ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದ ಎಚ್ಎಎಲ್

|
Google Oneindia Kannada News

ಬೆಂಗಳೂರು, ಮೇ 28: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 19,705 ಕೋಟಿ ರೂಪಾಯಿಯಷ್ಟು ಅತ್ಯಧಿಕ ವಹಿವಾಟು ನಡೆಸಿದೆ.

2018-19ನೇ ಸಾಲಿನ ಹಣಕಾಸು ವರ್ಷದಲ್ಲಿ ಅದು ಶೇ 7.8ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಎಚ್‌ಎಎಲ್ 18,284 ಕೋಟಿ ರೂ. ವಹಿವಾಟು ನಡೆಸಿತ್ತು ಎಂದು ಕಂಪೆನಿ ಸೋಮವಾರ ತಿಳಿಸಿದೆ.

ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್‌ಎಎಲ್ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್‌ಎಎಲ್

ಎಚ್‌ಎಎಲ್‌ನ ತೆರಿಗೆ ಬಳಿಕದ ಲಾಭ (ಪಿಎಟಿ) ಶೇ 14.8ರಷ್ಟು ಹೆಚ್ಚಳವಾಗಿದೆ. 2018-19ನೇ ಸಾಲಿನಲ್ಲಿ ಅದು 2,282 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದರ ಮೊತ್ತ 1,987 ಕೋಟಿ ರೂ. ಇತ್ತು. 2018-19ನೇ ಸಾಲಿನ ಮಧ್ಯಂತರ ಡಿವಿಡೆಂಡ್‌ 662 ಕೋಟಿ ರೂಪಾಯಿಯನ್ನು ಆಗಲೇ ಪಾವತಿ ಮಾಡಲಾಗಿದೆ ಎಂದು ಅದು ಹೇಳಿದೆ.

HAL records turnover of Rs 19705 crore 7.8 pc growth

ಹಗುರ ಯುದ್ಧ ವಿಮಾನಗಳು ಮತ್ತು ಹಗುರ ಯುದ್ಧ ಹೆಲಿಕಾಪ್ಟರ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಆರ್ಡರ್‌ಗಳು ಬರುವ ನಿರೀಕ್ಷೆಯಿದೆ ಎಂದು ಹೇಳಿಕೆ ವಿಶ್ವಾಸ ವ್ಯಕ್ತಪಡಿಸಿದೆ.

ಸರ್ಕಾರಕ್ಕೆ 9,406 ಕೋಟಿ ರೂ ಡಿವಿಡೆಂಡ್ ನೀಡಿದ್ದ ಎಚ್‌ಎಎಲ್ಸರ್ಕಾರಕ್ಕೆ 9,406 ಕೋಟಿ ರೂ ಡಿವಿಡೆಂಡ್ ನೀಡಿದ್ದ ಎಚ್‌ಎಎಲ್

ದೇಶದ ಪ್ರಮುಖ ವೈಮಾನಿಕ ಉಪಕರಣ ತಯಾರಕ ಸಂಸ್ಥೆಯಾದ ಎಚ್‌ಎಎಲ್, ಈ ವರ್ಷದ ಆರಂಭದಲ್ಲಿ ಉದ್ಯೋಗಿಗಳಿಗೆ ವೇತನ ನೀಡಲು ಹಣವಿಲ್ಲದೆ 1 ಸಾವಿರ ಕೋಟಿ ರೂ. ಸಾಲ ಪಡೆದಿತ್ತು. ಎಚ್‌ಎಎಲ್ ಆರಂಭವಾದ ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಈ ಪರಿಸ್ಥಿತಿ ಎದುರಾಗಿತ್ತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು.

English summary
Hindustan Aeronautics Limited (HAL) has registered an all time high turnover of Rs 19,505 crore in the fiscal year of 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X