ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ HCL

|
Google Oneindia Kannada News

ನವದೆಹಲಿ, ಜನವರಿ 15: ನೊಯ್ಡಾ ಮೂಲದ ಐಟಿ ಕಂಪನಿ ಹೆಚ್‌ಸಿಎಲ್‌ ಟೆಕ್ನಾಲಜೀಸ್ ಮುಂದಿನ 4 ರಿಂದ 6 ತಿಂಗಳಿನಲ್ಲಿ ಸುಮಾರು 20,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಇದರಲ್ಲಿ ಫ್ರೆಶರ್‌ಗಳು ಸೇರಿದಂತೆ ಅನುಭವಿ ನೌಕರರು ಸೇರಿದ್ದಾರೆ.

2020ರಲ್ಲಿ 10 ಬಿಲಿಯನ್ ಡಾಲರ್ ಆದಾಯದ ಮೈಲಿಗಲ್ಲನ್ನು ದಾಟಿರುವ ಹೆಚ್‌ಸಿಎಲ್‌ ಡಿಸೆಂಬರ್ ತ್ರೈಮಾಸಿಕದ ಕೊನೆಯಲ್ಲಿ, ಕಂಪನಿಯು ಒಟ್ಟು 1,59,682 ಉದ್ಯೋಗಿಗಳನ್ನು ಹೊಂದಿದ್ದು, ಕ್ರಮವಾಗಿ ದ್ವಿತೀಯ ತ್ರೈಮಾಸಿಕ ಮತ್ತು ಮೊದಲ ತ್ರೈಮಾಸಿಕದಲ್ಲಿ 153,085 ಮತ್ತು 149,173 ರಷ್ಟಿದೆ.

ಶಾಲಾ, ಕಾಲೇಜುಗಳಿಗೆ 6,600 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಗುಜರಾತ್ ಸರ್ಕಾರಶಾಲಾ, ಕಾಲೇಜುಗಳಿಗೆ 6,600 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಗುಜರಾತ್ ಸರ್ಕಾರ

ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ, ಎಚ್‌ಸಿಎಲ್ ಟೆಕ್ ಒಟ್ಟು 12,422 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಂಡಿದ್ದು, ನಿವ್ವಳ ಸೇರ್ಪಡೆ 6,597 ರಷ್ಟಿದೆ. ಐಟಿ ಸೇವೆಗಳ ಪ್ರಮಾಣವು ಶೇಕಡಾ 10.2 ಕ್ಕೆ ಇಳಿದಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಶೇ. 12.2 ರಷ್ಟಿತ್ತು.

HCL Tech To Hire 20,000 Employee In Next 4 To 6 Months: CEO Vijaykumar

ಮೂರನೇ ತ್ರೈಮಾಸಿಕದಲ್ಲಿ 6,500 ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಲಾಗಿದೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಮತ್ತು ಸಿಇಒ ಸಿ. ವಿಜಯಕುಮಾರ್ ಹೇಳಿದರು.

ಕಂಪನಿಯ ನಿವ್ವಳ ಲಾಭವು ಡಿಸೆಂಬರ್ 2020 ರ ತ್ರೈಮಾಸಿಕದಲ್ಲಿ ಶೇಕಡಾ 31.1 ಏರಿಕೆಯಾಗಿದ್ದು, 3,982 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 3,037 ಕೋಟಿ ರೂ. ಆಗಿದ್ದು, ಅದರ ಆದಾಯವು ಶೇಕಡಾ 6.4 ರಷ್ಟು ಏರಿಕೆಯಾಗಿ 19,302 ಕೋಟಿ ರೂ.ಗೆ ತಲುಪಿದೆ.

English summary
HCL plans to hire about 20,000 people, both freshers and laterals, over the next 4-6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X