ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ಜನಪ್ರಿಯ ದ್ವಿಚಕ್ರ ವಾಹನಗಳ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 23: ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನಗಳ ತಯಾರಕ ಹೀರೋ ಮೊಟೊಕಾರ್ಪ್ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಆದರೆ, ಜುಲೈ 1ರಿಂದ ಬೆಲೆ ಏರಿಕೆ ಮಾಡಲು ಮುಂದಾಗಿರುವ ಸುದ್ದಿ ಬಂದಿದೆ. ಹೀರೋ ಮೋಟೋಕಾರ್ಪ್ ಮೋಟರ್ ಸೈಕಲ್, ಸ್ಕೂಟರ್ ಬೆಲೆ ಏರಿಕೆಯಾಗಲಿದೆ.

ಸರಕು ಬೆಲೆಗಳು ಸೇರಿದಂತೆ ಸ್ಥಿರವಾಗಿ ಏರಿಕೆಯಾಗುತ್ತಿರುವ ಒಟ್ಟಾರೆ ವೆಚ್ಚದ ಹಣದುಬ್ಬರವನ್ನು ಭಾಗಶಃ ಸರಿದೂಗಿಸಲು ವಾಹನಗಳ ಬೆಲೆ ಏರಿಕೆ ಅನಿವಾರ್ಯ ಎಂದು ಷೇರುಪೇಟೆಗೆ ಹೀರೋಮೋಟೋಕಾರ್ಪ್ ತಿಳಿಸಿದೆ. "ಈ ಬಾರಿ ಬೆಲೆ ಹೆಚ್ಚಳವು ನಿಖರವಾದ ಪ್ರಮಾಣ, ನಿರ್ದಿಷ್ಟ ಮಾದರಿ ಮತ್ತು ಮಾರುಕಟ್ಟೆಗೆ ಒಳಪಟ್ಟಿರುತ್ತದೆ" ಎಂದು ಕಂಪನಿ ಹೇಳಿದೆ.

Hero MotoCorp to hike motorcycle, scooter prices by up to Rs 3,000 from July 1

ಪೂರ್ಣಪ್ರಮಾಣದ ಬೆಲೆ ಏರಿಕೆ ವಿವರ ಲಭ್ಯವಿಲ್ಲದಿದ್ದರೂ, ಹೀರೋ ಮೋಟೋಕಾರ್ಪ್ ಪ್ರವೇಶ ಮಟ್ಟದ HF100 ನಿಂದ ಹಿಡಿದು 51,450 ರೂಗಳಿಂದ ಪ್ರಾರಂಭವಾಗುವ ಮಾದರಿಗಳ ಶ್ರೇಣಿಯನ್ನು ಮಾರಾಟ ಮಾಡುತ್ತದೆ, ಆದರೆ Xpulse 200 4V 1.32 ಲಕ್ಷಕ್ಕೆ (ಎಕ್ಸ್ ಶೋ ರೂಂ ದೆಹಲಿ) ನಿಗದಿ ಪಡಿಸಲಾಗಿದೆ. ಒಟ್ಟಾರೆ, ಮೋಟರ್ ಸೈಕಲ್ ಹಾಗೂ ಸ್ಕೂಟರ್ ಬೆಲೆ 3,000 ರು ತನಕ ಏರಿಕೆ ಕಾಣಲಿದೆ.

15 ವರ್ಷ ಮೇಲ್ಪಟ್ಟ ವಾಹನಕ್ಕೆ FC ಇಲ್ಲದಿದ್ದರೆ ದಿನಕ್ಕೆ 50 ರೂಪಾಯಿ ದಂಡ ಫಿಕ್ಸ್!15 ವರ್ಷ ಮೇಲ್ಪಟ್ಟ ವಾಹನಕ್ಕೆ FC ಇಲ್ಲದಿದ್ದರೆ ದಿನಕ್ಕೆ 50 ರೂಪಾಯಿ ದಂಡ ಫಿಕ್ಸ್!

2021ರ ಜನವರಿಯಿಂದ ಎಲ್ಲಾ ಮಾದರಿ ದ್ವಿಚಕ್ರವಾಹನಗಳ ಬೆಲೆಯನ್ನು 1,500ರು ನಷ್ಟು ಹೀರೋ ಮೋಟೋಕಾರ್ಪ್ ಏರಿಕೆ ಮಾಡಿತ್ತು.

"ಉಕ್ಕು, ಅಲ್ಯುಮಿನಿಯಂ, ಪ್ಲಾಸ್ಟಿಕ್, ಕಚ್ಚಾವಸ್ತುವಾಗಿ ಬಳಸುವ ವಿವಿಧ ಲೋಹಗಳ ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಹಾಗೂ ಮಾರಾಟದ ಅಂಕಿ ಅಂಶ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳುವುದು ಅನಿವಾರ್ಯ. ಗ್ರಾಹಕರ ಮೇಲೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ'' ಎಂದು ಹೀರೋ ಮೋಟೋಕಾರ್ಪ್ ಹೇಳಿದೆ.

ಉತ್ಪಾದನೆಗೆ ಬೇಕಾದ ಕಚ್ಚಾವಸ್ತು ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಸರಿದೂಗಿಸಲು ಇದು ಅನಿವಾರ್ಯ ಎಂದು ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಒಂದು ಸುತ್ತಿನ ಬೆಲೆ ಏರಿಕೆ ಮಾಡಿ ಆಗಿವೆ.

Hero MotoCorp to hike motorcycle, scooter prices by up to Rs 3,000 from July 1

ಈ ವರ್ಷದ ಮಾರ್ಚ್‌ನಲ್ಲಿ, ಉತ್ಪಾದನಾ ವೆಚ್ಚ ಸರಿದೂಗಿಸಲು ಕಂಪನಿಯು ತನ್ನ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಎಕ್ಸ್-ಶೋರೂಂ ಬೆಲೆಗಳನ್ನು ಏಪ್ರಿಲ್ 5, 2022 ರಿಂದ ರೂ 2,000 ವರೆಗೆ ಹೆಚ್ಚಿಸುವುದಾಗಿ ಘೋಷಿಸಿತ್ತು.

ಮೇ ತಿಂಗಳಲ್ಲಿ ಒಟ್ಟು 4,86,704 ಯುನಿಟ್‌ಗಳ ಮಾರಾಟವನ್ನು ವರದಿ ಮಾಡಿದೆ. ಈ ವರ್ಷದ ಏಪ್ರಿಲ್‌ನಲ್ಲಿ 4,18,622 ಯುನಿಟ್‌ಗಳನ್ನು ಮತ್ತು ಮೇ 2021 ರಲ್ಲಿ 1,83,044 ಯುನಿಟ್‌ಗಳನ್ನು ಮಾರಾಟ ಮಾಡಿದ್ದು,ಕೋವಿಡ್ 19 ಎರಡನೇ ಅಲೆಯಿಂದಾಗಿ ಮಾರಾಟದ ಮೇಲೆ ಪರಿಣಾಮ ಬೀರಿತ್ತು.ಕಳೆದ ತಿಂಗಳು ದೇಶಿ ಮಾರಾಟ 4,66,466 ಯುನಿಟ್‌ಗಳಷ್ಟಿತ್ತು. ಕಂಪನಿಯು ಮೇ 2021 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,59,561 ಯುನಿಟ್‌ಗಳನ್ನು ರವಾನಿಸಿದೆ.

ಮೇ ತಿಂಗಳಿನಿಂದ ನಿರಂತರವಾಗಿ ಗ್ರಾಹಕರ ಖರೀದಿ ಭಾವನೆ ಸುಧಾರಿಸಿದೆ ಮತ್ತು ಮುಂಗಾರು ಸಾಮಾನ್ಯವಾಗಿದ್ದು, ಯೋಗ್ಯವಾದ ರಬಿ ಕೊಯ್ಲು ಮತ್ತು ಮುಂದುವರಿದ ಸರ್ಕಾರದ ನೀತಿ ಬೆಂಬಲದ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಕಂಪನಿಯು ನಿರೀಕ್ಷಿಸುತ್ತದೆ ಎಂದು ಹೀರೋ ಮೋಟೊಕಾರ್ಪ್ ಗಮನಿಸಿದೆ.

ಹೀರೋಮೋಟೋಕಾರ್ಪ್ ಷೇರುಗಳು ಬಿಎಸ್ಇಯಲ್ಲಿ 150.35 ರು ಏರಿಕೆ ಕಂಡು 2,674.10 ರು ಗೇರಿದೆ.

English summary
Two-wheeler maker Hero MotoCorp on Thursday said it will hike prices of motorcycles and scooters by up to Rs 3,000 from July 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X