ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಕೊವಿಡ್ 19 ಸಂಕಷ್ಟದ ಕಾಲದಲ್ಲೂ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಸಿಬ್ಬಂದಿಗಳಿಗೆ ಕೌಶಲ್ಯಕ್ಕೆ ತಕ್ಕ ಬೋನಸ್ ಘೋಷಿಸಿದೆ. ಸುಮಾರು 16 ಸಾವಿರ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ

ಸಿಟಿಸಿ (Cost-to-company)ಗೆ ಅನುಗುಣವಾಗಿ ಶೇ 25 ರಿಂದ 30 ರಷ್ಟು ಕೌಶಲ್ಯ ಆಧಾರಿತ ಭತ್ಯೆ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ರೀತಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.

ಐಟಿ ಫ್ರೆಶರ್ಸ್ ಗಮಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ ಐಟಿ ಫ್ರೆಶರ್ಸ್ ಗಮಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 20, 000 ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ಎಚ್‌ಸಿಎಲ್ ಟೆಕ್ನಾಲಜೀಸ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ 14, 000 ಮಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಕೊವಿಡ್ ಸಂಕಷ್ಟ, ವೀಸಾ ನೀತಿ ಬದಲಾವಣೆ ನಡುವೆ ವಿದೇಶದಲ್ಲೂ ಹೊಸ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಪ್ಪಾರಾವ್ ಹೇಳಿದರು.

HCL offers skill-based allowance to 16k staffers

ಎಚ್‌ಸಿಎಲ್ ಒಟ್ಟಾರೆ 1,68, 977 ಉದ್ಯೋಗಿಗಳನ್ನು ಹೊಂದಿದ್ದು, ಆಟ್ರಿಷನ್ ದರ ಶೇ 16 ರಿಂದ ಶೇ 9.9ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.

English summary
HCL Technologies has offered a skill-based allowance of 25-30% of their CTC (cost-to-company) to about 16,000 employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X