ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಡಿಎಫ್‌ಸಿ ಮತ್ತು ಸ್ನ್ಯಾಪ್‌ಡೀಲ್ ನಡುವೆ ಮಹತ್ವದ ಒಪ್ಪಂದ

|
Google Oneindia Kannada News

ಮುಂಬೈ, ಜು. 04: ಭಾರತದ ಎರಡನೇ ಅತಿದೊಡ್ಡ ಬ್ಯಾಂಕಿಂಗ್ ದಿಗ್ಗಜ ಮತ್ತು ಆನ್ ಲೈನ್ ಮಾರ್ಕೆಟಿಂಗ್ ಮುಂದಾಳು ಸ್ನ್ಯಾಪ್ ಡೀಲ್ ಜಂಟಿಯಾಗಿ ಇ -ಕಾಮರ್ಸ್ ಕ್ರೆಡಿಟ್ ಕಾರ್ಡ್ ವೊಂದನ್ನು ಬಿಡುಗಡೆ ಮಾಡಿವೆ.

ಸ್ನ್ಯಾಪ್ ಡೀಲ್ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ಕಾರ್ಡ್ ಬಿಡುಗಡೆ ಮಾಡಲಾಗಿದೆ. ಶೇ. 70 ಅಧಿಕ ಜನರು ಈ ಕಾರ್ಡ್ ಬಳಸಿಕೊಂಡು ಸುಲಭವಾಗಿ ಹಣ ಪಾವತಿ ಮಾಡಬಹುದು. ಈ ಕಾರ್ಡ್ ನಿಂದ ಸ್ನ್ಯಾಪ್ ಡೀಲ್ ವೆಬ್ ತಾಣ, ಮೊಬೈಲ್ ಅಪ್ಲಿಕೇಶನ್ ನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು.[ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಇನ್ಮುಂದೆ ಪೇಪರ್ ಲೆಸ್]

HDFC ties up with Snapdeal for co-branded credit card

ಜನರ ಅಭಿರುಚಿಗೆ ತಕ್ಕಂತೆ ಕಾರ್ಡ್ ವಿನ್ಯಾಸ ಮಾಡಲಾಗಿದೆ. ಟೈರ್ 2 ಮತ್ತು 3ನೇ ದರ್ಜೆಯ ನಗರಗಳ ಜನರನ್ನು ಇದು ಸುಲಭವಾಗಿ ತಲುಪಲಿದೆ. ಡಿಸ್ಕೌಂಟ್ ಮತ್ತು ರಿಯಾಯಿತಿಗಳ ಮಾಹಿತಿಯೂ ಕ್ಷಣ ಮಾತ್ರದಲ್ಲಿ ಲಭ್ಯವಾಗುತ್ತದೆ. ರಿವಾರ್ಡ್ ಪಾಯಿಂಟ್ ಗಳು ಗ್ರಾಹಕರಿಗೆ ದೊರೆಯುತ್ತದೆ ಎಂದು ಎಚ್ ಡಿ ಎಫ್ ಸಿಯ ಬಿಸಿನಸ್ ಹೆಡ್ ಪರಾಗ್ ರಾವ್ ತಿಳಿಸಿದ್ದಾರೆ.[ಆಧಾರ್ ನಂಬರ್ ಕಂಡುಹಿಡಿಯಲು ಹೆಸರೊಂದಿದ್ರೆ ಸಾಕು]

ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಕಾಯಂ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇಂಥ ಕ್ರಮಗಳು ಸದಾ ಪೂರಕವಾಗುತ್ತದೆ ಎಂದು ಸ್ನ್ಯಾಪ್ ಡೀಲ್ ಸಿಒಒ ಕುಮಾಲ್ ಭಾಲ್ ಹೇಳಿದ್ದಾರೆ.

ಎಚ್ ಡಿಎಫ್ ಸಿ ಗ್ರಾಹಕರಲ್ಲದವರೂ ಜಂಟಿ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅಲ್ಲದೇ ಪೆಟಿಎಂ ಮೂಲಕ ಹಣ ಸಂದಾಯ ಮಾಡಿದರೂ ಲಾಭ ಗಳಿಸಿಕೊಳ್ಳಬಹುದು.

English summary
India's second largest private banking sector lender, HDFC Bank and online marketplace Snapdeal jointly launched co branded e-commerce credit card. The card is aimed at getting Snapdeal's customers, 70 per cent of whom are from smaller cities and towns, to make online payments instead of availing the cash on delivery option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X