮಾರಾಟ

ಹೀರೊ ಸ್ಪ್ಲೆಂಡರ್ ಬಳಿಕ ಹೆಚ್‌ಎಫ್ ಡಿಲಕ್ಸ್ ಹೆಚ್ಚು ಮಾರಾಟ

ಹೀರೋ 100 ಸಿಸಿ ಬೈಕ್ ದಾಖಲೆಯ ಮಟ್ಟದಲ್ಲಿ ಮಾರಾಟ ಕಂಡಿದ್ದು ಸ್ಪ್ಲೆಂಡರ್ ಬಳಿಕ ಹೆಚ್‌ಎಫ್ ಡಿಲ್ಸ್‌ ಬೈಕ್ ಸಹ 6 ಅಂಕಿಯ ಮಾರಾಟ ಅಂಕಿ ಅಂಶಗಳನ್ನು ದಾಖಲಿಸಿದ ಎರಡನೇ ಬೈಕ್ ಆಗಿದೆ. ಕಳೆದ ತಿಂಗಳು ಅಕ್ಟೊಬರ್‌ನಲ್ಲಿ 2,33,061 ಬೈಕ್‌ಗಳು ಮಾರಾಟಗೊಂಡಿವೆ. ಆದರೆ ಕಳೆದ ವರ್ಷ ಇದೇ ತಿಂಗಳಿನಲ್ಲಿ 1,85,751 ಬೈಕ್‌ಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದವು.


ಈ ಎರಡು ಬೈಕ್ ಹೊರತುಪಡಿಸಿ ಗ್ಲಾಮರ್, ಪ್ಯಾಶನ್, ಡೆಸ್ಟಿನಿ 125 ಹೆಚ್ಚು ಮಾರಾಟಗೊಂಡ ಬೈಕ್‌ಗಳಾಗಿವೆ.

ಡೆಸ್ಟಿನಿ 125 ಕಡೆಗೆ ಗ್ರಾಹಕರ ಒಲವು

ಡೆಸ್ಟಿನಿ 125 ಕಡೆಗೆ ಗ್ರಾಹಕರ ಒಲವು

2020ರ ಅಕ್ಟೋಬರ್‌ ತಿಂಗಳಲ್ಲಿ ಹೀರೋ ಡೆಸ್ಟಿನಿ 125 ಸ್ಕೂಟರ್ ಒಟ್ಟು 26,714 ಯುನಿಟ್‌ಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಶೇ.157.58 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಹೀರೋ ಡೆಸ್ಟಿನಿ 10,371 ಯುನಿಟ್‌ಗಳು ಮಾರಾಟವಾಗಿತ್ತು. ಇನ್ನು ಈ ಡೆಸ್ಟಿನಿ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

English summary
Hero MotoCorp sold a total of 7,91,137 two-wheelers in the domestic market and 15,711 two-wheelers in overseas markets in October 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X