ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ ನಡುವೆ ಉದ್ಯೋಗಿಗಳಿಗೆ ಶುಭ ಸುದ್ದಿ ಕೊಟ್ಟ HCL

|
Google Oneindia Kannada News

ಬೆಂಗಳೂರು, ಮೇ 22: ಕೊರೊನಾವೈರಸ್ ಹರಡದಂತೆ ವಿಧಿಸಾಲಾಗಿರುವ ಲಾಕ್ಡೌನ್ ನಿಂದ ಐಟಿ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಪ್ರಮುಖ ಕಂಪನಿಗಳ ಉದ್ಯೋಗಿಗಳ ಸಂಖ್ಯೆ ಕಡಿತಗೊಂಡಿದೆ. ಹಲವೆಡೆ ಉದ್ಯೋಗಿಗಳಿಗೆ ಸಿಗುತ್ತಿದ್ದ ಸಂಬಳ, ಬಡ್ತಿ, ಸೌಲಭ್ಯಗಳಿಗೆ ಕಡಿವಾಣ ಬಿದ್ದಿದೆ. ಈ ನಡುವೆ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ.

ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ ತನ್ನ 150,000ಕ್ಕೂ ಅಧಿಕ ಸಿಬ್ಬಂದಿಗೆ ಕಳೆದ ವರ್ಷ ಬಾಕಿ ಬೋನಸ್ ನೀಡಲು ಮುಂದಾಗಿದೆ. ಜೊತೆಗೆ ಯಾವುದೇ ಸ್ತರದ ಉದ್ಯೋಗಿಗಳ ಸಂಬಳ ಕಡಿತಗೊಳಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಉದ್ಯೋಗ ಕಡಿತ ಕುರಿತಂತೆ ಟಿಸಿಎಸ್ ಸಂಸ್ಥೆಯಿಂದ ಮಹತ್ವದ ಘೋಷಣೆಉದ್ಯೋಗ ಕಡಿತ ಕುರಿತಂತೆ ಟಿಸಿಎಸ್ ಸಂಸ್ಥೆಯಿಂದ ಮಹತ್ವದ ಘೋಷಣೆ

ನೋಯ್ಡಾ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಈ ಹಿಂದೆ ಘೋಷಿಸಿದಂತೆ 15,000 ನೇಮಕಾತಿಯನ್ನು ಮುಂದುವರೆಸಲು ಮುಂದಾಗಿದೆ. ಫ್ರೆಶರ್ಸ್ ಗಳಿಗೆ ಉದ್ಯೋಗ ಸಿಗಲಿದೆ ಎಂದು ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಅಪ್ಪರಾವ್ ವಿವಿ ಹೇಳಿದರು.

HCL Technologies gives good news to employees; will pay promised bonuses

ಕೆಲವು ಪ್ರಾಜೆಕ್ಟ್ ಗಳು ವಿಳಂಬವಾಗಿವೆ. ಆದರೆ, ಪ್ರಾಜೆಕ್ಟ್ ಕ್ಯಾನ್ಸಲ್ ಆಗಿಲ್ಲ, ಹೀಗಾಗಿ, ಹಂತ ಹಂತವಾಗಿ ನೇಮಕಾತಿ ಮುಂದುವರೆಸಲಾಗುತ್ತದೆ ಎಂದರು. ಐಟಿ ಪ್ರಮುಖ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಡಬ್ಲ್ಯೂಎನ್ ಎಸ್ ಮುಂತಾದ ಸಂಸ್ಥೆಗಳು ಈಗಾಗಲೇ ಉದ್ಯೋಗಿಗಳ ಸಂಬಳ ಕಡಿತ, ಬಡ್ತಿ ನೀಡುವುದನ್ನು ತಡೆ ಹಿಡಿದಿವೆ.

 ಕೊರೊನಾ ಭೀತಿ ನಡುವೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕೊರೊನಾ ಭೀತಿ ನಡುವೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಷ್ಟೇ ಅಲ್ಲದೆ ಅಮೆರಿಕ, ಯುರೋಪ್ ದೇಶಗಳಲ್ಲಿರುವ ಸಂಸ್ಥೆಯ ಕಚೇರಿಗಳನ್ನು ಬಂದ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಆಯ್ಕೆ ಬಯಸಿದ್ದಾರೆ. ಕೆಲ ಐಟಿ ಪಾರ್ಕ್ ಗಳಲ್ಲಿ ಕದ್ದು ಮುಚ್ಚಿ ಕಚೇರಿಯಲ್ಲಿ ತುರ್ತು ಕೆಲಸ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಹಲವು ಕಂಪನಿಗಳಿಗೆ ಇದು ಅಪ್ರೈಸಲ್ ಅವಧಿ ಹೀಗಾಗಿ ಐಟಿ ಉದ್ಯೋಗಿಗಳಿಗೆ ತಿಂಗಳ ಸಂಬಳ ಹಾಗೂ ಹೈಕ್ ಎಷ್ಟು ಸಿಗಬಹುದು ಎಂಬ ಚಿಂತೆ ಕಾಡುತ್ತಿದೆ.

English summary
HCL Technologies has said it will not trim salaries of its 150,000 staff and will also pay promised bonuses for the previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X