• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಿಂದಲೂ ಕೆಲಸ, ಕಚೇರಿಯಿಂದಲೂ ಕೆಲಸ- ಇಲ್ಲಿದೆ ಐಟಿ ಕಂಪನಿಗಳ ಹೈಬ್ರಿಡ್ ಮಾಡಲ್

|
Google Oneindia Kannada News

ಬೆಂಗಳೂರು, ಜೂನ್ 12: ಭಾರತದಲ್ಲಿ ಎರಡು ವರ್ಷಗಳಿಂದ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಡುವುದು ಅನಿವಾರ್ಯವಾಗಿತ್ತು. ಈಗ ಕೋವಿಡ್ ತೀವ್ರತೆ ಕಡಿಮೆಯಾಗಿ ಬಹುತೇಕ ಕಚೇರಿಗಳು ಬಾಗಿಲು ತೆರೆಯಬಹುದು ಎನ್ನುವಂಥ ಸ್ಥಿತಿ ಇದೆ. ಆದರೆ, ವರ್ಕ್ ಫ್ರಂ ಹೋಮ್‌ನಿಂದ ಮನೆಯಿಂದಲೇ ಕೆಲಸ ಮಾಡಿ ಒಗ್ಗಿಕೊಂಡ ಅನೇಕ ಉದ್ಯೋಗಿಗಳನ್ನು ಕಚೇರಿಗೆ ಕರೆಸುವುದೇ ಕಂಪನಿಗಳಿಗೆ ಇರುವ ಸವಾಲು.

ಕಟ್ಟುನಿಟ್ಟಾಗಿ ಆದೇಶಗಳನ್ನು ಹೊರಡಿಸಿದರೆ ಉದ್ಯೋಗಿಗಳು ಕಚೇರಿಗೆ ಬರಲೇಬೇಕಾಗುತ್ತದೆ. ಆದರೆ, ಎಲ್ಲಾ ಕಂಪನಿಗಳು ಈ ಧೋರಣೆ ಅನುಸರಿಸುವ ಇಚ್ಛೆ ಹೊಂದಿಲ್ಲ. ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಿಗೆ ಕೆಲಸದ ಅವಶ್ಯಕತೆ ಎಷ್ಟಿದೆಯೋ, ಕಂಪನಿಗಳಿಗೂ ಉತ್ತಮ ಗುಣಮಟ್ಟದ ನೌಕರರ ಅಷ್ಟೇ ಅಗತ್ಯತೆ ಇದೆ. ಹೀಗಾಗಿ, ಮನೆಯಿಂದ ಕೆಲಸ ಮಾಡಿ ಒಗ್ಗಿಕೊಂಡ ಉದ್ಯೋಗಿಗಳನ್ನು ಕಚೇರಿಗೆ ಬಲವಂತವಾಗಿ ಕರೆತರುವ ಕೆಲಸಕ್ಕೆ ಕಂಪನಿಗಳು ಆತುರವಾಗಿ ಮುಂದಾಗಿಲ್ಲ.

ಮತ್ತೆ ಶುರುವಾಗುತ್ತಿದೆ ಐಟಿ ಉದ್ಯೋಗಿಗಳ ವರ್ಕ್ ಫ್ರಂ ಆಫೀಸ್ಮತ್ತೆ ಶುರುವಾಗುತ್ತಿದೆ ಐಟಿ ಉದ್ಯೋಗಿಗಳ ವರ್ಕ್ ಫ್ರಂ ಆಫೀಸ್

ಭಾರತದಲ್ಲಿ ಮಾತ್ರವಲ್ಲ, ಇದು ವಿಶ್ವಾದ್ಯಂತ ಐಟಿ ಕಂಪನಿಗಳಿಗೆ ಇರುವ ಸಂದಿಗ್ಧತೆಯಾಗಿದೆ. ಹಲವು ಕಂಪನಿಗಳು ಇನ್ನೂ ಹೆಚ್ಚು ಕಾಲ ವರ್ಕ್ ಫ್ರಂ ಹೋಮ್ ಕಾರ್ಯಾಚರಿಸುವ ಅವಕಾಶವನ್ನು ತಮ್ಮ ಉದ್ಯೋಗಿಗಳಿಗೆ ನೀಡಿವೆ. ಆದರೆ, ಉದ್ಯೋಗಿಗಳನ್ನು ಮನಃಪೂರ್ವಕವಾಗಿ ಕಚೇರಿಗೆ ಬರುವಂತೆ ಮಾಡುವ ಕೆಲಸ ತುಸು ಸವಾಲಿನದ್ದೇ ಹೌದು.

 ಪಾಕಿಸ್ತಾನದ ಹೊಸ ದಾಖಲೆ; ವಾರಕ್ಕೆ 60 ಗಂಟೆ ಕೆಲಸ: ಬೇರೆ ದೇಶಗಳಲ್ಲಿ ಹೇಗೆ? ಪಾಕಿಸ್ತಾನದ ಹೊಸ ದಾಖಲೆ; ವಾರಕ್ಕೆ 60 ಗಂಟೆ ಕೆಲಸ: ಬೇರೆ ದೇಶಗಳಲ್ಲಿ ಹೇಗೆ?

ಹೈಬ್ರಿಡ್ ಮಾಡೆಲ್

ಹೈಬ್ರಿಡ್ ಮಾಡೆಲ್

ವಿವಿಧ ಕಂಪನಿಗಳು ಈ ಸಂದಿಗ್ಧತೆಯನ್ನು ನಿವಾರಿಸಲು ವಿವಿಧ ತಂತ್ರಗಳನ್ನು ಮತ್ತು ಪರಿಹಾರಗಳನ್ನು ಹುಡುಕಿವೆ. ಕೆಲ ಕಂಪನಿಗಳು ಹಂತಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಯಿಸುತ್ತಿವೆ. ಇನ್ನೂ ಕೆಲ ಕಂಪನಿಗಳು ಮಧ್ಯ ಮಾರ್ಗ ಅನುಸರಿಸುತ್ತಿವೆ. ಅಂದರೆ, ಮನೆ ಮತ್ತು ಕಚೇರಿ ಎರಡರಿಂದಲೂ ಕೆಲಸ ಮಾಡುವುದಕ್ಕೆ ಅನುವು ಮಾಡಿಕೊಟ್ಟಿವೆ. ಇಂಥ ಕಂಪನಿಗಳಲ್ಲಿ ಆ್ಯಪಲ್ ಕೂಡ ಒಂದು. ಬಲವಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿದರೆ ಅವರಿಗೆ ಮಾನಸಿಕವಾಗಿ ಕಿರಿಕಿರಿ ಎನಿಸಬಹುದು. ಇದರಿಂದ ಅವರ ಕಾರ್ಯತತ್ಪರತೆಗೆ ಹಿನ್ನಡೆಯಾಗಬಹುದು ಎಂಬುದು ಆ್ಪಲ್ ಸಿಇಒ ಟಿಮ್ ಕುಕ್ ಅನಿಸಿಕೆ.

ಭಾರತದ ಮೂರು ಪ್ರಮುಖ ಐಟಿ ಸರ್ವಿಸ್ ಕಂಪನಿಗಳಾದ ಟಿಸಿಎಸ್, ಇನ್‌ಫೋಸಿಸ್ ಮತ್ತು ಎಚ್‌ಸಿಎಲ್ ಹೈಬ್ರಿಡ್ ಮಾಡೆಲ್‌ನಂಥದ್ದೇ ವಿಧಾನಗಳನ್ನು ಅನುಸರಿಸುತ್ತಿವೆ.

ಟಿಸಿಎಸ್‌ನ 3E ತಂತ್ರ

ಟಿಸಿಎಸ್‌ನ 3E ತಂತ್ರ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಭಾರತೀಯ ಐಟಿ ಸೇವಾ ಕಂಪನಿಯಾಗಿದೆ. ತನ್ನ ಉದ್ಯೋಗಿಗಳನ್ನು ಕಚೇರಿಗೆ ಕರೆಸಲು ಇದು ಹೈಬ್ರಿಡ್ ಮಾರ್ಗ ಅನುಸರಿಸುತ್ತಿದೆ. ಅದರಲ್ಲಿ ಪ್ರಧಾನವಾಗಿರುವುದು ಎಂಬ್ರೇಸ್ (Embrace), ಎನೇಬಲ್ (Enable) ಮತ್ತು ಎಂಪವರ್ (Empower).

ಮನೆಯಿಂದ ಕೆಲಸ ಮಾಡಿದರೆ ಸಾಕಷ್ಟು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಕೆಲಸ, ಮಗುವನ್ನು ಶಾಲೆಗೆ ಬಿಡುವುದು ಇತ್ಯಾದಿ ಏನಾದರೊಂದು ಕೆಲಸ ಇದ್ದೇ ಇರುತ್ತದೆ. ಹೀಗಾಗಿ, ಸದಾ ಆನ್‌ಲೈನ್‌ನಲ್ಲಿ ಇರಲು ಸಾಧ್ಯವಾಗುವುದಿಲ್ಲ. ತಿನ್ನು, ಕೆಲಸ ಮಾಡು, ಮಲಗು- ಇಷ್ಟಕ್ಕೇ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ. ಈ ವಿಚಾರವನ್ನು ಉದ್ಯೋಗಿಗಳಿಗೆ ತಿಳಿಹೇಳಿ ಒಪ್ಪಿಸುವುದೇ ಒಂದು ತಂತ್ರ.

ಕಚೇರಿಯಿಂದ ಕೆಲಸ ಮಾಡಲು ಉದ್ಯೋಗಿ ಒಪ್ಪಿಕೊಳ್ಳುತ್ತಾನೆ. ಅದರೆ, ಅಗತ್ಯಬಿದ್ದಲ್ಲಿ ಮನೆಯಿಂದ ಉದ್ಯೋಗಿ ಕೆಲಸ ಮಾಡುವ ಸ್ಥಿತಿ ಬಂದಾಗ ಅದಕ್ಕೆ ಬೇಕಾದ ವ್ಯವಸ್ಥೆ ಮತ್ತು ವಾತಾವರಣ ನಿರ್ಮಿಸಲು ಕಂಪನಿ ಅಣಿಗೊಳ್ಳುವುದು ಇನ್ನೊಂದು ತಂತ್ರ.

ಕಂಪನಿ ಮತ್ತು ಉದ್ಯೋಗಿ ಇಬ್ಬರೂ ಕೂಡ ಹೈಬ್ರಿಡ್ ಮಾದರಿ ಕೆಲಸಕ್ಕೆ ಹೊಂದಿಕೊಳ್ಳುವುದು ಅಗತ್ಯ. ಇದು ಇಬ್ಬರಿಗೂ ಸವಾಲಿನ ಕೆಲವೇ. ಟಿಸಿಎಸ್ ತನ್ನ ಕೆಲ ಉದ್ಯೋಗಿಗಳಿಗೆ ಖಾಯಂ ಆಗಿ ವರ್ಕ್ ಫ್ರಂ ಹೋಮ್ ಅವಕಾಶ ಕೊಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇನ್ಫೋಸಿಸ್ ದೀರ್ಘಾವಧಿ ಯೋಜನೆ

ಇನ್ಫೋಸಿಸ್ ದೀರ್ಘಾವಧಿ ಯೋಜನೆ

ಇನ್ಫೋಸಿಸ್ ಸಂಸ್ಥೆ ವರ್ಕ್ ಫ್ರಂ ಆಫೀಸ್ ವಿಚಾರದಲ್ಲಿ ಮೂರು ಹಂತದ ಯೋಜನೆ ಹಾಕಿಕೊಂಡಿದೆ. ಡೆವಲಪ್ಮೆಂಟ್ ಸೆಂಟರ್ ಅಥವಾ ಕಚೇರಿ ಇರುವ ನಗರ ಮತ್ತು ಅದರ ಸಮೀಪದ ಸ್ಥಳಗಳಲ್ಲಿರುವ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಕಚೇರಿಗೆ ಬಂದು ಕೆಲಸ ಮಾಡುವುದು ಒಂದು ಹಂತ. ಡೆವಲಪ್ಮೆಂಟ್ ಸೆಂಟರ್‌ನ ಹೊರಗಿರುವ ಪ್ರದೇಶಗಳಲ್ಲಿರುವ ಜನರು ಮುಂದಿನ ಕೆಲ ತಿಂಗಳಲ್ಲಿ ಕಚೇರಿ ಇರುವ ಪ್ರದೇಶಗಳಿಗೆ ಬರುವುದು ಎರಡನೇ ಹಂತ. ಕಚೇರಿ ಇರುವ ನಗರದಿಂದ ಬಹಳ ದೂರ ಪ್ರದೇಶಗಳಲ್ಲಿರುವ ಉದ್ಯೋಗಿಗಳಿಗೆ ಕಚೇರಿಗೆ ಬರಲು ಇನ್ನಷ್ಟು ಕಾಲಾವಕಾಶ ನೀಡುವುದು ಮೂರನೇ ಹಂತ.

ಎಚ್‌ಸಿಎಲ್ ಟೆಕ್‌ನ ಹೈಬ್ರಿಡ್ ಮಾಡೆಲ್

ಎಚ್‌ಸಿಎಲ್ ಟೆಕ್‌ನ ಹೈಬ್ರಿಡ್ ಮಾಡೆಲ್

ಹೆಚ್‌ಸಿಎಲ್ ಟೆಕ್ನಾಲಜೀಸ್ ಈಗಾಗಲೇ ಹೈಬ್ರಿಡ್ ಮಾಡೆಲ್ ತಂತ್ರ ಅನುಸರಿಸುತ್ತಿದೆ. ತನ್ನ ಉದ್ಯೋಗಿಗಳಿಗೆ ಮನೆ ಅಥವಾ ಕಚೇರಿಯಿಂದ ಕೆಲಸ ಮಾಡುವ ಅವಕಾಶ ನೀಡಿದೆ. ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಸುರಕ್ಷತೆಯೇ ಕಂಪನಿಯ ಆದ್ಯತೆ ಎಂದು ಎಚ್‌ಸಿಎಲ್ ವಕ್ತಾರರು ಹೇಳುತ್ತಾರೆ. ಇದರ ಜೊತೆಗೆ ಕಂಪನಿಯ ವ್ಯವಹಾರವೂ ಮುಖ್ಯ, ಕಂಪನಿಯ ಗ್ರಾಹಕರಿಗೆ ತಡೆರಹಿತ ಸೇವೆ ನೀಡುವುದೂ ಮುಖ್ಯವೇ. ಈ ನಿಟ್ಟಿನಲ್ಲಿ ಮನೆ ಮತ್ತು ಕಚೇರಿ ಎರಡೂ ಕಡೆಯಿಂದ ಕೆಲಸ ಮಾಡುವ ವಾತಾವರಣ ಮತ್ತು ತಂತ್ರಜ್ಞಾನವನ್ನು ಖಾಯಂ ಆಗಿ ಅಳವಡಿಸುವ ಕಡೆ ಹೆಚ್‌ಸಿಎಲ್ ಮ್ಯಾನೇಜ್ಮೆಂಟ್ ಗಮನ ಕೊಡುತ್ತಿದೆ.

ಇದು ಭಾರತದ ಮೂರು ಪ್ರಮುಖ ಐಟಿ ಕಂಪನಿಗಳ ಕಾರ್ಯಯೋಜನೆಯಾಗಿದೆ. ಬಹುತೇಕ ಕಂಪನಿಗಳೂ ಕೂಡ ಇಂಥದ್ದೇ ಹೈಬ್ರಿಡ್ ಮಾದರಿ ಅನುಸರಿಸುತ್ತಿರುವುದು ಹೌದು. ಕಂಪನಿಯ ಕೆಲ ಉದ್ಯೋಗಿಗಳು ಈಗಾಗಲೇ ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ, ಇನ್ನೂ ಕೆಲವರು ಮನೆಯಿಂದಲೂ ಮಾಡುತ್ತಿದ್ದಾರೆ. ನಮ್ಮ ಒನ್‌ಇಂಡಿಯಾ ಕಚೇರಿಯಲ್ಲೂ ಇದೇ ಹೈಬ್ರಿಡ್ ಮಾದರಿಯ ಯೋಜನೆ ಅನುಸರಿಸಲಾಗುತ್ತಿದೆ. ಒಬ್ಬ ಉದ್ಯೋಗಿಗೆ ಮನೆ ಮತ್ತು ಕಚೇರಿ ಎರಡೂ ಕಡೆಯಿಂದ ಕೆಲಸ ಮಾಡುವಂತಹ ವ್ಯವಸ್ಥೆ ನಿರ್ಮಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Most Indian IT companies are opting for the hybrid model of working. They are not forcing employees to come to office for work ASAP, but have long term plan towards it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X