ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಯೋನೀರ್ ಏಷ್ಯಾ ಗ್ರೂಪ್‌ಗೆ 12 ಎಲೆಕ್ಟ್ರಿಕ್ ಬೈಕು ವಿತರಿಸಿದ ಹೀರೋ

|
Google Oneindia Kannada News

ನವದೆಹಲಿ, ಜನವರಿ 06: ಶಿವಕಾಶಿ ಮೂಲದ ಪಯೋನಿರ್ ಏಷ್ಯಾ ಗ್ರೂಪ್‌ಗೆ, ತನ್ನ 12 ಎಲೆಕ್ಟ್ರಿಕ್ ಬೈಕು ಆಪ್ಟಿಮಾ ಎಚ್‌ಎಕ್ಸ್ ಅನ್ನು ಹೀರೋ ಎಲೆಕ್ಟ್ರಿಕ್ ವಿತರಿಸಿದ್ದು, ಜೊತೆಗೆ ಹೆಚ್ಚಿನ ಆರ್ಡರ್‌ಗಳು ಪಡೆಯುವ ಚರ್ಚೆ ನಡೆಯುತ್ತಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ.

ಇತ್ತೀಚೆಗೆ ಆಪ್ಟಿಮಾ ಎಚ್‌ಎಕ್ಸ್‌ ಹೊಸ ರೂಪಾಂತರ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಗೊಂಡವು. ಪಯೋನಿರ್ ಏಷ್ಯಾ ಗ್ರೂಪ್‌ ತನ್ನ ಉದ್ಯೋಗಿಗಳಗಿಎ ಕೆಲಸದ ನಿಮಿತ್ತ ಸ್ಕೂಟರ್‌ಗಳನ್ನು ವಿತರಿಸುತ್ತಿದೆ. ಪಯೋನೀರ್ ಏಷ್ಯಾ ಗ್ರೂಪ್ ಕಾರ್ಖಾನೆಯ ಸಿಬ್ಬಂದಿ ಸೇರಿದಂತೆ 400 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ.

ಹೊಸೂರಿನಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ತೆರೆಯಲಿರುವ ಓಲಾಹೊಸೂರಿನಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ತೆರೆಯಲಿರುವ ಓಲಾ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಗೂ ಪರಿಸರ ಸ್ನೇಹಿಯಾಗಿರುವುದರಿಂದ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೊರೆ ಹೋಗಿದೆ. ಹೀಗಾಗಿ ಮುಂದಿನ ತಿಂಗಳುಗಳಲ್ಲಿ ಕಂಪನಿಗೆ ಹೆಚ್ಚಿನ ಎಲೆಕ್ಟ್ರಿಕ್ ಬೈಕುಗಳನ್ನು ತಲುಪಿಸಲಿದೆ ಎಂದು ಹೀರೋ ಎಲೆಕ್ಟ್ರಿಕ್ ಪ್ರಕಟಣೆಯಲ್ಲಿ ತಿಳಿಸಿದೆ.

 Hero Electric Delivers First 12 E-Bikes To Pioneer Asia Group

ಆಪ್ಟಿಮಾ ಎಚ್‌ಎಕ್ಸ್ ಅನ್ನು ಇತ್ತೀಚೆಗೆ ಹೀರೋ ಬಿಡುಗಡೆ ಮಾಡಿತು. ಎಲೆಕ್ಟ್ರಿನ್ ದ್ವಿಚಕ್ರ ವಾಹನಗಳು ಕಡಿಮೆ ವೆಚ್ಚ, ಹೆಚ್ಚಿನ ಕಾರ್ಯಕ್ಷಮತೆ, ಹಣಕ್ಕೆ ಉತ್ತಮ ಮೌಲ್ಯವನ್ನು ಖಾತ್ರಿಪಡಿಸುತ್ತದೆ ಎಂದು ಕಂಪನಿಯು ತಿಳಿಸಿದೆ.

English summary
EV maker Hero Electric on Wednesday said it has delivered the first 12 e-bikes to Sivakasi-based Pioneer Asia Group for employees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X