ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಲೋಕಸಭೆ ಚುನಾವಣೆಗೂ ಮುನ್ನ ಜನತೆಗೆ ಮೋದಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಶುಭ ಸುದ್ದಿ ಸಿಕ್ಕಿದೆ. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅನೇಕ ವಸ್ತುಗಳ ದರದಲ್ಲಿ ಇಳಿಕೆಯಾಗಿದೆ. ಆದರೆ, ಜನ ಸಾಮಾನ್ಯರ ಬಹುಕಾಲದ 5 ಬೇಡಿಕೆಗಳು ಇನ್ನು ಹಾಗೆ ಉಳಿದಿದೆ.

ದೆಹಲಿಯಲ್ಲಿ ಶನಿವಾರ(ಡಿಸೆಂಬರ್ 22) ನಡೆದ ಜಿ.ಎಸ್.ಟಿ. 31ನೇ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

ಶೇಕಡಾ 28 ರಷ್ಟಿದ್ದ ಜಿ.ಎಸ್.ಟಿ. ದರವನ್ನು ಶೇಕಡಾ 18ಕ್ಕೆ ಇಳಿಕೆ ಮಾಡಲಾಗಿದೆ. ಶೇಕಡಾ 18 ರಷ್ಟಿದ್ದ ಕೆಲ ವಸ್ತುಗಳ ಜಿ.ಎಸ್.ಟಿ. ದರವನ್ನು ಶೇಕಡಾ 12 ಮತ್ತು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ.

ಏಪ್ರಿಲ್-ಮೇ 2019ರಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿಯಿಂದ ತೆರಿಗೆ ಇಳಿಕೆಯಲ್ಲಿ ಭಾರಿ ಬದಲಾವಣೆ ಸಾಧ್ಯತೆಯಿದೆ.ಇಲ್ಲಿ ತನಕ(ನವೆಂಬರ್ ಅಂತ್ಯಕ್ಕೆ) ಸರ್ಕಾರಕ್ಕೆ 7.76 ಲಕ್ಷ ಕೋಟಿ ಆದಾಯವನ್ನು ಜಿಎಸ್ಟಿ ತಂದು ಕೊಟ್ಟಿದೆ. ಯಾವ ಕ್ಷೇತ್ರಗಳಲ್ಲಿ ಜಿಎಸ್ಟಿ ಬದಲಾವಣೆಯನ್ನು ಜನ ಸಾಮಾನ್ಯರು ಬಯಸಿದ್ದಾರೆ? ಎಂದು ತಿಳಿಯಲು ಮುಂದೆ ಓದಿ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್

ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇಲ್ಲ ಕೊಡುಗೆ

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇಲ್ಲ ಕೊಡುಗೆ

ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ.

ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ. ಒಟ್ಟಾರೆಯಾಗಿ, 1 ಕೋಟಿ ರುಗೂ ಕಡಿಮೆ ದರ ಮನೆ(2,000 ಚದರ ಅಡಿ)ಗೆ ಶೇ 3.75ರಷ್ಟು ತೆರಿಗೆ ಎದುರಿಸಬೇಕಾಯಿತು. ಇದಲ್ಲದೆ, ಆಯಾ ರಾಜ್ಯಗಳ ಸೆಸ್ ಸೇರಿ ರಿಯಲ್ ಎಸ್ಟೇಟ್ ಉದ್ಯಮ, ಗ್ರಾಹಕ ಇಬ್ಬರಿಗೂ ತೆರಿಗೆ ಹೊರೆಯಾಗಲಿದೆ.

ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್ ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು ಎಂಬ ಬೇಡಿಕೆ ಇದ್ದರೂ, ಕಷ್ಟಸಾಧ್ಯ. ಎಲ್ಲಾ ರಾಜ್ಯಗಳ ಆದಾಯ ಸೇರಿ 31,000 ಕೋಟಿ ರು ವಾರ್ಷಿಕ ಆದಾಯದ ಈ ಕ್ಷೇತ್ರದಲ್ಲಿ ಜಿಎಸ್ಟಿ ಜಾರಿಯಾದರೆ ವಿದ್ಯುತ್ ಆಧಾರಿತ ಉತ್ಪನ್ನಗಳ ಮೇಲಿನ ತೆರಿಗೆ ಕೂಡಾ ಪರಿಷ್ಕರಣೆಗೊಳ್ಳಬೇಕಾಗುತ್ತದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಆದಾಯ ಖೋತಾ ಹಾಗೂ ನಷ್ಟ ಎದುರಾಗಲಿದೆ. ಒಂದು ವೇಳೆ ಶೇ 5ರಷ್ಟು ತೆರಿಗೆ ಜಾರಿಗೆ ಬಂದರೆ, ರಾಜ್ಯ ಸರ್ಕಾರ ತನ್ನ ನಷ್ಟ ಸರಿದೂಗಿಸಲು ಜಿಎಸ್ಟಿಯೇತರ ಸೆಸ್ ಹಾಕಬಹುದು. ಒಟ್ಟಾರೆ, ಗ್ರಾಹಕನ ಮೇಲೆ ಹೊರೆ ತಪ್ಪಿದ್ದಲ್ಲ

ಶೇ 28ರ ಸ್ಲ್ಯಾಬ್ ತೆಗೆದು ಹಾಕುವ ಬೇಡಿಕೆ

ಶೇ 28ರ ಸ್ಲ್ಯಾಬ್ ತೆಗೆದು ಹಾಕುವ ಬೇಡಿಕೆ

* ಶೇ28ರ ಸ್ಲ್ಯಾಬ್ ತೆಗೆದು ಹಾಕುವಂತೆ ಬೇಡಿಕೆ ಇದ್ದರೂ ಸರ್ಕಾರಕ್ಕೆ ಸಾವಿರಾರು ಕೋಟಿ ರು ನಷ್ಟವಾಗಲಿದೆ. ಹೀಗಾಗಿ, ಈ ಸ್ಲ್ಯಾಬ್ ನಲ್ಲಿ ಇನ್ನಷ್ಟು ಬದಲಾವಣೆ ನಿರೀಕ್ಷೆಯಿತ್ತು.
* ಚ್ಯೂಯಿಂಗ್ ಗಮ್, ಸುಗಂಧ ದ್ರವ್ಯಗಳು, ಶ್ಯಾಂಪೂ, ಸೌಂದರ್ಯ ವರ್ಧಕಗಳು, ಪಟಾಕಿ ಮತ್ತು ಬೈಕ್ ಗಳು ಶೇಕಡಾ 28 ತೆರಿಗೆಗೆ ಒಳಪಟ್ಟಿವೆ.
* ತೆರಿಗೆ ದರದಲ್ಲಿ ಭಾರಿ ಕಡಿತ, ಸಬ್ಸಿಡಿ ನಿರೀಕ್ಷೆ ಇದೆ
* ಸಂಪೂರ್ಣ ಡಿಜಿಟಲ್ ವಹಿವಾಟು ಕಡ್ಡಾಯ, ಈ ಮೂಲಕ ತೆರಿಗೆ ಕಳ್ಳತನಕ್ಕೆ ಬ್ರೇಕ್ ಹಾಕಬೇಕು ಎಂಬ ಬೇಡಿಕೆ ಇದ್ದೇ ಇದೆ.

ಮೂರು ಸ್ಲ್ಯಾಬ್ ಬೇಕು ಎನ್ನುವುದು ಎಲ್ಲರ ಬೇಡಿಕೆ

ಮೂರು ಸ್ಲ್ಯಾಬ್ ಬೇಕು ಎನ್ನುವುದು ಎಲ್ಲರ ಬೇಡಿಕೆ

ಶೇ. 5, 12, 18 ಮತ್ತು ಶೇ. 28ರ ಸ್ತರದಲ್ಲಿ 1300ಕ್ಕೂ ಹೆಚ್ಚು ವಸ್ತುಗಳು ಹಾಗೂ 500ಕ್ಕೂ ಅಧಿಕ ಸೇವೆಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಚಿನ್ನಕ್ಕೆ ಶೇ. 3 ಮತ್ತು ಬೆಲೆಬಾಳುವ ಹರಳುಗಳಿಗೆ ಶೇ. 0.25 ತೆರಿಗೆ ವಿಧಿಸಲಾಗುತ್ತಿದೆ. ಈಗ ಶೇ. 12 ಮತ್ತು 18ನ್ನು ವಿಲೀನಗೊಳಿಸಿ ಶೇ. 15ರ ಹೊಸ ಸ್ತರ ಪರಿಚಯಿಸುವ ಚಿಂತನೆ ಇದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ನವೆಂಬರ್ 2018ರಿಂದ ಕೇವಲ ಮೂರು ಸ್ತರಗಳಲ್ಲಿ ಮಾತ್ರ ಜಿಎಸ್ಟಿ ಇರಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿದ್ದವು ಆದರೆ, ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ

English summary
The GST Council Saturday reduced tax rates on 23 goods and services, including movie tickets, TV and monitor screens and power banks, and exempted frozen and preserved vegetables from the levy. But, 5 changes that common man demanded is yet to be fulfilled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X