ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋ

|
Google Oneindia Kannada News

ನವದೆಹಲಿ, ಜುಲೈ 6: ಲಡಾಕ್ ಪೂರ್ವದ ಗಾಲ್ವಾನ್ ಪ್ರದೇಶದಲ್ಲಿ ಭಾರತೀಯ ಯೋಧರ ಜೊತೆ ಸಂಘರ್ಷಕ್ಕಿಳಿದ ಚೀನಾಕ್ಕೆ ಪಾಠ ಕಲಿಸಲು ಭಾರತದ ಹಲವು ಸಂಸ್ಥೆಗಳು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಚೀನಾಕ್ಕೆ ಹೊಡೆತ ಬಿದ್ದ ಬೆನ್ನಲ್ಲೇ ಬೇರೆ ಬೇರೆ ಕ್ಷೇತ್ರದಲ್ಲೂ ಸ್ವದೇಶಿ ಮಂತ ಹೆಚ್ಚಾಗಿದೆ. ಚೀನಾ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಭಾರತದ ಪ್ರಮುಖ ಬೈಸಿಕಲ್ ಸಂಸ್ಥೆ ಹೀರೋ ಸೈಕಲ್ಸ್ ಘೋಷಿಸಿದೆ.

ಹೀರೋ ಸೈಕಲ್ಸ್ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮುಂಜಾಲ್ ಅವರು ಈ ಬಗ್ಗೆ ತಿಳಿಸಿದ್ದು, ಚೀನಾದ ಕಂಪನಿಗಳ ಜೊತೆ ಮಾಡಿಕೊಂಡಿದ್ದ 900 ಕೋಟಿ ರು ಗೂ ಅಧಿಕ ಮೌಲ್ಯದ ಒಪ್ಪಂದವನ್ನು ಮುರಿದುಕೊಂಡಿದ್ದೇವೆ ಎಂದಿದ್ದಾರೆ. ಇದಲ್ಲದೆ, ಚೀನಾದಿಂದ ಯಾವುದೇ ಕಚ್ಚಾವಸ್ತು ಆಮದು ಮಾಡಿಕೊಳ್ಳದಿರಲು ನಿರ್ಧರಿಸಲಾಗಿದ್ದು, ಯಾವುದೇ ರೀತಿ ವ್ಯಾಪಾರ, ವಹಿವಾಟು ಸಂಬಂಧವನ್ನು ಇನ್ಮುಂದೆ ಕೂಡಾ ಇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್: ಶಾಶ್ವತವಾಗಿ ಕಂಪನಿ ಕ್ಲೋಸ್ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್: ಶಾಶ್ವತವಾಗಿ ಕಂಪನಿ ಕ್ಲೋಸ್

ಭಾರತದಲ್ಲಿ ಹೈಟೆಕ್ ಸೈಕಲ್ ತಯಾರಿಕೆಯನ್ನು ಮುಂದುವರೆಸಲಿದ್ದು, ಸ್ವದೇಶಿ ನಿರ್ಮಿತ ಸೈಕಲ್ ಬಳಕೆಗೆ ಹೆಚ್ಚು ಪ್ರಚಾರ ನೀಡಲಿದ್ದೇವೆ ಎಂದರು. ಇದಲ್ಲದೆ, ಜರ್ಮನಿಯಲ್ಲಿ ಹೀರೋ ಸೈಕಲ್ಸ್ ತನ್ನ ಘಟಕ ಸ್ಥಾಪಿಸಲು ಮುಂದಾಗಿದ್ದು, ಇದು ಯುರೋಪಿಯನ್ ರಾಷ್ಟ್ರಗಳ ಜೊತೆಗಿನ ವಹಿವಾಟಿಗೆ ಹೆಬ್ಬಾಗಿಲು ತೆರೆದಂತಾಗುತ್ತದೆ ಎಂದರು.

Hero Cycles Cancels Rs 900 Crore Trade Deal With China

ಲೂಧಿಯಾನಾದ ಧನಂಶು ಗ್ರಾಮದಲ್ಲಿರುವ ಸೈಕಲ್ ವ್ಯಾಲಿ ಘಟಕದ ಮೂಲಕ ಉತ್ತಮ ಗುಣಮಟ್ಟದ ಸೈಕಲ್ ಹಾಗೂ ಸಂಬಂಧಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಚೀನಾಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.

ಕೊರೊನಾದಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೇವೆ ಸ್ಥಗಿತಕೊರೊನಾದಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೇವೆ ಸ್ಥಗಿತ

1944ರಲ್ಲಿ ಓಂ ಪ್ರಕಾಶ್ ಮುಂಜಾಲ್ ತಮ್ಮ ಸಹೋದರರ ಜೊತೆಗೂಡಿ ಅಮೃತಸರದಲ್ಲಿ ಸೈಕಲ್ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಬಳಿಕ ಇವರೇ 1955ರಲ್ಲಿ ಲೂಧಿಯಾನದಲ್ಲಿ ಹೀರೋ ಸೈಕಲ್ ತಯಾರಿಕೆ ಕಾರ್ಖಾನೆ ಸ್ಥಾಪಿಸಿದರು. ಸೈಕಲ್ ಉತ್ಪಾದನೆ ಮಾಡುತ್ತಿದ್ದವರು, ಬಳಿಕ ಸೈಕಲ್ ಕಂಪನಿಗೆ ಒಡೆಯರಾದರು. 1986ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೈಕಲ್ ಉತ್ಪಾದನೆ ಮಾಡುವ ಕಂಪನಿ ಎಂಬ ಹೆಗ್ಗಳಿಕೆಯೊಂದಿಗೆ ಹೀರೋ ಸೈಕಲ್ ಕಂಪನಿ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ.

English summary
India’s leading bicycle makers – Hero Cycles, has cancelled an upcoming Rs 900 crore deal with China. Hero Cycles Chairman and Managing Director Pankaj Munjal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X