ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಸರ್ಕಾರಿ ಸವಲತ್ತು ಸೇವೆಯ ಫಲಾಕಾಂಕ್ಷಿಗಳಾಗಿದ್ದರೆ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಸೇವೆಗಳಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು ಡಿಸೆಂಬರ್ 31, 2017 ಕೊನೆ ದಿನಾಂಕವಾಗಿದೆ.

ಆದರೆ, ಮೊಬೈಲ್ ನಂಬರ್ ಜತೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ಕೆ ಮೊಬೈಲ್ ಸೇವಾ ಸಂಸ್ಥೆಯ ಕಚೇರಿಗೆ ಗ್ರಾಹಕರು ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಈಗ ನಾಲ್ಕು ಸರಳ ವಿಧಾನಗಳ ಬಗ್ಗೆ ಚರ್ಚಿಸಲಾಗಿತ್ತು. ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

Here is how you can verify your SIM using Aadhaar in just four steps

ಹೀಗಾಗಿ, ಇನ್ಮುಂದೆ ಮೊಬೈಲ್‌ ಬಳಕೆದಾರರು ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಬಹುದಾಗಿದೆ. ಈ ಬಗ್ಗೆ ಬಹುತೇಕ ಎಲ್ಲಾ ಟೆಲಿಕಾಂ ಸೇವಾಸಂಸ್ಥೆಗಳು ತನ್ನ ಗ್ರಾಹಕರಿಗೆ ಸೂಚನೆ ನೀಡಿವೆ. ಗ್ರಾಹಕರು ಖುದ್ದು ಟೆಲಿಕಾಂ ಸಂಸ್ಥೆ ಕಚೇರಿಗೆ ತೆರಳಿ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಕೊನೆ ದಿನಾಂಕ ಫೆಬ್ರವರಿ 2018

ಇದಕ್ಕಾಗಿ, ಅವರು ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಆಧರಿತ ಆಯ್ಕೆಯನ್ನು ಬಳಸಿಕೊಂಡು ಆಧಾರ್‌ ಸಂಖ್ಯೆಯನ್ನು ನೀಡಬಹುದು ಅಥವಾ ಮೊಬೈಲ್‌ ಸೇವೆ ಒದಗಿಸುವ ಕಂಪೆನಿಗಳ ಆ್ಯಪ್‌ ಮೂಲಕ ಲಾಗ್‌ ಇನ್‌ ಆಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಹುದು. ದೂರ ಸಂಪರ್ಕ ಕಂಪೆನಿಗಳು ಶೀಘ್ರದಲ್ಲಿ ಈ ಸೇವೆಗಳನ್ನು ಒದಗಿಸಲಿವೆ.

ಇದಲ್ಲದೇ, ಐವಿಆರ್‌ಎಸ್‌ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಮೂಲಕವೂ ಮೊಬೈಲ್‌ ಸಂಖ್ಯೆಗೆ ಆಧಾರ್‌ ಅನ್ನು ಜೋಡಣೆ ಮಾಡಬಹುದು.

English summary
The process of re-verification of existing mobile subscribers using Aadhaar is set to become simpler and more convenient, according to an official source. Nearly 500 million mobile numbers are already registered on the Aadhaar database
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X