ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಟಾಪ್ 10 ಬ್ಯಾಂಕುಗಳು: ಡಿಜಿಟಲ್ ಪಾವತಿಯಲ್ಲಿ ಗೂಗಲ್ ಪೇ ನಂಬರ್ 1

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಕೋವಿಡ್ ಸಾಂಕ್ರಾಮಿಕವು ಈ ವರ್ಷ ವಿಶ್ವದ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು ಇದರಿಂದ ಬ್ಯಾಂಕಿಂಗ್ ಕ್ಷೇತ್ರವೂ ಕೂಡ ಹೊರತಾಗಿಲ್ಲ. ಬಹುತೇಕ ಉದ್ಯಮವು ಲಾಕ್‌ಡೌನ್‌ ಕಾರಣಗಳಿಂದ ಮುಚ್ಚಿದ್ದರೂ ನಂತರದಲ್ಲಿ ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿವೆ.

ದೇಶದಲ್ಲಿ ಸರ್ಕಾರಿ ಬ್ಯಾಂಕುಗಳು ಸೇರಿದಂತೆ ಪ್ರಮುಖ ಖಾಸಗಿ ವಲಯಗಳು ಈ ವರ್ಷದ ಟಾಪ್ 10 ಲಿಸ್ಟ್‌ನಲ್ಲಿ ಸೇರಿಕೊಂಡಿವೆ. ವರದಿಯೊಂದರ ಪ್ರಕಾರ ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಯೆಸ್ ಬ್ಯಾಂಕ್, ಪಿಎನ್‌ಬಿ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್ 2020 ರಲ್ಲಿ ಟಾಪ್ 10 ಬ್ಯಾಂಕುಗಳಾಗಿ ಹೊರಹೊಮ್ಮಿವೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ & ಸಿಇಒ ಆಗಿ ಉದಯ್ ಕೋಟಕ್ ಮರು ಆಯ್ಕೆಗೆ RBI ಒಪ್ಪಿಗೆಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ & ಸಿಇಒ ಆಗಿ ಉದಯ್ ಕೋಟಕ್ ಮರು ಆಯ್ಕೆಗೆ RBI ಒಪ್ಪಿಗೆ

ವೈಜ್ಹೀಕಿ ವರದಿಯು ಭಾರತದ ಅಗ್ರ 100 ಬ್ಯಾಂಕುಗಳ ಬಗ್ಗೆ ಮತ್ತು ಉದಯೋನ್ಮುಕ ಎನ್‌ಬಿಎಫ್‌ಸಿ ಮಾದರಿಗಳು, ಯುಪಿಐ ಹಾಗೂ ನಿಯೋಬ್ಯಾಂಕ್ಸ್‌ , ಎನ್‌ಬಿಎಫ್‌ಸಿ, ಸಣ್ಣ ಹಣಕಾಸು ಬ್ಯಾಂಕುಗಳ ಬಗ್ಗೆ ತಿಳಿಸಿದೆ.

2020ರ ಟಾಪ್ 10 ಬ್ಯಾಂಕುಗಳು ಯಾವುವು?

2020ರ ಟಾಪ್ 10 ಬ್ಯಾಂಕುಗಳು ಯಾವುವು?

"ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ, ಯೆಸ್ ಬ್ಯಾಂಕ್, ಪಿಎನ್‌ಬಿ, ಎಚ್‌ಎಸ್‌ಬಿಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಡಾಯ್ಚ ಬ್ಯಾಂಕ್ ಮತ್ತು ಐಡಿಬಿಐ 2020 ರ ಟಾಪ್ -10 ಬ್ಯಾಂಕುಗಳಾಗಿವೆ" ಎಂದು ವರದಿ ತಿಳಿಸಿದೆ.

ಗೂಗಲ್ ಪೇ ನಂಬರ್ ಒನ್

ಗೂಗಲ್ ಪೇ ನಂಬರ್ ಒನ್

ಡಿಜಿಟಲ್ ಪಾವತಿ ಸೇವೆಗಳಲ್ಲಿ ಗೂಗಲ್‌ ಪೇ ನಂಬರ್ ಒನ್ ಆಗಿ ಹೊರಹೊಮ್ಮಿದೆ ಎಂದು ವರದಿಯು ತಿಳಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಡಿಜಿಟಲ್ ಪಾವತಿ ವೇದಿಕೆಗಳ ಬಳಕೆಯು ದುಪ್ಪಟ್ಟಾಗಿದ್ದು ಗೂಗಲ್‌ ಪೇ ಎಲ್ಲರಿಗಿಂತ ಮುಂದಿದ್ದರೆ, ಫೋನ್‌ ಪೇ ನಂತರದ ಸ್ಥಾನದಲ್ಲಿದೆ.

ಭಾರತೀಯ ಗ್ರಾಹಕರಿಗೆ ಪರಿವರ್ತನೆಗೊಂಡ ಸೇವೆಗಳು

ಭಾರತೀಯ ಗ್ರಾಹಕರಿಗೆ ಪರಿವರ್ತನೆಗೊಂಡ ಸೇವೆಗಳು

ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸಲು ರಾತ್ರೋರಾತ್ರಿ ತಮ್ಮನ್ನು ತಾವು ಪರಿವರ್ತಿಸಿಕೊಂಡ ಬ್ಯಾಂಕುಗಳೆಂದರೆ ಆಕ್ಸಿಸ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ತಮ್ಮ ಹೊಸ ಸಹವರ್ತಿಗಳಾದ ಐಸಿಐಸಿಐ, ಎಚ್‌ಡಿಎಫ್‌ಸಿ ಸೇರಿವೆ. ಇನ್ನು ಎಸ್‌ಬಿಐಗಳ ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಹೆಚ್ಚಿನ ಬದಲಾವಣೆ ಮಾಡಿವೆ ಎಂದು ಅದು ಹೇಳಿದೆ.

ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲೂ ತೀವ್ರಗೊಂಡ ಸ್ಪರ್ಧೆ

ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲೂ ತೀವ್ರಗೊಂಡ ಸ್ಪರ್ಧೆ

ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲಿನ ಸೇವೆಗಳ ನಡುವೆಯು ತೀವ್ರ ಸ್ಪರ್ಧೆಯಿದ್ದು, "ಯೋನೊ ಪ್ರಥಮ ಸ್ಥಾನದಲ್ಲಿದೆ, ನಿಯೋ ಮತ್ತು ಕೊಟಕ್ 811 ಕ್ರಮವಾಗಿ 2 ಮತ್ತು 3 ನೇ ಸ್ಥಾನದಲ್ಲಿವೆ" ಎಂದು ಅದು ಹೇಳಿದೆ. ಇತರರಲ್ಲಿ, ಈ ವರ್ಷ ಎನ್‌ಬಿಎಫ್‌ಸಿಗಳು ನಿರ್ಣಾಯಕ ಪಾತ್ರ ವಹಿಸಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಬಂಡವಾಳದ ಪ್ರಾಥಮಿಕ ಮೂಲವಾಗಿ ಹೊರಹೊಮ್ಮಿದೆ ಎಂದು ಅದು ಹೇಳಿದೆ.

ಕೋವಿಡ್-19 ಜಗತ್ತಿನಲ್ಲಿ, ಬ್ಯಾಂಕುಗಳು ಎನ್‌ಬಿಎಫ್‌ಸಿಗಳಿಗೆ ಹೆಚ್ಚಿನ ಸಾಲವನ್ನು ನೀಡುತ್ತಿದ್ದು, ಅವುಗಳ ಒಟ್ಟಾರೆ ಮಾನ್ಯತೆಯನ್ನು ಹೆಚ್ಚಿಸುತ್ತದೆ.

English summary
HDFC, ICICI Bank, SBI, Yes Bank, PNB and HSBC Bank emerged as the top-10 banks in 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X