ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ 9,406 ಕೋಟಿ ರೂ ಡಿವಿಡೆಂಡ್ ನೀಡಿದ್ದ ಎಚ್‌ಎಎಲ್

|
Google Oneindia Kannada News

ಬೆಂಗಳೂರು, ಜನವರಿ 8: ಮರುಖರೀದಿ ಮತ್ತು ಡಿವಿಡೆಂಡ್ ‌ಮೇಲಿನ ತೆರಿಗೆ ಹಾಗೂ ಷೇರುಗಳ ಮರುಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ಕಳೆದ ಮೂರು ವರ್ಷಗಳಲ್ಲಿ ಒಟ್ಟು 9,406 ಕೋಟಿ ರೂ ಮೊತ್ತವನ್ನು ಡಿವಿಡೆಂಡ್ ರೂಪದಲ್ಲಿ ಭಾರತ ಸರ್ಕಾರಕ್ಕೆ ಪಾವತಿಸಿತ್ತು ಎನ್ನುವುದು ಕಂಪೆನಿಯ ಹಣಕಾಸು ಲೆಕ್ಕಾಚಾರಗಳು ತಿಳಿಸಿವೆ.

2013-14ರ ಅವಧಿಯಿಂದ ಒಳಗೊಂಡಂತೆ ಐದು ವರ್ಷದ ಅವಧಿಯಲ್ಲಿ ಈ ಮೊತ್ತ 11,024 ಕೋಟಿ ರೂ. ತಲುಪಿದೆ. ಎಚ್‌ಎಎಲ್ ತನ್ನ ನೌಕರರಿಗೆ ವೇತನ ನೀಡಲು ಸಾಲ ಮಾಡಬೇಕಾದ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವುದಕ್ಕೆ ಇದೊಂದು ನಿದರ್ಶನವಾಗಿದೆ.

ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್‌ಎಎಲ್ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್‌ಎಎಲ್

ಇದಲ್ಲದೆ, ಕಂಪೆನಿಯು ತಾನು ಪೂರ್ಣಗೊಳಿಸಿದ ಕಾರ್ಯಗಳಿಗೆ ಬರಬೇಕಾದ 15 ಸಾವಿರ ಕೋಟಿ ಬಾಕಿಯನ್ನು ಇನ್ನೂ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಇದರಲ್ಲಿ ಭಾರತೀಯ ವಾಯು ಸೇನೆಯ ಪಾಲು ಹಿರಿದಾಗಿದೆ.

HAL paid Rs 9406 crore in 3 years to government of india as dividend to buyback its shares

ಈ ಕಾರಣಗಳಿಂದಾಗಿ ಕಂಪೆನಿ ತನ್ನ ಕಾರ್ಯಾಚರಣೆಯ ವೆಚ್ಚವನ್ನು ನಿಭಾಯಿಸಲು ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಂದ ನಿರಂತರವಾಗಿ ಸಾಲ ಪಡೆಯುವಂತಾಗಿತ್ತು.

ಎಚ್‌ಎಎಲ್‌ನ ಹಿರಿಯ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಮುಂದಿನ ವಾರ ನವದೆಹಲಿಯಲ್ಲಿ ಸಭೆ ಸೇರಿ ಈ ಬಗ್ಗೆ ಚರ್ಚಿಸಲಿದ್ದಾರೆ.

'ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ' 'ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ'

ಈ ಸಭೆ ಮೂಲಕ ಕಂಪೆನಿಯ ಹಣಕಾಸು ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯಲಿದೆ. ಕೆಲಸಕ್ಕೂ ಮುನ್ನವೇ ಮುಂಗಡ ಹಣ ಪಡೆದುಕೊಳ್ಳುವುದು ತಕ್ಕಮಟ್ಟಿಗೆ ಒತ್ತಡ ಕಡಿಮೆ ಮಾಡಬಹುದು ಎಂದು ಸರ್ಕಾರದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?''ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

ಎಚ್‌ಎಎಲ್‌ನ ವಾರ್ಷಿಕ ವರದಿ ಪ್ರಕಾರ, ಕಂಪೆನಿಯು ತನ್ನ ಕಾರ್ಯಚಟುವಟಿಕೆಗಳಿಗೆ ಹಣ ಹೊಂದಿಸಲು ಕಳೆದ ಹಣಕಾಸು ವರ್ಷದಲ್ಲಿ 9 ಬಾರಿ ಸಾಲ ಪಡೆದುಕೊಂಡಿದೆ. ಅದರಲ್ಲಿ 2018ರ ಮಾರ್ಚ್‌ ಒಂದರಲ್ಲಿಯೇ ಏಳು ಬಾರಿ ಸಾಲ ಪಡೆದುಕೊಂಡಿದೆ. ಹಿಂದಿನ ಹಣಕಾಸು ವರ್ಷದ ಒಂಬತ್ತು ತಿಂಗಳಿನಲ್ಲಿ 4,446.87 ಕೋಟಿ ರೂ. ಸಾಲ ತೆಗೆದುಕೊಂಡಿದೆ.

ಐಎಎಫ್‌ ತನ್ನ ಬಾಕಿ ಹಣ ಪಾವತಿಸದೆ ಇದ್ದರೆ ಅದರ ಮೊತ್ತ ಮಾರ್ಚ್ 31ರ ವೇಳೆಗೆ 20 ಸಾವಿರ ಕೋಟಿ ರೂ. ಗೆ ತಲುಪಲಿದೆ ಎಂದು ವರದಿ ಹೇಳಿದೆ.

English summary
HAL has paid Rs 9406 Crore in three years to the government of India as dividend to buyback its shares and as tax on buyback.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X