ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!

ಪ್ರಮುಖ ಬ್ಯಾಂಕುಗಳಾದ ಎಚ್ ಡಿಎಫ್ ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕುಗಳ ನಿರ್ಧಾರ; ಪ್ರತಿ ನಗದು ಪಾವತಿಗೆ ಕನಿಷ್ಠ 5ರಿಂದ ಗರಿಷ್ಠ 150ವರೆಗಿನ ಶುಲ್ಕ ನಿಗದಿ; ಮಾಸಿಕ 4 ವಿತ್ ಡ್ರಾ ಉಚಿತ, ಆನಂತರದ ವಿತ್ ಡ್ರಾ ಮೇಲೆ ಶುಲ್ಕ.

|
Google Oneindia Kannada News

ನವದೆಹಲಿ, ಮಾರ್ಚ್ 2: ಎಚ್ ಡಿಎಫ್ ಸಿ, ಐಸಿಐಸಿಐ, ಆ್ಯಕ್ಸಿಸ್ ಬ್ಯಾಂಕುಗಳು ಸೇರಿದಂತೆ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ತಮ್ಮಲ್ಲಿನ ನಗದು ವ್ಯವಹಾರಗಳಿಗೆ 150 ರು.ವರೆಗಿನ ಶುಲ್ಕ ವಿಧಿಸಲು ನಿರ್ಧರಿಸಿವೆ.

ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಬುಧವಾರವೇ (ಮಾ. 1) ತಮ್ಮೆಲ್ಲಾ ಶಾಖೆಗಳಿಗೆ ಈ ಬ್ಯಾಂಕುಗಳ ಕೇಂದ್ರ ಕಚೇರಿಗಳು ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 1ರಿಂದಲೇ ಇದು ಅಧಿಕೃತವಾಗಿ ಜಾರಿಗೊಳ್ಳಲಿದೆ.

HDFC Bank, ICICI And Axis Resume Levy On Cash Transactions

ಈ ನಿಯಮಗಳು, ವೇತನ ಖಾತೆ ಹಾಗೂ ಉಳಿತಾಯ ಖಾತೆಗಳಿಗೂ ಅನ್ವಯವಾಗಲಿದೆ ಎಂದು ಬ್ಯಾಂಕುಗಳ ಮೂಲಗಳು ತಿಳಿಸಿವೆ.

ಅದರಂತೆ, ಪ್ರಮುಖ ಬ್ಯಾಂಕುಗಳ ಅಕೌಂಟ್ ಗಳಿಗೆ ಹಣ ತುಂಬಿದಾಗ ಕನಿಷ್ಠ 150 ರು.ಗಳ ಶುಲ್ಕ ಪಾವತಿಸಬೇಕಿದೆ. ಇದಲ್ಲದೆ, ಯಾವುದೇ ಖಾತೆಯಿಂದ ಹಣ ವಿತ್ ಡ್ರಾ ಮಾಡಬೇಕಾದರೂ ಶುಲ್ಕ ತುಂಬಬೇಕಿದೆ. ಆದರೆ, ಈ ವಿಚಾರದಲ್ಲಿ ಕೊಂಚ ರಿಯಾಯಿತಿ ನೀಡಲಾಗಿದೆ.

ಡಿಬಿಟ್ ಕಾರ್ಡುಗಳ ಮೂಲಕ ಅಥವಾ ಬ್ಯಾಂಕುಗಳಲ್ಲಿ ವಿತ್ ಡ್ರಾ ಫಾರ್ಮ್ ತುಂಬುವ ಮೂಲಕ ಹಣ ಬಿಡಿಸಿಕೊಳ್ಳುವುದಾದಲ್ಲಿ ಪ್ರತಿ ತಿಂಗಳು ನಾಲ್ಕು ಬಾರಿ ಮಾತ್ರ ಶುಲ್ಕ ರಹಿತವಾಗಿ ಹಣ ಪಡೆಯಬಹುದು. ಆದರೆ, ಯಾವುದೇ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿಕೊಳ್ಳುವುದಾದರೆ ಪ್ರತಿಯೊಂದು ಹಣ ಹಿಂಪಡೆಯುವ ಪ್ರಕ್ರಿಯೆಗೂ ಆಯಾ ವ್ಯವಹಾರಗಳಲ್ಲಿ ಹಿಂಪಡೆದ ಹಣದ ಮೊತ್ತದ ಮೇಲೆ ಕನಿಷ್ಠ 5ರಿಂದ 150 ರು. ಶುಲ್ಕ ಅನ್ವಯವಾಗಲಿದೆ.

ಇದಲ್ಲದೆ, ಥರ್ಡ್ ಪಾರ್ಟಿ ಫಂಡ್ ವರ್ಗಾವಣೆಗೂ (ಬೇರೊಬ್ಬರ ಖಾತೆಗೆ ಹಣ ಜಮೆ ಮಾಡುವುದು) ಮಿತಿ ಹೇರಲಾಗಿದ್ದು, ದಿನವೊಂದಕ್ಕೆ ಕೇವಲ 25 ಸಾವಿರ ರು.ವರೆಗೆ ಮಾತ್ರ ವರ್ಗಾವಣೆ ಮಾಡಲು ಅವಕಾಶವಿರುತ್ತದೆ.

ಆದರೆ, ಐಸಿಐಸಿಐ ಬ್ಯಾಂಕಿನಲ್ಲಿ ಈ ಮಿತಿಯನ್ನು ಸಡಿಲಿಸಲಾಗಿದ್ದು ದಿನವೊಂದಕ್ಕೆ 50 ಸಾವಿರ ರು.ಗಳವರೆಗೂ ಜಮೆ ಮಾಡಲು ಅವಕಾಶ ನೀಡಲಾಗಿದೆ.

English summary
Banks including HDFC Bank, ICICI Bank and Axis Bank on Wednesday began charging a minimum amount of Rs. 150 per transaction for cash deposits and withdrawals beyond four free transactions in a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X