ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಗಲ್ ಸಿನಿಮಾದ ದಾಖಲೆ ಕಲೆಕ್ಷನ್ ಸುದ್ದಿ ಸುಳ್ಳೇ?

ಚೀನಾದಲ್ಲಿ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 2000 ಕೋಟಿ ರು. ಹಣ ಬಾಚಿಲ್ಲ.

|
Google Oneindia Kannada News

ನವದೆಹಲಿ, ಜುಲೈ 4: ಕಳೆದ ವರ್ಷಾಂತ್ಯಕ್ಕೆ ತೆರೆ ಕಂಡಿದ್ದ ದಂಗಲ್ ಚಿತ್ರವು ಚೀನಾ ದೇಶದಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು, ಸುಮಾರು 2 ಸಾವಿರ ಕೋಟಿ ರು.ಗಳನ್ನು ಗಳಿಸಿದೆ ಎಂಬ ಸುದ್ದಿ ಇತ್ತೀಚೆಗೆ ಹರಡಿತ್ತು.

ಇದು ವಿಶ್ವದಲ್ಲಿ ಅತಿ ಹೆಚ್ಚು ಹಣ ಬಾಚಿದ 5ನೇ ಇಂಗ್ಲೀಷೇತರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಬಂದು ಭಾರತೀಯ ಚಿತ್ರ ರಸಿಕರಿಗೆ ಕೋಡು ತರಿಸಿತ್ತು.

'ದಂಗಲ್' ಅತಿ ಹೆಚ್ಚು ಹಣ ಗಳಿಸಿದ 5ನೇ ನಾನ್-ಇಂಗ್ಲೀಷ್ ಚಿತ್ರ'ದಂಗಲ್' ಅತಿ ಹೆಚ್ಚು ಹಣ ಗಳಿಸಿದ 5ನೇ ನಾನ್-ಇಂಗ್ಲೀಷ್ ಚಿತ್ರ

ಆದರೆ, ಇದು ಸುಳ್ಳು ಎನ್ನುತ್ತಿದೆ ಇಲ್ಲೊಂದು ವರದಿ. ಎನ್ ಡಿಟಿವಿ ಇಂಥದ್ದೊಂದು ವರದಿಯನ್ನು ಬಿತ್ತರಿಸಿದೆ. ಅದರಲ್ಲಿ ಅಮೀರ್ ಖಾನ್ ಅವರ ಖಾಸಾ ವ್ಯಕ್ತಿಯೊಬ್ಬರ ಹೇಳಿಕೆಯೊಂದನ್ನು ದಾಖಲಿಸಲಾಗಿದೆ.

ಹಾಗಿದ್ದರೆ, ಅವರು ಹೇಳಿದ್ದೇನು? ಹಾಗಾದರೆ, ಈವರೆಗೆ ಬಂದ ವರದಿಗಳೆಲ್ಲವೂ ಸುಳ್ಳೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಬಿಗ್ ಕಲೆಕ್ಷನ್ ಚಿತ್ರ

ಬಿಗ್ ಕಲೆಕ್ಷನ್ ಚಿತ್ರ

ಜೂನ್ 14ರಂದು ಅಂಥದ್ದೊಂದು ಸುದ್ದಿ ಬಂದಿತ್ತು. ದಂಗಲ್ ಚಿತ್ರ ಚೀನಾದಲ್ಲಿ 2 ಸಾವಿರ ಕೋಟಿ ರು.ಗಳಷ್ಟು ಹಣ ಬಾಚಿದೆ. ಭಾರತದಲ್ಲಿ ಗಳಿಸಿದ ಹಣವೂ ಸೇರಿದಂತೆ ಒಟ್ಟಾರೆಯಾಗಿ ಆ ಚಿತ್ರ ಗಳಿಸಿದ್ದು 2000 ಕೋಟಿ ರು. ದಾಟಿದೆ ಎಂದು ಹೇಳಲಾಗಿತ್ತು.

ಕೊಂಚ ದಿನ ಬೇಕಾಗಬಹುದು ದಾಖಲೆಗೆ

ಕೊಂಚ ದಿನ ಬೇಕಾಗಬಹುದು ದಾಖಲೆಗೆ

ಇದೀಗ, ಈ ಬಗ್ಗೆ ಸ್ಪಷ್ಟನೆಯೊಂದು ಹೊರಬಿದ್ದಿದೆ. ಅಮೀರ್ ಖಾನ್ ಅವರ ಖಾಸಾ ವ್ಯಕ್ತಿಯೊಬ್ಬ ನೀಡಿರುವ ಹೇಳಿಕೆಯ ಪ್ರಕಾರ, ''ದಂಗಲ್ ಚಿತ್ರದ ಇನ್ನೂ 2 ಸಾವಿರ ಕೋಟಿ ರು. ಗಡಿ ಮುಟ್ಟಿಲ್ಲ. ಅದಿನ್ನೂ, 1,864 ಕೋಟಿ ರು. ಗಳಿಸಿದೆಯಷ್ಟೇ ಎಂದಿದ್ದಾರೆ. ಬಹುಶಃ 2000 ಕೋಟಿ ರು. ಗಡಿ ಮುಟ್ಟಲು ಇನ್ನೂ ಸ್ವಲ್ಪ ದಿನ ಬೇಕಾಗಬಹುದು ಎಂದು ಹೇಳಿದ್ದಾರೆ.

ಅನೇಕ ದಾಖಲೆಗಳನ್ನು ಮುರಿದಿದೆ

ಅನೇಕ ದಾಖಲೆಗಳನ್ನು ಮುರಿದಿದೆ

ಈ ಸುದ್ದಿ ಸುಳ್ಳೆಂದು ಪರಿಗಣಿಸಿದರೂ, ದಂಗಲ್ ಚಿತ್ರ ಈಗಾಗಲೇ ಹಲವಾರು ದಾಖಲೆಗಳನ್ನು ಮುರಿದಿರುವುದು ಸತ್ಯ ಎಂದು ಅಮೀರ್ ಖಾನ್ ಅವರ ಆತ್ಮೀಯ ವ್ಯಕ್ತಿ ಹೇಳಿದ್ದಾರೆ.

ಮೋದಿ-ಜಿನ್ ಪಿಂಗ್ ಭೇಟಿ ವೇಳೆ ಪ್ರಸ್ತಾಪ

ಮೋದಿ-ಜಿನ್ ಪಿಂಗ್ ಭೇಟಿ ವೇಳೆ ಪ್ರಸ್ತಾಪ

ಅಂದಹಾಗೆ, ದಂಗಲ್ ಚಿತ್ರದ ಮತ್ತಷ್ಟು ವಿಶೇಷಗಳು ಬರುತ್ತಲೇ ಇವೆ. ಇತ್ತೀಚೆಗೆ, ಚೀನಾದ ಪ್ರಧಾನಿ ಜಿನ್ ಪಿಂಗ್ ಅವರು 'ದಂಗಲ್' ಚಿತ್ರವನ್ನು ನೋಡಿದ್ದಾರಂತೆ. ಇತ್ತೀಚೆಗೆ, ಅವರು ನಮ್ಮ ಪ್ರಧಾನಿ ಮೋದಿಯವರನ್ನು ಭೇಟಿಯಾದಾಗ ಈ ವಿಷಯ ತಿಳಿಸಿದ್ದರಂತೆ.

ವಿಶೇಷ ಅರ್ಥವಿರುವ ಟೈಟಲ್

ವಿಶೇಷ ಅರ್ಥವಿರುವ ಟೈಟಲ್

ಚೀನಾ ಭಾಷೆಗೆ ಡಬ್ ಆದ ಮೇಲೆ ದಂಗಲ್ ಚಿತ್ರದ ಹೆಸರು ಶುಯ್ ಜಿಯಾಬೊ ಬಾಬಾ ಎಂದು ಬದಲಾಗಿದೆ. ಅದರರ್ಥ, 'ಬಾ ಅಪ್ಪಾ, ಕುಸ್ತಿಯಾಡೋಣ' ಎಂಬರ್ಥವಿದೆಯಂತೆ ಆ ಟೈಟಲ್ ಗೆ.

English summary
A representative for Aamir Khan, said that the film still is a few crores away from this exalted number and that it's actual collection so far is Rs. 1,864 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X