ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ

By ಅಮಿತ್ ಛಾಬ್ರಾ
|
Google Oneindia Kannada News

ವಾರ್ಷಿಕ ಪ್ರೀಮಿಯಂ ಅನ್ನು ಒಟ್ಟಿಗೆ ಒಂದು ದೊಡ್ಡ ಮೊತ್ತದಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ ನೀವು ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಲು ವಿಳಂಬ ಮಾಡುತ್ತಿರುವಿರಾ? ಅಥವಾ ಪ್ರೀಮಿಯಂ ನಿಮ್ಮ ಅನುಕೂಲತೆಗೆ ಸರಿಹೊಂದುವುದನ್ನು ಖಚಿತಪಡಿಸಿಕೊಳ್ಳಲು ಕಡಿಮೆ ಮೊತ್ತದ ವಿಮೆ ಹೊಂದಿರುವ ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸಲು ನೀವು ಯೋಜಿಸುತ್ತಿರುವಿರಾ? ಚಿಂತಿಸಬೇಡಿ, ಶೀಘ್ರದಲ್ಲಿಯೇ ನೀವು ಒಟ್ಟಿಗೆ ದೊಡ್ಡ ಮೊತ್ತದಲ್ಲಿ ಪ್ರೀಮಿಯಂ ಪಾವತಿಸುವ ಬಗ್ಗೆ ಚಿಂತಿಸದೆ ನಿಮ್ಮ ಆಯ್ಕೆಯ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಪಾಲಿಸಿಬಜಾರ್ ಸಂಸ್ಥೆಯ ವಿಮೆ ವಿಭಾಗದ ಮುಖ್ಯಸ್ಥ ಅಮಿತ್ ಛಾಬ್ರಾ ತಿಳಿಸಿದ್ದಾರೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

ನಿಮ್ಮ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕೇವಲ ವಾರ್ಷಿಕವಾಗಿ ಮಾತ್ರವಲ್ಲ, ಮಾಸಿಕ ಕಂತುಗಳಲ್ಲಿಯೂ ಪಾವತಿಸುವ ಆಯ್ಕೆಯನ್ನು ನೀವು ಈಗ ಹೊಂದಿರುವಿರಿ. ಪ್ರಸ್ತುತ ಕೊವಿಡ್19 ಸಮಸ್ಯೆಯ ನಡುವೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDI) ಸಾಮಾನ್ಯ ಮತ್ತು ಸ್ವತಂತ್ರ ಆರೋಗ್ಯ ವಿಮೆಗಾರರು ಸಲ್ಲಿಸಿದ ಪಾಲಿಸಿಗಳಲ್ಲಿ ಸಣ್ಣ ಮಾರ್ಪಾಡುಗಳಿಗಾಗಿ ಸುತ್ತೋಲೆಯನ್ನು ಹೊರತಂದಿದೆ.

ಇನ್ಸುರೆನ್ಸ್ ದುಡ್ಡಿಗಾಗಿ ತನ್ನನ್ನು ತಾನೇ ಮರ್ಡರ್ ಮಾಡಿಸಿಕೊಂಡ ಉದ್ಯಮಿಇನ್ಸುರೆನ್ಸ್ ದುಡ್ಡಿಗಾಗಿ ತನ್ನನ್ನು ತಾನೇ ಮರ್ಡರ್ ಮಾಡಿಸಿಕೊಂಡ ಉದ್ಯಮಿ

ಸುತ್ತೋಲೆಯ ಪ್ರಕಾರ, ನಿಯಂತ್ರಣ ಪ್ರಾಧಿಕಾರವು ಆರೋಗ್ಯ ವಿಮಾ ಕಂತುಗಳನ್ನು ಕಂತುಗಳಲ್ಲಿ ಪಾವತಿಸಲು ಅನುಮತಿ ನೀಡಿದೆ. ಆದಾಗ್ಯೂ, ಪ್ರತಿಯೊಬ್ಬ ವಿಮಾದಾರನು ಈ ಸೌಲಭ್ಯವನ್ನು ಬಳಕೆದಾರರಿಗೆ ನೀಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಅಧಿಕಾರವನ್ನು ಹೊಂದಿದ್ದಾನೆ. ಮಾಸಿಕ ಕಂತು ಪ್ರೀಮಿಯಂ ಪಾವತಿ ಆಯ್ಕೆಯೊಂದಿಗೆ ಈ ಯೋಜನೆಗಳು ಪ್ರಮುಖ ಆನ್‌ಲೈನ್ ವಿಮಾ ಮಾರ್ಕೆಟ್ ವೇದಿಕೆ ಪಾಲಿಸಿಬಜಾರ್ ನಲ್ಲಿ ಜೂನ್ 5, 2020 ರಿಂದ ಸಲ್ಲಿಕೆಗೆ ಲಭ್ಯವಿರುತ್ತವೆ.

ಸಾಮಾನ್ಯ ನಾಗರಿಕರಿಗೆ ಸಮಾಧಾನಕರ ಸಂಗತಿ

ಸಾಮಾನ್ಯ ನಾಗರಿಕರಿಗೆ ಸಮಾಧಾನಕರ ಸಂಗತಿ

ಪ್ರೀಮಿಯಂ ಮೋಡ್ (ಆವರ್ತನ) ವಿಮಾದಾರನು ನಿರ್ಧರಿಸಿದಂತೆ ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಗಿರಬಹುದು. ಆದ್ದರಿಂದ, ಇನ್ನು ಮುಂದೆ, ಉದಾಹರಣೆಗೆ ರೂ. 15,000 ಮೊತ್ತದ ವಾರ್ಷಿಕ ಪ್ರೀಮಿಯಂ ಹಣವನ್ನು ಒಂದೇ ಬಾರಿಗೆ ಪಾವತಿಸುವ ಬದಲು ಇದೀಗ ಒಂದು ವರ್ಷದಲ್ಲಿ ನಿಯಮಿತ ಮಧ್ಯಂತರಗಳಲ್ಲಿ ಸಮಾನ ಕಂತುಗಳಲ್ಲಿ ಪಾವತಿ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಭಾರತದಲ್ಲಿ ಕೊವಿಡ್19 ನ ಒಟ್ಟು ಪಾಸಿಟಿವ್ ಪ್ರಕರಣಗಳು ಸುಮಾರು 2 ಲಕ್ಷಕ್ಕೆ ಸಮೀಪದಲ್ಲಿ ಇರುವುದರಿಂದ, ವೈರಸ್ ಹರಡುವ ಈ ಸಮಯದಲ್ಲಿ ಸಮಗ್ರ ಆರೋಗ್ಯ ವಿಮಾ ಯೋಜನೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ.

ಸುಲಭ ಕಂತುಗಳ ಮೂಲಕ ಪ್ರೀಮಿಯಂ ಪಾವತಿ

ಸುಲಭ ಕಂತುಗಳ ಮೂಲಕ ಪ್ರೀಮಿಯಂ ಪಾವತಿ

ಇದಲ್ಲದೆ, ರಾಷ್ಟ್ರದಾದ್ಯಂತ ಹೆಚ್ಚಿನ ಸಂಬಳ ಪಡೆಯುವ ವೃತ್ತಿಪರರು ಮತ್ತು ಉದ್ಯಮಿಗಳು ಉದ್ಯೋಗ ಕಳೆದುಕೊಳ್ಳುವುದು, ಮಾರಾಟ ಕುಸಿತ ಮತ್ತು ವೇತನ ಕಡಿತದಿಂದಾಗಿ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿರುವುದನ್ನು ಪರಿಗಣಿಸಿ, ಸುಲಭ ಕಂತುಗಳ ಮೂಲಕ ಪ್ರೀಮಿಯಂ ಪಾವತಿಸುವ ಆಯ್ಕೆಯನ್ನು ಅನುಮತಿಸುವ ನಿಯಂತ್ರಣ ಪ್ರಾಧಿಕಾರದ ನಿರ್ಧಾರವು ಸಾಮಾನ್ಯ ನಾಗರಿಕರಿಗೆ ಒಂದು ದೊಡ್ಡ ಸಮಾಧಾನಕರ ಸಂಗತಿಯಾಗಿದೆ. ಸಣ್ಣ ಮಾರ್ಪಾಡುಗಳ ಕುರಿತು IRDI ಹಂಚಿಕೊಂಡಿರುವ ಇತ್ತೀಚಿನ ಮಾರ್ಗಸೂಚಿಗಳು ಭಾರತದಲ್ಲಿ ಆರೋಗ್ಯ ವಿಮೆ ಸೌಲಭ್ಯವನ್ನು ಇನ್ನಷ್ಟು ಜನರಿಗೆ ತಲುಪಿಸಲು ಮತ್ತು ವಿಮಾ ಉತ್ಪನ್ನಗಳ ವಿತರಣೆಯನ್ನು ಹೆಚ್ಚಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತವೆ.

ಕೊವಿಡ್ ವಾರಿಯರ್ಸ್‌ಗೆ 10 ಲಕ್ಷ ಆರೋಗ್ಯ ವಿಮೆ ಘೋಷಿಸಿದ ದೀದಿಕೊವಿಡ್ ವಾರಿಯರ್ಸ್‌ಗೆ 10 ಲಕ್ಷ ಆರೋಗ್ಯ ವಿಮೆ ಘೋಷಿಸಿದ ದೀದಿ

ಆದಾಗ್ಯೂ, ಒಬ್ಬ ಗ್ರಾಹಕನಾಗಿ, ಕಂತುಗಳ ವಿಧಾನದ ಮೂಲಕ ಪಾವತಿಸುವುದಕ್ಕೆ ಸಂಬಂಧಿಸಿದಂತೆ, ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿಯೇ ಎಷ್ಟು ಸಮಯಕ್ಕೊಮ್ಮೆ ಪಾವತಿಸುತ್ತೀರಿ ಎಂಬುದನ್ನು ಆರಿಸಬೇಕಾಗುತ್ತದೆ ಮತ್ತು ನಂತರ ಅದನ್ನು ಸುಲಭವಾಗಿ ಬದಲಾಯಿಸಲು ಆಗುವುದಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಸಣ್ಣ ಪ್ರೀಮಿಯಮ್‌ಗಳು ಅನುಕೂಲತೆ

ಸಣ್ಣ ಪ್ರೀಮಿಯಮ್‌ಗಳು ಅನುಕೂಲತೆ

ಉದಾಹರಣೆಗೆ ಹೇಳುವುದಾದರೆ, ನಿಮ್ಮನ್ನು, ನಿಮ್ಮ ಪತ್ನಿಯನ್ನು ಮತ್ತು ನಿಮ್ಮ 2 ಮಕ್ಕಳ ವಿಮಾ ರಕ್ಷಣೆಯನ್ನು ಒಳಗೊಂಡಿರುವ ನಿಮ್ಮ ಕುಟುಂಬಕ್ಕಾಗಿ ನೀವು ಖರೀದಿಸಲು ಬಯಸುವ 10 ಲಕ್ಷ ರೂಪಾಯಿ ಮೊತ್ತದ ವಿಮಾ ರಕ್ಷಣೆಯ ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಪಾಲಿಸಿಯ ವೆಚ್ಚ ವಾರ್ಷಿಕವಾಗಿ ನಿಮಗೆ ರೂ 24,000 ಆಗುತ್ತದೆ. ಅಂತಹ ಸನ್ನಿವೇಶದಲ್ಲಿ, ಪ್ರೀಮಿಯಂ ಪಾವತಿಯ ಆವರ್ತನವನ್ನು ಬದಲಾಯಿಸುವಂತೆ ನಿಮ್ಮ ವಿಮಾದಾರರನ್ನು ನೀವು ಕೇಳಬಹುದು ಮತ್ತು ಮಾಸಿಕ ಪಾವತಿಯ ಆವರ್ತನವನ್ನು ಆಯ್ದುಕೊಳ್ಳಬಹುದು, ಇಲ್ಲಿ ನೀವು ಈಗ ಮುಂದಿನ ಹನ್ನೆರಡು ತಿಂಗಳುಗಳಿಗೆ (12 ‍2,000=24,000) ತಿಂಗಳಿಗೆ 2,000 ರೂ. ಗಳನ್ನು ಪಾವತಿಸಬೇಕಾಗುತ್ತದೆ.

ಪ್ರತಿ ತಿಂಗಳಿಗೆ 2,000 ಪಾವತಿಸುವುದು ಹೆಚ್ಚು ಸುಲಭ

ಪ್ರತಿ ತಿಂಗಳಿಗೆ 2,000 ಪಾವತಿಸುವುದು ಹೆಚ್ಚು ಸುಲಭ

ಈಗ, ಸೀಮಿತ ಆದಾಯವನ್ನು ಹೊಂದಿರುವ ಹೆಚ್ಚಿನ ಮಧ್ಯಮ ವರ್ಗದ ಭಾರತೀಯ ಕುಟುಂಬಗಳಿಗೆ ಕೇವಲ ಒಮ್ಮೆಯೇ ತಿಂಗಳಲ್ಲಿ 24,000 ಪಾವತಿಸುವುದಕ್ಕಿಂತ ಪ್ರತಿ ತಿಂಗಳಿಗೆ 2,000 ಪಾವತಿಸುವುದು ಹೆಚ್ಚು ಕೈಗೆಟುಕುವಂತಿದೆ. ಮಾಸಿಕ ಪ್ರೀಮಿಯಂ ಪಾವತಿ ಆಯ್ಕೆಯು ಹಿರಿಯ ನಾಗರಿಕರಿಗೂ ಪ್ರಯೋಜನಕರಾಗಿಯಾಗಿದೆ ಏಕೆಂದರೆ ಹಿರಿಯ ನಾಗರಿಕರ ಆರೋಗ್ಯ ಯೋಜನೆಗಳ ಪ್ರೀಮಿಯಂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ ಮತ್ತು ಪ್ರತಿ ತಿಂಗಳು ಪ್ರೀಮಿಯಂ ಪಾವತಿಸುವ ಆಯ್ಕೆಯನ್ನು ಅವರಿಗೆ ನೀಡುವುದರಿಂದ ಉಪಯುಕ್ತವಾಗಿರಬಹುದು ಮತ್ತು ಇದರಿಂದ ಹೆಚ್ಚಿನ ಜನರನ್ನು ವಿಮೆಯ ವ್ಯಾಪ್ತಿಗೆ ತರಬಹುದಾಗಿದೆ.

 1 ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ

1 ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ

ಆದಾಗ್ಯೂ, ಮಾಸಿಕವಾಗಿ ಅಥವಾ ನೀವು ಆಯ್ಕೆ ಮಾಡಿದ ಯಾವುದೇ ಆವರ್ತನದಲ್ಲಿ ಪ್ರೀಮಿಯಂ ಪಾವತಿಸುವುದು ಇದೀಗ 1 ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಇದರ ನಂತರ, ಸಾಮಾನ್ಯ ಆವರ್ತನವು ಪುನಃ ಜಾರಿಗೆ ಬರುತ್ತದೆ. ಆದಾಗ್ಯೂ, ಕಂತಿನ ಕಾಲಾವಧಿಯು ವಿಮಾದಾರರನ್ನು ಅವಲಂಬಿಸಿದ್ದು ಮತ್ತು ಅವರು ಅದನ್ನು ಶಾಶ್ವತವಾಗಿ ನೀಡಲು ಅಥವಾ 1 ವರ್ಷದ ಅವಧಿಗೆ ನೀಡಲು ನಿರ್ಧರಿಸಬಹುದು. ಅಸ್ತಿತ್ವದಲ್ಲಿರುವ ಪಾಲಿಸಿದಾರರಿಗೆ ಮಾಸಿಕ ಪಾವತಿ ನೀತಿಯು ವಿಮಾದಾರರ ತಾಂತ್ರಿಕ ಸಿದ್ಧತೆಗೆ ಒಳಪಟ್ಟಿರುತ್ತದೆ. ಚಾಲನೆಯಲ್ಲಿರುವ ಪಾಲಿಸಿಯನ್ನು ಹೊಂದಿರುವವರು ಪಾಲಿಸಿಯನ್ನು ನವೀಕರಿಸುವ ಸಮಯದಲ್ಲಿ ಮಾಸಿಕ ಅಥವಾ ತ್ರೈಮಾಸಿಕ ವಿಧಾನವನ್ನು ಬಳಸಿ ಪಾವತಿಸುವ ಆಯ್ಕೆಗೆ ಬದಲಾಯಿಸಿಕೊಳ್ಳಬಹುದಾಗಿದೆ.

ಮಾಸಿಕ ಕಂತುಗಳ ಪ್ರೀಮಿಯಂನಲ್ಲಿ ಕ್ಲೇಮ್‌

ಮಾಸಿಕ ಕಂತುಗಳ ಪ್ರೀಮಿಯಂನಲ್ಲಿ ಕ್ಲೇಮ್‌

ನಿಮ್ಮ ಆರೋಗ್ಯ ವಿಮಾ ರಕ್ಷಣೆಯ ಪ್ರೀಮಿಯಂ ಅನ್ನು ಪಾವತಿಸಲು ನೀವು ಮಾಸಿಕ ಪಾವತಿ ವಿಧಾನವನ್ನು ಆಯ್ಕೆ ಮಾಡಿದರೆ ಮತ್ತು ಕೇವಲ 3 ಅಥವಾ 4 ಕಂತುಗಳನ್ನು ಪಾವತಿಸಿದ ನಂತರ, ನೀವು ಕ್ಲೇಮ್‌ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ, ಅಂತಹ ಸನ್ನಿವೇಶದಲ್ಲಿ, ನಿಮ್ಮ ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸಲು ವಿಮಾದಾರರು ಜವಾಬ್ದಾರನಾಗಿರುತ್ತಾರೆ. ಆದಾಗ್ಯೂ, ನೀವು ಬಾಕಿ ಉಳಿದ ಪ್ರೀಮಿಯಂ ಅನ್ನು ಒಂದೇ ಬಾರಿ ವಿಮೆದಾರರಿಗೆ ಪಾವತಿಸಬೇಕಾಗುತ್ತದೆ ಅಥವಾ ವಿಮಾದಾರನು ಪಾವತಿಸಬೇಕಾದ ಒಟ್ಟು ಕ್ಲೇಮ್ ಮೊತ್ತದಿಂದ ಉಳಿದ ಪ್ರೀಮಿಯಂ ಅನ್ನು ಕಡಿತಗೊಳಿಸಬಹುದಾಗಿದೆ. ಕಂತು ಆಧಾರಿತ ಪ್ರೀಮಿಯಮ್‌ಗಳಲ್ಲಿ ನೀವು ಉಳಿದ ಪ್ರೀಮಿಯಂಗಳನ್ನು ಮುಂಗಡವಾಗಿ ಪಾವತಿಸಿದರೆ ಕ್ಲೇಮ್ ಸೆಟಲ್‌ಮೆಂಟ್ ಪ್ರಕ್ರಿಯೆಗೆ ಯಾವುದೇ ಪರಿಣಾಮವಾಗುವುದಿಲ್ಲ ಅಥವಾ ಅಥವಾ ಬಾಕಿ ಪ್ರೀಮಿಯಂ ಅನ್ನು ವಿಮಾದಾರರು ಕ್ಲೇಮ್ ಮೊತ್ತದಿಂದ ಕಡಿತಗೊಳಿಸುತ್ತಾರೆ.

ವಾರ್ಷಿಕ ಪ್ರೀಮಿಯಂ ರೂ. 24,000 ಉದಾಹರಣೆ

ವಾರ್ಷಿಕ ಪ್ರೀಮಿಯಂ ರೂ. 24,000 ಉದಾಹರಣೆ

ಉದಾಹರಣೆಗೆ, ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ವಾರ್ಷಿಕ ಪ್ರೀಮಿಯಂ ರೂ. 24,000 ಆಗಿದೆ ಮತ್ತು ನೀವು ಮಾಸಿಕ ಕಂತು ಆಧಾರಿತ ಪ್ರೀಮಿಯಂ ಪಾವತಿ ಪ್ರಕ್ರಿಯೆಯನ್ನು ಆರಿಸಿಕೊಂಡಿದ್ದೀರಿ ಮತ್ತು ಅದರ ಅಡಿಯಲ್ಲಿ ನೀವು 2,000 ರೂ. ಗಳ 4 ಕಂತುಗಳಲ್ಲಿ ಒಟ್ಟು ರೂ. 8,000 ಪಾವತಿಸಿರುತ್ತೀರಿ. ಈಗ, ಪಾಲಿಸಿ ಅವಧಿಯ ಮಧ್ಯದಲ್ಲಿ ನೀವು ರೂ. 1,40,000ಗಳ ಕ್ಲೇಮ್‌ಗಾಗಿ ಅರ್ಜಿ ಸಲ್ಲಿಸಿದ್ದೀರೆ, ಅಂತಹ ಸನ್ನಿವೇಶದಲ್ಲಿ, ನೀವು ಮೊದಲು ಪೂರ್ಣ ಕ್ಲೇಮ್ ಮೊತ್ತವನ್ನು ಪ್ರಕ್ರಿಯೆಗೊಳಿಸಲು ವಿಮೆದಾರರಿಗೆ ಬಾಕಿ ಉಳಿದ ನಿಮ್ಮ ವಿಮಾ ಪ್ರೀಮಿಯಮ್‌ನ 16,000 ರೂ. ಗಳನ್ನು ಪಾವತಿಸಬೇಕಾಗುತ್ತದೆ ಅಥವಾ ವಿಮೆದಾರರು ನಿಮ್ಮ ಕ್ಲೇಮ್ ಮೊತ್ತದಲ್ಲಿ ಉಳಿದ 16,000 ರೂ. ಗಳನ್ನು ಕಡಿತಗೊಳಿಸುತ್ತಾರೆ. ಮತ್ತು ರೂ. 1,24,000 (1,40,000-16,000) ಮೊತ್ತದಷ್ಟು ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸುತ್ತಾರೆ.

ವಿಮಾ ಪ್ರೀಮಿಯಂಗಳಲ್ಲಿ ಬದಲಾವಣೆಗಳಿಲ್ಲ

ವಿಮಾ ಪ್ರೀಮಿಯಂಗಳಲ್ಲಿ ಬದಲಾವಣೆಗಳಿಲ್ಲ

ವಾರ್ಷಿಕ ಸಂಗ್ರಹದ ಜೊತೆಗೆ ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಧಾರದ ಮೇಲೆ ಪ್ರೀಮಿಯಮ್‌ಗಳನ್ನು ಸಂಗ್ರಹಿಸಲು ವಿಮಾದಾರರಿಗೆ ನಿಯಂತ್ರಣ ಪ್ರಾಧಿಕಾರವು ಅವಕಾಶ ನೀಡುತ್ತಿರುವುದರಿಂದ, ಆರೋಗ್ಯ ವಿಮಾ ಯೋಜನೆಗಳ ಮೂಲ ಪ್ರೀಮಿಯಂನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. ಆದಾಗ್ಯೂ, ನಿಯಂತ್ರಣ ಪ್ರಾಧಿಕಾರವು ಅನುಮತಿಸಿದಂತೆ, ವಾರ್ಷಿಕ ಪ್ರೀಮಿಯಂ ಪಾವತಿ ಆಯ್ಕೆಯ ಬದಲಿಗೆ ಪಾಲಿಸಿದಾರರು ತ್ರೈಮಾಸಿಕ ಅಥವಾ ಮಾಸಿಕ ಪ್ರೀಮಿಯಂ ಪಾವತಿ ಆಯ್ಕೆಯನ್ನು ಆರಿಸಿಕೊಂಡರೆ ವಿಮಾದಾರರಿಗೆ ಒಟ್ಟು ಪ್ರೀಮಿಯಂ ಅನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲು ಅನುಮತಿಸಲಾಗಿದೆ. ಪ್ರೀಮಿಯಂನ ಹೆಚ್ಚಳವು ಯೋಜನೆ ಮತ್ತು ವಿಮೆದಾರರ ಆಧಾರದಲ್ಲಿ ಬದಲಾಗಬಹುದು ಮತ್ತು ಪರಿಣಾಮಕಾರಿ ಹೆಚ್ಚಳವು ಸಂಪೂರ್ಣವಾಗಿ ನ್ಯಾಯಯುತ ಮತ್ತು ಸಮಂಜಸವಾಗಿರುತ್ತದೆ.

English summary
Health Insurance: Soon You Can Pay Your Premiums on Monthly Basis. The premium mode (frequency) can be monthly, quarterly or half-yearly as per decided by the insurer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X