ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Xiaomi ಕಂಪನಿಯ ಬ್ಯಾಂಕ್ ಖಾತೆ ಜಪ್ತಿ ಆದೇಶಕ್ಕೆ ತಡೆ ನೀಡಿದ HC

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಮೇ 6: ಚೀನಾ ಮೂಲದ ಶಓಮಿ(xiaomi) ಇಂಡಿಯಾ ಕಂಪನಿಗೆ ಸೇರಿದ ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿನ 5,551.27 ಕೋಟಿಯ ಬೃಹತ್‌ ಮೊತ್ತ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಅಲ್ಲದೆ 'ಮುಟ್ಟುಗೋಲಿಗೆ ಆದೇಶಿಸಲಾಗಿರುವ ಬ್ಯಾಂಕ್‌ ಖಾತೆಗಳಲ್ಲಿರುವ ಹಣವನ್ನು ಕಂಪನಿಯು ತಾತ್ಕಾಲಿಕವಾಗಿ ತನ್ನ ದೈನಂದಿನ ಖರ್ಚು ವೆಚ್ಚಗಳಿಗೆ ಮಾತ್ರ ಬಳಸಬಹುದು' ಎಂದು ಆದೇಶದಲ್ಲಿ ವಿವರಿಸಿದೆ.

ಬೆಂಗಳೂರಿನ ಮಾರತಹಳ್ಳಿಯ ಟೆಕ್‌ ಗ್ರಾಮದಲ್ಲಿರುವ ಶಓಮಿ ಕಂಪನಿ ಕಚೇರಿಯ ಅಧಿಕೃತ ಪ್ರತಿನಿಧಿ ಸಮೀರ್‌ ಬಿ.ಎಸ್‌.ರಾವ್‌ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ರಜಾಕಾಲದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರು ಈ ಆದೇಶ ಮಾಡಿದ್ದಾರೆ.

 Karnataka High Court Stays ED Order Seizing Xioami India Assets under FEMA

ಅಲ್ಲದೆ, ಪ್ರತಿವಾದಿಗಳಾದ ಜಾರಿ ನಿರ್ದೇಶನಾಲಯ, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಮತ್ತು ಸೇರಿದಂತೆ ಒಟ್ಟು ಆರು ಮಂದಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಇದೇ 12ಕ್ಕೆ ರಜಾಕಾಲದ ಇದೇ ಏಕಸದಸ್ಯಪೀಠ ನಡೆಸಲಿದೆ.

ಅರ್ಜಿದಾರರ ಪರ ವಕೀಲರು, ಫೆಮಾ ಕಾಯಿದೆಯಡಿ ಆರೋಪ ಹೊರಿಸಲಾಗಿದೆ. ಆದರೆ ಭಾರತದ ಹೊರಗಿರುವ ತನ್ನ ಘಟಕಗಳಿಗೆ ಆದಾಯ ತೆರಿಗೆ ಇಲಾಖೆ ಮೂಲಕವೇ ರಾಜಧನ ಪಾವತಿಸಲಾಗುತ್ತಿದೆ, ಇದರಲ್ಲಿ ಯಾವುದೇ ಅಕ್ರಮವಿಲ್ಲ. ಆದರೂ ಕಾನೂನುಬಾಹಿರವಾಗಿ ಹಣ ಮುಟ್ಟುಗೋಲಿಗೆ ಆದೇಶಿಸಲಾಗಿದೆ ಎಂದಿದ್ದರು.

ಆದರೆ, ಇಡಿ ಪರ ವಕೀಲರು, ಇ.ಡಿ ಈ ರೀತಿಯ ಆದೇಶ ಹೊರಡಿಸಬಹುದೆಂಬ ಅನುಮಾನದಿಂದ ಏಪ್ರಿಲ್ 29ಕ್ಕೂ ಕೆಲವೇ ದಿನಗಳ ಮುನ್ನ ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಮೊತ್ತದ ಹಣವನ್ನು ಶಿಯೊಮಿ ಚೀನಾದಲ್ಲಿರುವ ಸಂಸ್ಥೆಗೆ ವರ್ಗಾವಣೆ ಮಾಡಿದೆ' ಎಂದರು.

ಪ್ರಕರಣದ ಹಿನ್ನೆಲೆ: ಶಓಮಿ ಮೊಬೈಲ್, ಸ್ಮಾರ್ಟ್‌ ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ಭಾರತದಲ್ಲಿ 2014ರಿಂದ ಕಾರ್ಯ ನಿರ್ವಹಿಸುತ್ತಿದೆ. ಶಓಮಿ ಇಂಡಿಯಾ ಕಂಪನಿಯು ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಆದ್ದರಿಂದ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳನ್ನು ಉಲ್ಲಂಘನೆ ಎಂದು ಜಾರಿ ನಿರ್ದೇಶನಾಲಯ ಆರೋಪಸಿದೆ.

ಇದೇ ಆರೋಪಗಳ ಸಂಬಂಧ ಬೆಂಗಳೂರಿನ ಇ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್‌. ಸೋಮಶೇಖರ್‌, 'ಶಓಮಿ ಕಂಪನಿಯು ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಡ್ವಾಯಿಷ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ಬೃಹತ್‌ ಮೊತ್ತವನ್ನು ಜಪ್ತಿ ಮಾಡಲು ಇದೇ ಏಪ್ರಿಲ್‌ 29ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.

English summary
Relief to Xiaomi India company: Karnataka High Court stayed Enforcement Directorate(ED) order Seizing Xioami India Assets under FEMA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X