ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HDFC ಬ್ಯಾಂಕ್‌ ಷೇರಿನ ಬಲವರ್ಧನೆ: ಸೋಮವಾರ ಶೇಕಡಾ 3.97ರಷ್ಟು ಏರಿಕೆ

|
Google Oneindia Kannada News

ಮುಂಬೈ, ಜುಲೈ 6: ದೇಶದ ಬಹುದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಬ್ಯಾಂಕಿನ ಷೇರಿನ ಮೌಲ್ಯ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ವಹಿವಾಟು ಕಂಡಿದ್ದು, 3.97% ರಷ್ಟು ಏರಿಕೆ ಕಂಡಿದೆ.

Recommended Video

Keralaದಲ್ಲಿ ಮುಂದಿನ ವರ್ಷ ಜುಲೈವರೆಗೂ Lockdown! | Oneindia Kannada

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅದರ ಪ್ರಗತಿ ಶೇಕಡಾ 21ರಷ್ಟು ವರ್ಷದಿಂದ ವರ್ಷಕ್ಕೆ (YOY) ಏರಿಕೆ ಕಂಡಿದೆ. ಇದು ಹಿಂದಿನ ವರ್ಷದಲ್ಲಿ 8.30 ಟ್ರಿಲಿಯನ್‌ಗೆ ಹೋಲಿಸಿದರೆ, ಈ ವರ್ಷ 10.05 ಟ್ರಿಲಿಯನ್ ಡಾಲರ್‌ಗೆ ತಲುಪಿದೆ.

ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್

ಬೆಳಿಗ್ಗೆ 11:21 ಕ್ಕೆ, ಎಚ್‌ಡಿಎಫ್‌ಸಿ ಬ್ಯಾಂಕ್ ಅದರ ಹಿಂದಿನ ವಹಿವಾಟು ಮುಕ್ತಾಯಕ್ಕಿಂತ ಶೇಕಡಾ 3.34ರಷ್ಟು ಹೆಚ್ಚಳವಾಗಿ 1,110.10 ರುಪಾಯಿಗೆ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ 1.20% ಏರಿಕೆ ಕಂಡು 36,453.48 ಕ್ಕೆ ತಲುಪಿದೆ.

HDFC Bank: Shares Gain 4 Percent

2020ರ ಹಣಕಾಸು ವರ್ಷ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ನಲ್ಲಿನ ಠೇವಣಿಗಳು ಶೇಕಡಾ 25 ಪರ್ಸೆಂಟ್‌ರಷ್ಟು ಹೆಚ್ಚಳಗೊಂಡು 11.90 ಟ್ರಿಲಿಯನ್‌ಗೆ ತಲುಪಿದ್ದು, ಕ್ಯೂ 1 ಎಫ್‌ವೈ 20 ರಲ್ಲಿ 9.55 ಟ್ರಿಲಿಯನ್ ಆಗಿತ್ತು. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಠೇವಣಿಗಳು 11.48 ಟ್ರಿಲಿಯನ್ ಆಗಿವೆ ಎಂದು ಎಕ್ಸ್ಚೇಂಜ್ ಫೈಲಿಂಗ್ ತಿಳಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕಿನ ಪ್ರಸ್ತುತ ಮತ್ತು ಉಳಿತಾಯ ಖಾತೆ ಅನುಪಾತ ಅಥವಾ ಸಿಎಎಸ್ಎ ಅನುಪಾತವು 30 ಜೂನ್ 2020 ರ ವೇಳೆಗೆ ಸುಮಾರು ಶೇಕಡಾ 40 ರಷ್ಟಿದೆ, ಇದು ಹಿಂದಿನ ವರ್ಷದ ಶೇಕಡಾ 39.7% ಮತ್ತು ಮಾರ್ಚ್ 2020 ರ ಕೊನೆಯಲ್ಲಿ 42.2% ರಷ್ಟಿತ್ತು.

ಎಚ್‌ಡಿಎಫ್‌ಸಿ ಬ್ಯಾಂಕ್ ಜೂನ್ ತ್ರೈಮಾಸಿಕದಲ್ಲಿ ಪೋಷಕ ವಸತಿ ಅಭಿವೃದ್ಧಿ ಹಣಕಾಸು ನಿಗಮ (ಎಚ್‌ಡಿಎಫ್‌ಸಿ) ಯೊಂದಿಗೆ ಗೃಹ ಸಾಲ ಒಪ್ಪಂದದ ಪ್ರಕಾರ ನೇರ ನಿಯೋಜನೆ ಮಾರ್ಗದ ಮೂಲಕ 1,376 ಕೋಟಿ ಮೌಲ್ಯದ ಸಾಲಗಳನ್ನು ಖರೀದಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕಿನ ನಿವ್ವಳ ಲಾಭ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 17.72 ರಷ್ಟು ಏರಿಕೆ ಕಂಡು 6,927.69 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 5885.12 ಕೋಟಿ ರುಪಾಯಿ 2020 ರ ಕ್ಯೂ 4 ರಲ್ಲಿ ಒಟ್ಟು ಆದಾಯ ಶೇಕಡಾ 15.10 ರಷ್ಟು ಏರಿಕೆ ಕಂಡು, 35,917.63 ಕೋಟಿಗೆ ತಲುಪಿದೆ. 2019 ರ ಕ್ಯೂ 4 ರಲ್ಲಿ 31,204.46 ಕೋಟಿ ರುಪಾಯಿಗಳಷ್ಟಿತ್ತು.

English summary
Private sector lender HDFC Bank gained as much as 3.97% on Monday after it said that its advances grew 21% year-on-year (YoY) in the April-June quarter to ₹10.05 trillion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X