ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ -1 ಬಿ ವೀಸಾ ನಿಷೇಧ: ಟಿಸಿಎಸ್ ಸೇರಿದಂತೆ ಭಾರತದ ಐಟಿ ಕಂಪನಿಗಳ ಷೇರುಗಳು ತತ್ತರ

|
Google Oneindia Kannada News

ಮುಂಬೈ, ಜೂನ್ 23: ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಡಿಸೆಂಬರ್ ಅಂತ್ಯದವರೆಗೂ ಎಚ್ -1 ಬಿ ವೀಸಾ ರದ್ದುಗೊಳಿಸಿರುವ ಕುರಿತು ಘೋಷಿಸುತ್ತಿದ್ದಂತೆ ಇಂದು(ಮಂಗಳವಾರ) ಭಾರತದ ಐಟಿ ಕಂಪನಿಗಳು ಒಮ್ಮೆಲೆ ಶೇಕ್ ಆಗಿದ್ದವು. ಇದಕ್ಕೆ ಕಾರಣ ಹೊಸ ಎಚ್ -1 ಬಿ ವೀಸಾ ಇಲ್ಲದೆ ಅಮೆರಿಕಾದಲ್ಲಿರುವ ಭಾರತೀಯ ಕಂಪನಿಗಳು ಸ್ವದೇಶದಿಂದ ಆಗಲಿ, ಬೇರೆ ಯಾವುದೇ ದೇಶದಿಂದ ಹೊಸ ಉದ್ಯೋಗಿಗಳನ್ನ ಪಡೆಯಲು ಸಾಧ್ಯವಿರುವುದಿಲ್ಲ.

ಟ್ರಂಪ್ ಈ ನಿರ್ಧಾರಕ್ಕೆ ಮುಂಬೈ ಷೇರುಪೇಟೆಯಲ್ಲಿ ಭಾರತದ ಅಗ್ರಮಾನ್ಯ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್), ಇನ್ಫೊಸಿಸ್, ಹೆಚ್‌ಸಿಎಲ್ ಟೆಕ್ ಆರಂಭಿಕ ವಹಿವಾಟಿನಲ್ಲಿ ಭಾರೀ ಕುಸಿತ ಸಾಧಿಸಿದವು. ಕೊನೆಯಲ್ಲಿ ಕೊಂಚ ಚೇತರಿಕೆ ಸಾಧಿಸಿದ ಐಟಿ ಷೇರುಗಳು ದಿನದ ವಹಿವಾಟಿನ ಅಂತ್ಯಕ್ಕೆ ಸಕಾರಾತ್ಮಕ ವಹಿವಾಟಿನೊಂದಿಗೆ ಅಂತ್ಯಗೊಂಡವು.

ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 519 ಪಾಯಿಂಟ್ಸ್‌ ಏರಿಕೆಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 519 ಪಾಯಿಂಟ್ಸ್‌ ಏರಿಕೆ

ಅಮೆರಿಕಾದ ಎಚ್ -1 ಬಿ ವೀಸಾ ರದ್ದತಿ ಕ್ರಮವು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಯುಎಸ್ ನಾಗರಿಕರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಟ್ರಂಪ್ ಅವರ ನಿರ್ಧಾರವು ಅಮೆರಿಕಾದಲ್ಲಿ 5,25,000 ಉದ್ಯೋಗಗಳನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.

H-1B Visa Ban Impact: Indias IT Companies Adversely Affected, Stocks Down

ಆದಾಗ್ಯೂ, ಅಕ್ಟೋಬರ್ 1 ರಿಂದ ಪ್ರಾರಂಭವಾಗುವ 2021 ರ ಆರ್ಥಿಕ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಭಾರತೀಯ ಐಟಿ ವೃತ್ತಿಪರರು ಮತ್ತು ಹಲವಾರು ಭಾರತೀಯ ಮತ್ತು ಯುಎಸ್ ಸಂಸ್ಥೆಗಳು ಎಚ್ -1 ಬಿ ವೀಸಾವನ್ನು ನೀಡಿದ್ದು ವೀಸಾ ಅಮಾನತು ನಿರ್ಧಾರದಿಂದ ಪ್ರಭಾವಿತರಾಗುವ ಸಾಧ್ಯತೆಯಿದೆ.

ಎಚ್ -1 ಬಿ ವೀಸಾ ಎಂದರೇನು? ಏಕೆ ಈ ನಿಷೇಧ?

ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ಅಮೆರಿಕಾ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ.

English summary
After H-1B Visa Ban India's IT companies shares fall Most of sensex
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X