ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

251,000 ಹಾರ್ಲೆ ಡೇವಿಡ್ಸನ್ ಬೈಕುಗಳಿಗೆ 'ಬ್ರೇಕ್'

By Mahesh
|
Google Oneindia Kannada News

ಶಿಕಾಗೋ, ಫೆಬ್ರವರಿ 08: ವಿಶ್ವದೆಲ್ಲೆಡೆ ಇರುವ ಸರಿ ಸುಮಾರು 2,51,000 ಕ್ಕೂ ಅಧಿಕ ಮೋಟರ್ ಸೈಕಲ್ ಗಳನ್ನು ಹಿಂಪಡೆಯುತ್ತಿರುವುದಾಗಿ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಹಾರ್ಲೆ ಡೇವಿಡ್ಸನ್ ಘೋಷಿಸಿದೆ. ಬೈಕ್ ಸವಾರರ ಪ್ರತಿಷ್ಟೆಯ ಸಂಕೇತವಾದ ಈ ಬೈಕ್ ಗಳಿಗೆ ಬ್ರೇಕ್ ಸಮಸ್ಯೆ ಎದುರಾಗಿದೆ.

ಬೆಂಗಳೂರಿನಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚುಬೆಂಗಳೂರಿನಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚು

ಹಾರ್ಲೆ ಡೇವಿಡ್ಸನ್ ಬೈಕ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಹೀಗಾಗಿ ಬೈಕ್ ಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

Harley-Davidson recalls 251,000 motorcycles worldwide

ಅಮೆರಿಕಾದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಪ್ಟಿ ವಿಭಾಗವು ಬೈಕಿನ ಸುರಕ್ಷತೆ ಬಗ್ಗೆ ಪರಿಶೀಲಿಸಿ, ಹಾರ್ಲೆ ಡೇವಿಡ್ ಸನ್ ಬೈಕ್ ನ ಬ್ರೇಕ್ ನಲ್ಲಿ ಸಮಸ್ಯೆ ತಲೆದೋರಿದೆ, anti ಲಾಕ್ ಬ್ರೇಕ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎ ಎಂದು ವರದಿ ನೀಡಿದೆ. ದೋಷ ಕಂಡು ಬಂದ ಹಿನ್ನಲೆಯಲ್ಲಿ ಕಂಪನಿಗೆ ನೋಟೀಸ್ ನೀಡಲಾಗಿತ್ತು.

ಎನ್ ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿಎನ್ ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿ

2008 ರಿಂದ 2011 ರ ನಡುವಿನ ಹಾರ್ಲೆ ಡೇವಿಡ್ ಸನ್ ನ ಸುಮಾರು 30 ಮಾಡೆಲ್ ಗಳಲ್ಲಿ ಈ ರೀತಿ ದೋಷ ಕಂಡು ಬಂದಿದೆ. ಸೇವಾ ಕೇಂದ್ರದ ಮೂಲಕ ಸಮಸ್ಯೆ ಸರಿಪಡಿಸಿಕೊಡುತ್ತೇವೆ ಎಂದು ವಿಸ್ಕೊಸಿನ್ ನ ಮಿಲ್ವಾಕೆಯಲ್ಲಿರುವ ಹಾರ್ಲೆ ಡೇವಿಡ್ಸನ್ ಕಚೇರಿ ಪ್ರತಿಕ್ರಿಯಿಸಿದೆ.

ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ

ಆದರೆ, 175,000 ಬೈಕ್ ಗಳು ಮಾರಾಟವಾಗಿವೆ. ಎರಡು ವರ್ಷಕ್ಕೊಮ್ಮೆ ಬ್ರೇಕ್ ಆಯಿಲ್ ಬದಲಾಯಿಸಲು ಬೈಕ್ ಮಾಲೀಕರು ಮರೆಯುತ್ತಾರೆ ಇದು ಕೂಡಾ ಸಮಸ್ಯೆ ಉಲ್ಬಣಿಸಲು ಕಾರಣ ಎನ್ನಲಾಗಿದೆ.

English summary
American motorcycle giant Harley-Davidson has voluntarily recalled more than 251,000 motorcycles worldwide over a brake failure issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X