ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

700 ಕೋಟಿ ರು ವಿಶೇಷ ಬೋನಸ್ ! ಎಚ್‌ಸಿಎಲ್ ಟೆಕ್ನಾಲಜೀಸ್ ಘೋಷಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಐಟಿ ಸೇವಾ ಸಂಸ್ಥೆ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಸಿಬ್ಬಂದಿಗಳಿಗೆ ಒಂದು ಬಾರಿಯ ವಿಶೇಷ ಬೋನಸ್ ನೀಡಲು 700 ಕೋಟಿ ರು ಮೀಸಲಿಟ್ಟಿರುವುದಾಗಿ ಘೋಷಿಸಿದೆ.

2020ರಲ್ಲಿ 10 ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಸಾಧನೆ ಮಾಡಿರುವ ಎಚ್‌ಸಿಎಲ್ ತನ್ನ ಉದ್ಯೋಗಿಗಳಿಗೆ ಈ ಬೋನಸ್ ನೀಡಲು ಮುಂದಾಗಿದೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಸಿಬ್ಬಂದಿಗೆ ಈ ವಿಶೇಷ ಬೋನಸ್ ಸಿಗಲಿದೆ.

20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ HCL20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ HCL

ಡಿಸೆಂಬರ್ 31, 2020ರಂತೆ ಎಚ್‌ಸಿಎಲ್ ಸುಮಾರು 159,682 ಉದ್ಯೋಗಿಗಳನ್ನು ಹೊಂದಿದೆ. ''ನಮಗೆ ನಮ್ಮ ಉದ್ಯೋಗಿಗಳೇ ಅತ್ಯಂತ ಬೆಲೆಬಾಳುವ ಆಸ್ತಿ, ಕೊವಿಡ್ 19 ಸಂದರ್ಭದಲ್ಲಿ ಎಚ್‌ಸಿಎಲ್ ಸಿಬ್ಬಂದಿಗಳು ಸಂಸ್ಥೆಯ ಪ್ರಗತಿಯಾಗಿ ಶ್ರಮಪಟ್ಟಿದ್ದಕ್ಕೆ ಕೊಡುಗೆ ನೀಡಲಾಗುತ್ತಿದೆ. ಫೆಬ್ರವರಿ 2021ರಲ್ಲಿ ಈ ವಿಶೇಷ ಬೋನಸ್ ಸಿಗಲಿದೆ'' ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಮಾನವ ಸಂಪನ್ಮೂಲ ಅಧಿಕಾರಿ ಅಪ್ಪರಾವ್ ವಿವಿ ಹೇಳಿದ್ದಾರೆ.

HCL Tech announces special one-time bonus for employees worth ₹700 crore

ಲಾಕ್ಡೌನ್ ನಡುವೆ ಉದ್ಯೋಗಿಗಳಿಗೆ ಶುಭ ಸುದ್ದಿ ಕೊಟ್ಟ HCL ಲಾಕ್ಡೌನ್ ನಡುವೆ ಉದ್ಯೋಗಿಗಳಿಗೆ ಶುಭ ಸುದ್ದಿ ಕೊಟ್ಟ HCL

ಡಿಸೆಂಬರ್ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ 19,302 ಕೋಟಿ ರು ಏರಿಕೆಯಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ(QoQ) ಶೇ 3.8ರಷ್ಟು ಹಾಗೂ ವರ್ಷದಿಂದ ವರ್ಷದ ಲೆಕ್ಕದಂತೆ(YoY) ಶೇ 6.4ರಷ್ಟು ಜಿಗಿತ ಕಂಡಿದೆ. ನಿವ್ವಳ ಲಾಭ 3,982 ಕೋಟಿ ರುಗೆ ಏರಿಕೆಯಾಗಿದ್ದು, QoQನಂತೆ ಶೇ 26.7ರಷ್ಟು ಏರಿಕೆ ಹಾಗೂ YoYನಂತೆ ಶೇ 31.1ರಷ್ಟು ಏರಿದೆ.

English summary
IT services major HCL Technologies (HCL) today announced it is issuing a one-time special bonus worth ₹700 crore to employees around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X