ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿರೋಧ ಶಕ್ತಿ ಹೆಚ್ಚಿಸುವ ಶುಂಠಿ, ತುಳಸಿ ಹೆರಿಟೇಜ್ ಮಿಲ್ಕ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಕೊರೊನಾವೈರಸ್ ಭೀತಿಯಲ್ಲಿರುವ ಗ್ರಾಹಕರ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಿ, ಹೆರಿಟೇಜ್ ಫುಡ್ಸ್ ವತಿಯಿಂದ ಶುಂಠಿ, ತುಳಸಿ ಮತ್ತು ಅರಸಿನ ಹಾಲನ್ನು ಬಿಡುಗಡೆ ಮಾಡಿದೆ.

ಹೆರಿಟೇಜ್ ಶುಂಠಿ ಹಾಲು ದೇಹದ ಉಷ್ಣಾಂಶ ನಿಯಂತ್ರಣಕ್ಕೆ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ದೇಹದ ಉಸಿರಾಟ ಕ್ರಿಯೆಗೆ ಉತ್ತಮವಾಗಿದ್ದು, ಪ್ರತಿರೋಧ ಶಕ್ತಿ ಉತ್ತೇಜಿಸಲು ಇದು ಸೂಕ್ತ ಆಯ್ಕೆ ಎನಿಸಿದೆ. ಇದಲ್ಲದೇ, ಶುಂಠಿ ದೇಹದ ಪಚನಕ್ರಿಯೆಯನ್ನು ಹೆಚ್ಚಿಸಲು ಕೂಡಾ ಉತ್ತಮ ಎಂದು ಸಾಬೀತಾಗಿದ್ದು, ಇದು ದೇಹವನ್ನು ಅರೋಗ್ಯಕರ ಮತ್ತು ಬಿಸಿಯಾಗಿಡುತ್ತದೆ. ಶುಂಠಿ ಹಾಲು ಗಂಟಲಿನ ಸೋಂಕಿನ ವಿರುದ್ಧ ಪ್ರಬಲ ಪರಿಣಾಮ ಬೀರಲಿದ್ದು, ಗಂಟಲು ನೋವಿಗೆ ಶಮನ ನೀಡಲಿದೆ.

ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಹೆರಿಟೇಜ್ ಫುಡ್ಸ್ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಹೆರಿಟೇಜ್ ಫುಡ್ಸ್

ಹೆರಿಟೇಜ್ ತುಳಸಿ ಹಾಲು ತುಳಸಿ ಸತ್ವ, ಕಾಮಕಸ್ತೂರಿ ಬೀಜ ಮತ್ತು ಪುದಿನ ಸತ್ವದಿಂದ ಕೂಡಿದೆ. ಹಾಲಿನಲ್ಲಿ ಸೇರಿರುವ ಈ ಗಿಡಮೂಲಿಕೆಗಳು, ಈ ಉತ್ಪನ್ನವನ್ನು ಉತ್ತಮ ಪ್ರತಿರೋಧ ರಕ್ಷಾಕವಚವನ್ನಾಗಿಸಿದೆ. ತುಳಸಿ ಪ್ರತಿರೋಧ ಶಕ್ತಿಗೆ ಅದರಲ್ಲೂ ಮುಖ್ಯವಾಗಿ ಹವಾಮಾನ ಬದಲಾವಣೆ ಸಂದರ್ಭಕ್ಕೆ ಅತ್ಯುತ್ತಮವಾಗಿದೆ. ತುಳಸಿ ಹಾಗೂ ಕಾಮಕಸ್ತೂರಿ ಬೀಜ, ಮನುಷ್ಯ ದೇಹಕ್ಕೆ ಉತ್ತಮವಾಗಿದ್ದು, ತಂಪುಗೊಳಿಸುವ ಸಾಧನವಾಗಿ ಕೆಲಸ ಮಾಡಲಿದೆ.

90 ದಿನಗಳ ಕಾಲ ಕೆಡದಂತೆ ಇರುತ್ತದೆ

90 ದಿನಗಳ ಕಾಲ ಕೆಡದಂತೆ ಇರುತ್ತದೆ

ಅಂತೆಯೇ ಅರಶಿನ ಉತ್ತಮ ಸೂಕ್ಷ್ಮಾಣು ಪ್ರತಿರೋಧ ಗುಣವನ್ನು ಹೊಂದಿದ್ದು, ಬ್ಯಾಕ್ಟೀರಿಯಾ ಹಾಗೂ ವೈರಸ್‍ನಿಂದ ಬರುವ ರೋಗಗಳ ತಡೆಗೆ ಉತ್ತಮವಾಗಿದ್ದು, ವಿಶ್ವಾದ್ಯಂತ ಅತ್ಯುತ್ತಮ ಆಹಾರ ಎನಿಸಿದೆ. ಅರಸಿನ, ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಕೂಡಾ ಉತ್ತಮ ಎಂದು ಸಾಬೀತಾಗಿದ್ದು, ಪರಿಪೂರ್ಣ ಪ್ರತಿರೋಧ ಶಕ್ತಿ ಉತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತದೆ.

ಈ ಕಾರ್ಯಾಚರಣೆ ಪ್ರಯೋಜನಗಳಿಂದ ಕೂಡಿರುವ ಹೆರಿಟೇಜ್ ಫುಡ್ಸ್ ಪ್ರತಿರೋಧ ಶಕ್ತಿ ಹೆಚ್ಚಿಸುವ ಹಾಲು, ಆರೋಗ್ಯದ ಬಗ್ಗೆ ಕಾಳಜಿ ಇರುವ ಹಾಗೂ ತಮ್ಮ ಮತ್ತು ಕುಟುಂಬದ ಸಮಗ್ರ ಆರೋಗ್ಯವನ್ನು ಖಾತರಿಪಡಿಸುವ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಸಕ್ತರಾದ ಪ್ರಗತಿಪರ ಹಾಗೂ ವಿವೇಚನಾ ಶಕ್ತಿಯ ಗ್ರಾಹಕರಿಗೆ ಆಕರ್ಷಕ ಹಾಗೂ ಮೆಚ್ಚುಗೆಯ ಉತ್ಪನ್ನವಾಗಲಿದೆ. ಈ ಹಾಲು 90 ದಿನಗಳ ಕಾಲ ಕೆಡದಂತೆ ಇರುತ್ತದೆ.

ಹೆರಿಟೇಜ್ ಪ್ರತಿರೋಧ ಶಕ್ತಿಯ ಹಾಲು

ಹೆರಿಟೇಜ್ ಪ್ರತಿರೋಧ ಶಕ್ತಿಯ ಹಾಲು

ಹೆರಿಟೇಜ್ ಪ್ರತಿರೋಧ ಶಕ್ತಿಯ ಹಾಲು, ಕೃತಕ ಪ್ರಿಸರ್ವೇಟಿವ್‍ಗಳಿಂದ ಮುಕ್ತವಾಗಿದ್ದು, ಎಲ್ಲ ಆಧುನಿಕ ಚಿಲ್ಲರೆ ಮಳಿಗೆಗಳು, ಇ-ಕಾಮರ್ಸ್ ಪ್ಲಾಟ್‍ಫಾರಂ, ಆಯ್ದ ಕಂಪನಿ ಮಳಿಗೆಗಳು ಮತ್ತು ಆಯ್ದ ಹೆರಿಟೇಜ್ ಪಾರ್ಲರ್‍ಗಳಲ್ಲಿ ಆಕರ್ಷಕ 170 ಎಂಎಲ್ ಪೆಟ್ ಬಾಟಲಿಗಳಲ್ಲಿ ಪ್ರತಿ ಬಾಟಲಿಗೆ 30 ರೂಪಾಯಿ ದರದಲ್ಲಿ ಲಭ್ಯ.

ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ

ಇದರೊಂದಿಗೆ ಹೆರಿಟೇಜ್ ಫುಡ್ಸ್ ಟಿಯುಸಿಎಚ್ ಆ್ಯಪ್ ಅನ್ನು ಹೈದರಾಬಾದ್‍ನಲ್ಲಿ ಬಿಡುಗಡೆ ಮಾಡಿದ್ದು, ಗ್ರಾಹಕರು ಎಲ್ಲ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆನ್‍ಲೈನ್‍ನಲ್ಲಿ ಈ ಆ್ಯಪ್ ಬಳಸಿಕೊಂಡು, ಮನೆಯಲ್ಲಿ ಆರಾಮದಾಯಕವಾಗಿ ಕುಳಿತೇ ಬುಕ್ಕಿಂಗ್ ಮಾಡಬಹುದಾಗಿದೆ.

ಆಕರ್ಷಕ ಕೂಕೀಸ್ ಅಂಡ್ ಕ್ರೀಮ್

ಆಕರ್ಷಕ ಕೂಕೀಸ್ ಅಂಡ್ ಕ್ರೀಮ್

ಗ್ರಾಹಕರು ಸದಾ ಹೊಸ ಸುಗಂಧದ ಐಸ್‍ಕ್ರೀಮ್‍ಗಳನ್ನು ಇಷ್ಟಪಡುತ್ತಾರೆ. ತಮ್ಮ ರುಚಿಕರ ಆಸಕ್ತರಿಗೆ ಔತಣ ಒದಗಿಸುವ ನಿಟ್ಟಿನಲ್ಲಿ ಹೆರಿಟೇಜ್ ಫುಡ್ಸ್ ಕ್ಲಾಸಿಕ್, ಯುನೀಕ್ ಮತ್ತು ಆಕರ್ಷಕ ಕೂಕೀಸ್ ಅಂಡ್ ಕ್ರೀಮ್, ಬೆರ್ರಿ ರಿಪ್ಪಲ್ ಮತ್ತು ಕಾರಮೆಲ್ ರಿಪ್ಪಲ್ ಹೊಸ ಸುಗಂಧಯುಕ್ತ ಐಸ್‍ಕ್ರೀಮ್‍ಗಳನ್ನು ಬಿಡುಗಡೆ ಮಾಡಿದೆ.

ಕೂಕೀಸ್ ಅಂಡ್ ಕ್ರೀಮ್ ಐಸ್‍ಕ್ರೀಮ್ ಸಮೃದ್ಧವಾದ ಕೂಕೀಸ್ ಸ್ವಾದವನ್ನು ಹೊಂದಿದ್ದು, ಸಮೃದ್ಧ ಡಾರ್ಕ್ ಕೂಕೀಸ್ ಮತ್ತು ಐಸ್‍ಕ್ರೀಂನ ಸಮ್ಮಿಶ್ರಣವಾಗಿದೆ. ಬೆರ್ರಿ ರಿಪ್ಪಲ್ ಐಸ್‍ಕ್ರೀಮ್‍ನಲ್ಲಿ ಬೆರ್ರಿ ರಿಪ್ಪಲ್ ಸಾಸ್ ಮತ್ತು ಕಲರ್ಡ್ ಚೋಕೊ ಬೀನ್ಸ್ ಹೇರಳವಾಗಿದೆ. ಕರಮೆಲ್ ರಿಪ್ಪಲ್‍ನಲ್ಲಿ ಕರಮೆಲ್ ಸಾಸ್ ಮತ್ತು ಮೋಜಿನ ಗರಿಗರಿಯಾದ ತುಣುಕುಗಳಿವೆ. ರಿಪ್ಪಲ್ ಐಸ್‍ಕ್ರೀಮ್‍ಗಳು ಬಾಯಿ ಚಪ್ಪರಿಸುವ ರುಚಿಯನ್ನು ಹೊಂದಿದ್ದು, ಇವು ಸಂಡೇವ್ ಪಾರದರ್ಶಕ ಕಪ್‍ಗಳಲ್ಲಿ ಲಭ್ಯ.

ಹೆರಿಟೇಜ್ ಫುಡ್ಸ್ ನ ಸಿಇಒ ಬ್ರಾಹ್ಮಣಿ ನಾರಾ

ಹೆರಿಟೇಜ್ ಫುಡ್ಸ್ ನ ಸಿಇಒ ಬ್ರಾಹ್ಮಣಿ ನಾರಾ

ಹೆರಿಟೇಜ್ ಫುಡ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಾಹ್ಮಣಿ ನಾರಾ ಈ ಬಗ್ಗೆ ವಿವರ ನೀಡಿ, "ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಆರೋಗ್ಯಕರ ಉತ್ಪನ್ನಗಳನ್ನು ಬಿಡುಗಡೆ ಮಾಡಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಸಾಂಕ್ರಾಮಿಕವು ನಿಜವಾಗಿಯೂ ವಿಶ್ವಾದ್ಯಂತ ಹೊಸ ಅನುಶೋಧನೆಗಳಿಗೆ ಪ್ರೇರಣೆಯಾಗಿದೆ. ಗ್ರಾಹಕರ ಸಂತೋಷ ಮತ್ತು ಆರೋಗ್ಯದ ವಿಚಾರದಲ್ಲಿ ಹೆರಿಟೇಜ್ ಫುಡ್ಸ್ ಸದಾ ಮುಂಚೂಣಿಯಲ್ಲಿರುತ್ತದೆ. ಸೂಕ್ತ ಕಾಲದಲ್ಲಿ ವಿನೂತನ ಉತ್ಪನ್ನಗಳನ್ನು ನೀಡುವ ಮೂಲಕ ಮಾತ್ರ ಇದನ್ನು ಸಾಧಿಸಲು ಸಾಧ್ಯ, ಹೆರಿಟೇಜ್ ಫುಡ್ಸ್ ಗ್ರಾಹಕರ ಅಗತ್ಯತೆಯನ್ನು ಅರ್ಥ ಮಾಡಿಕೊಂಡಿದ್ದು, ಹಲವು ಮೌಲ್ಯವರ್ಧಿತ ಆರೋಗ್ಯಕರ ಉತ್ಪನ್ನಗಳನ್ನು ಗ್ರಾಹಕರಿಗೆ ನಿಡುವಲ್ಲಿ ಸದಾ ಮುಂದಿರುತ್ತದೆ" ಎಂದು ಹೇಳಿದ್ದಾರೆ. "ಇದು ಗ್ರಾಹಕರ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ನೆರವಾಗುವುದಲ್ಲದೇ, ಇಡೀ ಕುಟುಂಬಕ್ಕೆ ಅಗತ್ಯವಾದ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಇದು ಸಕಾಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
In an endeavour to boost immunity of consumers, Heritage Foods has launched Ginger, Tulsi and Turmeric variants of milk, which is the order of the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X