ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: 2 ಪ್ರಶಸ್ತಿ ಗೆದ್ದ ಹೆರಿಟೇಜ್ ಫುಡ್ಸ್

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಗ್ರಾಹಕರ ಬದಲಾದ ರುಚಿಗೆ ಹೊಂದಾಣಿಕೆಯಾದ ಅಗ್ರಗಣ್ಯ ಹೈನು ಉತ್ಪನ್ನ ಕಂಪನಿ ಹೆರಿಟೇಜ್ ಫುಡ್ಸ್, ದೆಹಲಿಯಲ್ಲಿ ನಡೆದ ಭಾರತದ ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019ರಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ.

ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ಅತ್ಯುತ್ತಮ ಸಾಧನೆಗಾಗಿ ಕಂಪನಿಯು "ಬೆಸ್ಟ್ ಕಸ್ಟಮರ್ ಸರ್ವೀಸ್ ಪ್ರೊವೈಡರ್ ಆಫ್ ದ ಇಯರ್" ಪ್ರಶಸ್ತಿಯನ್ನು ಗೆದ್ದಿದೆ. ಅಂತೆಯೇ ಈ ವರ್ಷದ ಅತ್ಯುತ್ತಮ ತಂತ್ರಜ್ಞಾನ ಅನುಶೋಧಕ ಪ್ರಶಸ್ತಿಯೂ ಕಂಪನಿಗೆ ಸಂದಿದೆ. ರೈತರಿಂದ ಸುಲಲಿತವಾಗಿ ಹಾಲು ಖರೀದಿಸುವುದು ಮತ್ತು ತಾಜಾ ಹಾಗೂ ಪೌಷ್ಟಿಕಯುಕ್ತ ಹಾಲನ್ನು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಸಮನ್ವಯಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿಯ ಗೌರವ ಸಂದಿದೆ.

ಕಂಪನಿಯ ಹೈನು ವಿಭಾಗದ ಮುಖ್ಯಸ್ಥ ಜೆ.ಸಾಂಬಮೂರ್ತಿ ಈ ಪ್ರಶಸ್ತಿಗಳನ್ನು ಗೌರವಾನ್ವಿತ ಎಫ್‍ಎಸ್‍ಎಸ್‍ಎಐ ಅಧ್ಯಕ್ಷೆ ರೀಟಾ ತಿಯೋತಿಯಾ ಅವರಿಂದ, ನವದೆಹಲಿಯ ತಾಜ್ ವಿವಂಟಾ ಹೋಟೆಲ್‍ನಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವೀಕರಿಸಿದರು.

Heritage Foods bags awards at the India Food Safety Summit Awards 2019 in Delhi

"ದೇಶದ ಆಹಾರ ಸುರಕ್ಷತೆಯ ಸಂಕೇತ ಎನಿಸಿದ ಭಾರತದ ಆಹಾರ ಸುರಕ್ಷಾ ಶೃಂಗದಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಲು ನಮಗೆ ಅತೀವ ಸಂತಸವಾಗುತ್ತಿದೆ. ಹೆರಿಟೇಜ್ ಫುಡ್ಸ್‍ನ ತಂಡದ ಪ್ರಯತ್ನಗಳನ್ನು ಈ ಪ್ರತಿಷ್ಠಿತ ಶೃಂಗದಲ್ಲಿ ಗೌರವಿಸಿರುವುದು ನಮಗೆ ಹೆಮ್ಮೆ ತಂದಿದೆ. ಗ್ರಾಹಕ ಮೊದಲು ಎಂಬ ನೀತಿಯಲ್ಲಿ ನಾವು ಸದಾ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ ಹಾಗೂ ಅದಕ್ಕೆ ಅನುಗುಣವಾಗಿ ಮುನ್ನಡೆದಿದ್ದೇವೆ. ಪ್ರವಾಹ ಇದ್ದ ಪ್ರದೇಶಗಳಲ್ಲಿ ಕೂಡಾ ಕಂಪನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಿಸಿದೆ" ಎಂದು ಹೆರಿಟೇಜ್ ಫುಡ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕಿ ಬ್ರಹ್ಮಿಣಿ ನಾರಾ ಹೇಳಿದ್ದಾರೆ.

"ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ತೊಡಗಿಸಿಕೊಳ್ಳುವ ಹೆರಿಟೇಜ್ ಫುಡ್ಸ್ ನ ಹೊಸ ಉಪಕ್ರಮ ಹಾಗೂ ಇತರ ವಿನೂತನ ಮಾರ್ಗಗಳು ನಿಜವಾಗಿಯೂ ಗ್ರಾಹಕರ ಮನಸ್ಸಿನಲ್ಲಿ ಕಂಪನಿಯ ಉತ್ಪನ್ನ ವಿತರಣೆ ಬಗ್ಗೆ ಹೆಚ್ಚಿನ ಗೌರವ ಮೂಡುವಂತೆ ಮಾಡಿವೆ. ಇದು ಹೊಸ ಉತ್ಪನ್ನಗಳನ್ನು ತರಲು ಮತ್ತು ಉತ್ಪನ್ನಗಳಲ್ಲಿ ಸುಧಾರಣೆಗಳನ್ನು ತರಲು ಗ್ರಾಹಕರ ಅಭಿಪ್ರಾಯವಾಗಿ ಕೆಲಸ ಮಾಡಿವೆ" ಎಂದು ವಿವರಿಸಿದ್ದಾರೆ.

English summary
Heritage Foods, the leading dairy company that matched changing consumer tastes, has won big at the India Food Safety Summit Awards 2019 in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X