ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀರೋ ವಾಹನ ಈ ತಿಂಗಳೇ ಖರೀದಿಸಿ, 2021ರಲ್ಲಿ ಬೆಲೆ ಏರಿಕೆ!

|
Google Oneindia Kannada News

ಬೆಂಗಳೂರು, ಡಿ.17: ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನಗಳ ತಯಾರಕ ಹೀರೋ ಮೊಟೊಕಾರ್ಪ್ ವರ್ಷಾಂತ್ಯದಲ್ಲಿ ಮಾರಾಟದಲ್ಲಿ ಚೇತರಿಕೆ ಕಂಡರೂ ಬೆಲೆ ಏರಿಕೆ ಮಾಡಲು ಮುಂದಾಗಿರುವ ಸುದ್ದಿ ಬಂದಿದೆ.

ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ್ದ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿತ್ತು. ಆದರೆ, ಲಭ್ಯ ಮಾಹಿತಿಯಂತೆ 2021ರ ಜನವರಿಯಿಂದ ಎಲ್ಲಾ ಮಾದರಿ ದ್ವಿಚಕ್ರವಾಹನಗಳ ಬೆಲೆಯನ್ನು 1,500ರು ನಷ್ಟು ಏರಿಕೆ ಮಾಡಲು ಹೀರೋ ಮೋಟೋಕಾರ್ಪ್ ನಿರ್ಧರಿಸಿದೆ.

"ಉಕ್ಕು, ಅಲ್ಯುಮಿನಿಯಂ, ಪ್ಲಾಸ್ಟಿಕ್, ಕಚ್ಚಾವಸ್ತುವಾಗಿ ಬಳಸುವ ವಿವಿಧ ಲೋಹಗಳ ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಹಾಗೂ ಮಾರಾಟದ ಅಂಕಿ ಅಂಶ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳುವುದು ಅನಿವಾರ್ಯ. ಗ್ರಾಹಕರ ಮೇಲೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ'' ಎಂದು ಹೀರೋ ಮೋಟೋಕಾರ್ಪ್ ಹೇಳಿದೆ.

Hero MotoCorp to increase prices by up to Rs 1,500 from Jan 2021

ಜನವರಿ 1, 2021ರಿಂದ ಎಲ್ಲಾ ಬಗೆಯ ವಾಹನಗಳ ಮೇಲೆ 1,500 ರು ಬೆಲೆ ಏರಿಕೆ ಘೋಷಿಸಲಾಗಿದೆ. ಆದರೆ, ನಿಖರವಾದ ಬೆಲೆ ಏರಿಕೆ ಪ್ರಮಾಣದಲ್ಲಿ ವ್ಯತ್ಯಾಸ ಸಾಧ್ಯತೆಯಿದೆ. ವಿವಿಧ ನಗರಗಳ ಡೀಲರ್ ಗಳಿಗೆ ಪರಿಷ್ಕೃತ ದರದ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಈಗಾಗಲೇ ಬೆಲೆ ಏರಿಕೆ ಮುನ್ಸೂಚನೆ ನೀಡಿವೆ. ಉತ್ಪಾದನೆಗೆ ಬೇಕಾದ ಕಚ್ಚಾವಸ್ತು ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಸರಿದೂಗಿಸಲು ಇದು ಅನಿವಾರ್ಯ ಎಂದು ಎಲ್ಲಾ ಸಂಸ್ಥೆಗಳು ಹೇಳಿವೆ.(ಪಿಟಿಐ)

English summary
Two-wheeler market leader Hero MotoCorp on Wednesday said it will increase prices of its vehicles by up to Rs 1,500 from January 1, 2021, to offset impact of rising input costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X