• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Happiest Minds IPO: ಷೇರು ಹಂಚಿಕೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

|

ಹ್ಯಾಪಿಯೆಸ್ಟ್ ಮೈಂಡ್ಸ್ ಐಪಿಒ ಹಂಚಿಕೆಯನ್ನು ಇಂದು ಅಂತಿಮಗೊಳಿಸಲಾಗಿದೆ. ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹ್ಯಾಪಿಯೆಸ್ಟ್ ಮೈಂಡ್ಸ್ ಐಪಿಒ ರಿಜಿಸ್ಟ್ರಾರ್ ಆಗಿದೆ. ಹೂಡಿಕೆದಾರರು ಕೆಫಿನ್ ಟೆಕ್ನಾಲಜೀಸ್‌ನ ವೆಬ್‌ಸೈಟ್‌ನಲ್ಲಿ ಷೇರು ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಬಹುದು.

ಐಪಿಒ ಹಂಚಿಕೆ ಮತ್ತು ಮರುಪಾವತಿ ಪ್ರಕ್ರಿಯೆಗೆ ರಿಜಿಸ್ಟ್ರಾರ್ ಜವಾಬ್ದಾರನಾಗಿರುತ್ತಾನೆ. ವಿಶ್ಲೇಷಕರ ಪ್ರಕಾರ ಸೆಪ್ಟೆಂಬರ್ 17, 2020 ರಂದು ಹ್ಯಾಪಿಯೆಸ್ಟ್ ಮೈಂಡ್ಸ್ ಷೇರುಗಳನ್ನು ಪಟ್ಟಿ ಮಾಡುವ ಸಾಧ್ಯತೆಯಿದೆ.

9 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಟಿಸಿಎಸ್: ಈ ಮೈಲಿಗಲ್ಲು ತಲುಪಿದ ದೇಶದ ಎರಡನೇ ಸಂಸ್ಥೆ

ಅರ್ಜಿದಾರರು ತಮ್ಮ ಹಂಚಿಕೆಯ ಸ್ಥಿತಿಯನ್ನು ಪ್ಯಾನ್, ಅರ್ಜಿ ಸಂಖ್ಯೆ ಇತ್ಯಾದಿಗಳ ಮೂಲಕ ಪರಿಶೀಲಿಸಬಹುದು.

ಕಳೆದ ವಾರ ಮುಕ್ತಾಯಗೊಂಡ ಐಟಿ ಸೇವಾ ಸಂಸ್ಥೆ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್‌ನ ಐಪಿಒ ಹೂಡಿಕೆದಾರರಿಂದ ಭಾರಿ ಪ್ರತಿಕ್ರಿಯೆ ಪಡೆದಿದೆ. ಇದಲ್ಲೆ 150 ಕ್ಕೂ ಹೆಚ್ಚು ಬಾರಿ ಚಂದಾದಾರರಾಗಿದ್ದರು. 702 ಕೋಟಿ ರೂಪಾಯಿಯ ಐಪಿಒ 2.33 ಕೋಟಿ ಷೇರುಗಳ ವಿತರಣಾ ಗಾತ್ರಕ್ಕೆ ವಿರುದ್ಧವಾಗಿ 351 ಕೋಟಿ ಷೇರುಗಳಿಗೆ ಬಿಡ್ ಪಡೆದಿದೆ.

ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ವಿಭಾಗವು 70.94 ಬಾರಿ ಚಂದಾದಾರರಾಗಿದ್ದರೆ, ಅರ್ಹ ಸಾಂಸ್ಥಿಕ ಖರೀದಿದಾರರು (ಕ್ಯೂಐಬಿ) ಭಾಗವನ್ನು 77.43 ಬಾರಿ ಮತ್ತು ಸಾಂಸ್ಥಿಕೇತರ ಹೂಡಿಕೆದಾರರು 351.46 ಬಾರಿ ಚಂದಾದಾರರಾಗಿದ್ದಾರೆ. ಪ್ರಸ್ತಾಪದ ಬೆಲೆ ಬ್ಯಾಂಡ್‌ಗೆ ಪ್ರತಿ ಇಕ್ವಿಟಿ ಷೇರಿಗೆ 165-166 ರೂಪಾಯಿ ನಿಗದಿಪಡಿಸಲಾಗಿದೆ.

English summary
The share allotment in Happiest Minds IPO is likely to be finalised today. KFin Technologies Private Limited is the registrar of the Happiest Minds IPO. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X