ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್‌ಡಿಎಫ್‌ಸಿ ಬ್ಯಾಂಕ್ ಹೊಸ ಸಿಇಒ ಆಗಿ ಶಶಿಧರ್ ಜಗದೀಶನ್ ನೇಮಕ: ಷೇರು ಶೇ. 6ರಷ್ಟು ಏರಿಕೆ

|
Google Oneindia Kannada News

ಮುಂಬೈ, ಆಗಸ್ಟ್‌ 04: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕಿನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ(ಸಿಇಒ) ಶಶಿಧರ್ ಜಗದೀಶನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಅನುಮೋದಿಸಿದ. ಈ ವರದಿ ಹೊರಬಿದ್ದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಸುಮಾರು ಶೇ.6ರಷ್ಟು ಏರಿಕೆ ಕಂಡವು.

ಇಲ್ಲಿಯವರೆಗೆ, ಈ ಷೇರು ಬಿಎಸ್‌ಇಯಲ್ಲಿ 1,059.90 ರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮಧ್ಯಾಹ್ನ 11.15 ಕ್ಕೆ, ಷೇರುಗಳು ಪ್ರತಿ 1,045.40 ಕ್ಕೆ ವಹಿವಾಟು ನಡೆಸಿದ್ದು, ಹಿಂದಿನ ಅವಧಿಯ ಮುಕ್ತಾಯಕ್ಕಿಂತ ಶೇ. 4 ಕ್ಕಿಂತ ಹೆಚ್ಚಾಗಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ತ್ರೈಮಾಸಿಕ ವರದಿ: ನಿವ್ವಳ ಲಾಭ ಶೇ. 19.6ರಷ್ಟು ಏರಿಕೆಹೆಚ್‌ಡಿಎಫ್‌ಸಿ ಬ್ಯಾಂಕ್ ತ್ರೈಮಾಸಿಕ ವರದಿ: ನಿವ್ವಳ ಲಾಭ ಶೇ. 19.6ರಷ್ಟು ಏರಿಕೆ

ಅಕ್ಟೋಬರ್‌ನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿರುವ ಆದಿತ್ಯ ಪುರಿಯಿಂದ ಜಗದೀಶನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ 70 ನೇ ವರ್ಷಕ್ಕೆ ಕಾಲಿಡುತ್ತಿರುವ ಪುರಿ, 1994 ರಲ್ಲಿ ಪ್ರಾರಂಭವಾದಾಗಿನಿಂದ ಬ್ಯಾಂಕ್‌ನೊಂದಿಗಿದ್ದಾರೆ.

HDFC Bank Shares Up 6 Percent: RBI Approves Jagdishan As Next CEO

ಅವರು ಇತ್ತೀಚೆಗೆ ಜುಲೈ 21 ರಿಂದ ಜುಲೈ 23 ರವರೆಗೆ 7.42 ಮಿಲಿಯನ್ ಷೇರುಗಳನ್ನು ಅಥವಾ 842.87 ಕೋಟಿ ಮೌಲ್ಯದ ಶೇ. 0.13 ಷೇರುಗಳನ್ನು ಮಾರಾಟ ಮಾಡಿದರು. ಇಂದಿನಂತೆ, ಖಾಸಗಿ ವಲಯದ ಬ್ಯಾಂಕಿನ ಮಾರುಕಟ್ಟೆ ಬಂಡವಾಳೀಕರಣವು(ಮಾರ್ಕೆಟ್ ಕ್ಯಾಪ್) 5.74 ಟ್ರಿಲಿಯನ್ ಆಗಿದೆ.

English summary
Shares of HDFC Bank Ltd on Tuesday surged nearly 6% after reports of Reserve Bank of India approving Sashidhar Jagdishan as the next chief executive officer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X