ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿ ಎಫ್ ಸಿ ಗ್ರಾಹಕರಿಗೆ ಶುಭ ಸುದ್ದಿ, ಬಡ್ಡಿ ದರ ಇಳಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 07: ಖಾಸಗಿ ವಲಯದ ದೊಡ್ಡ ಬ್ಯಾಂಕ್ ಎಚ್.ಡಿ.ಎಫ್.ಸಿ. ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಬ್ಯಾಂಕಿನಿಂದ ನೀಡುವ ಸಾಲದ ಮೇಲಿನ ಬಡ್ಡಿದರಗಳನ್ನು ಶೇಕಡಾ 0.10‌ ಮೂಲಾಂಶದಂತೆ ಇಳಿಕೆ ಮಾಡಿದೆ. ಎಂಸಿಎಲ್ಆರ್ ದರವನ್ನು ಶೇಕಡಾ 0.05 ರಷ್ಟಿಂದ ಶೇಕಡಾ 0.10 ರಷ್ಟು ಇಳಿಕೆ ಮಾಡಿದೆ.

ಬಡ್ಡಿದರ ಇಳಿಕೆಯಿಂದ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳು ಅಗ್ಗವಾಗುವ ನೀರಿಕ್ಷೆಯಿದ್ದು, ಇಎಂಐ ಕಡಿಮೆ ಯಾಗಲಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಎಂಸಿಎಲ್ಆರ್ ದರ ತಗ್ಗಿಸಲಾಗಿತ್ತು.

ಎಸ್ಬಿಐ ಸಾಲಗಾರರಿಗೆ ಶುಭ ಸುದ್ದಿ, ಸೆ.1ರಿಂದ EMI ದರ ಕುಸಿತಎಸ್ಬಿಐ ಸಾಲಗಾರರಿಗೆ ಶುಭ ಸುದ್ದಿ, ಸೆ.1ರಿಂದ EMI ದರ ಕುಸಿತ

ಅಕ್ಟೋಬರ್ 1 ರಿಂದ ಹೊಸ ದರ ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಆರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿತ್ತು.

HDFC Bank launches new scheme, now get cheap loans

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ನಾಲ್ಕರಂದು ಈ ಬಗ್ಗೆ ಸೂಚನೆ ನೀಡಿತ್ತು. ಇದರ ಜೊತೆಗೆ ಸಣ್ಣ, ಅತಿ ಸಣ್ಣ ಮಧ್ಯಮ ಉದ್ದಿಮೆ(ಎಂಎಸ್ಎಂಇ), ಗೃಹ ಮತ್ತು ರಿಟೇಲ್ ಸಾಲ ಸೇರಿದಂತೆ ಎಲ್ಲ ಫ್ಲೋಟಿಂಗ್ ರೇಟ್ ಸಾಲಗಳ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ಸೂಚಿಸಿತ್ತು. ಒಟ್ಟಾರೆ, ಈ ವರ್ಷದಲ್ಲಿ 110 bps ಕಡಿತಗೊಂಡಿದ್ದು, ಬ್ಯಾಂಕ್ ಗಳು ನೀಡುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

ರೆಪೋ ದರ ಎಂದರೆ ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರವಾಗಿದೆ. ಆರ್ ಬಿಐನ ರೆಪೋ ದರ 5.4% ನಷ್ಟಿದೆ. ಇದಕ್ಕೆ ಅನುಗುಣವಾಗಿ ಬ್ಯಾಂಕುಗಳು Repo rate lending rate (RLLR) ಆರ್ ಬಿಐ ತನ್ನ ರೆಪೋದರ ಬದಲಾಯಿಸುತ್ತಿದ್ದಂತೆ ಎಸ್ಬಿಐನ RLLRಕೂಡಾ ಬದಲಾಗುತ್ತದೆ. ಇದರ ಪರಿಣಾಮ ಗೃಹ ಸಾಲ ದರದ ಮೇಲೆ ಬೀಳುತ್ತದೆ.

English summary
Private sector major bank HDFC has announced a cut of up to 10 basis points in its MCLR for individual tenures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X