ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಪಿನ್‌ ಅಂಚೆಯಲ್ಲಿ ಬರಲ್ಲ

|
Google Oneindia Kannada News

ಹೊಸದೆಹಲಿ, ಸೆ. 14 : ಇನ್ನು ಮುಂದೆ ನಿಮ್ಮ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಪಿನ್‌ ನಂಬರ್‌ಗಳು ಪೋಸ್ಟ್‌ನಲ್ಲಿ ಬರಲ್ಲ. ಹೌದು... ಇಂಥದ್ದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಎಚ್‌ಡಿಎಫ್‌ಸಿ ಪರಿಸರ ಸಂರಕ್ಷಣೆ ಉದ್ದೇಶದಿಂದ ಕಾಗದ ರಹಿತ ಬ್ಯಾಂಕಿಂಗ್‌ ಸಂಪರ್ಕಕ್ಕೆ ಮುಂದಾಗಿದೆ.

ತನ್ನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ದಾರರಿಗೆ ಬ್ಯಾಂಕ್‌ ಪಿನ್‌ ನಂಬರ್‌ಗಳನ್ನು ಇನ್ನು ಮುಂದೆ ಮೆಸೆಜ್‌ ಮೂಲಕ ಕಳಿಸಲು ಸಿದ್ಧವಾಗಿದೆ.(ಎಚ್ ಡಿಎಫ್ ಸಿ ಸೇರಿ 3 ಬ್ಯಾಂಕುಗಳಿಗೆ ಭಾರಿ ದಂಡ)

hdfc

ಈ ಹಿಂದೆ ಅಂಚೆ ಮೂಲಕ ಕಳಿಸುತ್ತಿದ್ದ ಪದ್ಧತಿಗೆ ತೀಲಾಂಜಲಿ ಹೇಳಲು ಮುಂದಾಗಿದ್ದು ಈ ಮೂಲಕ ಕಾಗದ ರಹಿತ ಬ್ಯಾಂಕಿಂಗ್‌ ವ್ಯವಸ್ಥೆಯತ್ತ ಗಮನ ಹರಿಸಿದೆ.
ಇದು ಪರಿಸರಕ್ಕೆ ಮಾತ್ರವಲ್ಲ ಬ್ಯಾಂಕ್‌ ಮತ್ತು ಗ್ರಾಹಕರಿಗೂ ಅನುಕೂಲವಾಗಲಿದ್ದು ಸಮಯದ ಉಳಿತಾಯವಾಗಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಹಿರಿಯ ಉಪಾಧ್ಯಕ್ಷ ಪರಾಗ್‌ ರಾವ್‌ ತಿಳಿಸಿದ್ದಾರೆ.(ಮೊಬೈಲ್‌ನಿಂದ ಮೆಸೇಜ್‌ ಕಳಿಸಿ, ಹಣ ರವಾನಿಸಿ)

'ಹಸಿರು ಪಿನ್‌' ಜಾರಿಗೆ ತಂದಿರುವುದರ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದ್ದೇವೆ. ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಭೂಮಿ ಮತ್ತು ಪರಿಸರ ರಕ್ಷಣಗೆ ಕೊಂಚ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

ಗ್ರಾಹಕರಿಗೆ ಪಿನ್‌ ನಂಬರ್‌ಗಳನ್ನು ಮೊಬೈಲ್‌ ಮೆಸೆಜ್ ಮೂಲಕ ತಲುಪಿಸಲಾಗುತ್ತದೆ. ಮೊದಲ ಬಾರಿಯ ಪಾಸ್‌ ವರ್ಡ್‌ಗಳನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಗ್ರಾಹಕರು ಅಗತ್ಯಬಿದ್ದರೆ ಬ್ಯಾಂಕ್‌ನ ಎಟಿಎಂ ಗಳಲ್ಲಿ ತಮ್ಮ ಪಾಸ್‌ ವರ್ಡ್ ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್ 1.75 ಕೋಟಿ ಡೆಬಿಟ್‌ ಕಾರ್ಡ್‌ದಾರರನ್ನು ಹೊಂದಿದೆ. ಬ್ಯಾಂಕ್‌ ಪ್ರತಿವರ್ಷ 16.5 ಕೋಟಿ ಕಾರ್ಡ್‌ ವಿತರಿಸುತ್ತಿದೆ. ತೀವ್ರ ಪ್ರವಾಹ ಕಾಣಿಸಿಕೊಂಡಿರುವುದರಿಂದ ಜಮ್ಮು ಕಾಶ್ಮೀರಕ್ಕೆ ಈ ಸೌಲಭ್ಯ ವಿಸ್ತರಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

English summary
As part of its ‘go-green’ initiative, HDFC Bank has started sending PIN, unique code number, for debit card holders through SMS instead of the practice of sending it by post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X