ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯ

By Mahesh
|
Google Oneindia Kannada News

ಬೆಂಗಳೂರು, ಜುಲೈ 11: ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತಗತಿಯಲ್ಲಿ ಹಬ್ಬುವ ಸುಳ್ಳು ಸುದ್ದಿಯನ್ನು ತಡೆಗಟ್ಟಲು ಜನಪ್ರಿಯಾ ಸಾಮಾಜಿಕ ಜಾಲ ತಾಣ ವಾಟ್ಸಾಪ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗೆ ವಾಟ್ಸಾಪ್ ಮೂಲಕ ಹರಿದಾಡಿದ ಸುಳ್ಳುಸುದ್ದಿಯಿಂದ ಹಲವರ ಜೀವಹಾನಿಯಾದ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಇನ್ನು ಮುಂದೆ ವಾಟ್ಸಾಪ್ ನಲ್ಲಿ ಯಾವುದಾದರೂ ಸಂದೇಶ ಬಂದರೆ ಅದರ ಮೂಲವೇನು? ಇದು ನಂಬಲರ್ಹ ಮೂಲಗಳಿಂದ ಬಂದಿದೆಯೇ?ಸುಮ್ಮನೆ ಫಾರ್ವಡ್ ಮಾಡಿದ ಸಂದೇಶವೇ? ಇದು ನಕಲಿ ಸುದ್ದಿಯೇ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.

ವದಂತಿಗೆ ಕಡಿವಾಣ: ತಂತ್ರಜ್ಞಾನ ಆವಿಷ್ಕರಿಸಿದವರಿಗೆ ವಾಟ್ಸಾಪ್ ಬಹುಮಾನವದಂತಿಗೆ ಕಡಿವಾಣ: ತಂತ್ರಜ್ಞಾನ ಆವಿಷ್ಕರಿಸಿದವರಿಗೆ ವಾಟ್ಸಾಪ್ ಬಹುಮಾನ

ಸದ್ಯಕ್ಕೆ ಈ ಸೌಲಭ್ಯ ಬೀಟಾ ಆವೃತ್ತಿಯಲ್ಲಿದ್ದು, ವಾಟ್ಸಾಪ್ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ. ವಾಟ್ಸಾಪ್ ಅಪ್ಡೇಟ್ ಮಾಡಿಕೊಂಡು ಈ ಸೌಲಭ್ಯ ಬಳಸಬಹುದಾಗಿದೆ.

Here are latest WhatsApp features to tackle fake news

ಫಾರ್ವರ್ಡ್ ಮಾಡಿದ ಸಂದೇಶವಾದರೆ ಫಾರ್ವರ್ಡೆಡ್ ಎಂಬ ಟ್ಯಾಗ್ ಬೀಳಲಿದೆ. ಇದರಿಂದ ಮೂಲ ಸಂದೇಶ ಕಳಿಸಿದವರನ್ನು ಪತ್ತೆ ಹಚ್ಚಬಹುದಾಗಿದೆ.

ಹೊಸ ಅಪ್ಡೇಟ್ ನಲ್ಲಿ ಏನೇನು ಇರಲಿದೆ?:
* ನೀವು ಸ್ವೀಕರಿಸಿದ ಸಂದೇಶವು ಗುಂಪಿನಿಂದ ಫಾರ್ವಡೆಡ್ ಆಗಿದೆಯೋ ಅಥವಾ ವೈಯಕ್ತಿಕವಾಗಿ ಕಳಿಸಲಾಗಿದೆಯೋ ಎಂಬುದು ತಿಳಿಯಲಿದೆ. ಇದಕ್ಕಾಗಿ ಇಂಡಿಕೇಟರ್ ಇರಲಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

* one -on-one ಹಾಗೂ ಗುಂಪಿನಲ್ಲಿ ಚಾಟ್ ಮಾಡುವಾಗಲೂ ಈ ಸೌಲಭ್ಯ ಚಾಲನೆಯಲ್ಲಿರಲಿದೆ.
* ನಿಮ್ಮ ಸ್ನೇಹಿತ. ಸ್ನೇಹಿತರು, ಆಪ್ತರು, ಬಂಧು ಬಳಗದವರು ಕಳಿಸಿದ ಸತ್ಯಾಸತ್ಯತೆ ತಿಳಿಯಲಿದೆ. ಸಂದೇಶದ ಮೂಲ ಕರ್ತೃಯಾರು ಎಂಬುದು ತಿಳಿಯಲಿದೆ.
* ಇದಲ್ಲದೆ, ಯಾವುದೇ ಸಂದೇಶ ಫಾರ್ವಡ್ ಮಾಡುವ ಮೊದಲು, ಅದರಲ್ಲೂ ಧರ್ಮ, ಜಾತಿ, ದೇಶ, ಭಾಷೆ ವಿಷಯದ ಪ್ರಚೋದನಕಾರಿ ಸಂದೇಶವಿದ್ದರೆ, ಅದರನ್ನು ಪರಾಮರ್ಶಿಸಿ, ಸತ್ಯಾಸತ್ಯತೆ ಬಗ್ಗೆ ತಿಳಿದು ನಂತರ ಫಾರ್ವಡ್ ಮಾಡುವಂತೆ ಬಳಕೆದಾರರನ್ನು ವಾಟ್ಸಪ್ ಕೋರಿದೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಾಟ್ಸಾಪ್ ನ ಬ್ಲಾಗಿನಲ್ಲಿ ಬರೆಯಲಾಗಿದ್ದು, ತಪ್ಪದೇ ಓದಿ

English summary
WhatsApp announced its latest feature globally that will highlight when a message has been forwarded versus composed by the sender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X