ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ನಷ್ಟ ಪರಿಹಾರ, ಕೇಂದ್ರ ಸರ್ಕಾರದ ವಿರುದ್ಧ ನಿಂತ ಕೇರಳ

|
Google Oneindia Kannada News

ನವದೆಹಲಿ, ಸೆ.1: ಸರಕು ಮತ್ತು ಸಾಗಣೆ ತೆರಿಗೆ(ಜಿಎಸ್ಟಿ) ಕೊರತೆ ಎದುರಾಗಿದ್ದು, ಇದಕ್ಕೆ ಪರಿಹಾರ ರೂಪದಲ್ಲಿ ಎರಡು ಪ್ರಸ್ತಾಪವನ್ನು ರಾಜ್ಯಗಳ ಮುಂದೆ ಕೇಂದ್ರ ಸರ್ಕಾರ ಇಟ್ಟಿತ್ತು. ಆದರೆ, ಕೇರಳ ಸೇರಿದಂತೆ ಬಿಜೆಪಿಯೇತರ ರಾಜ್ಯಗಳು ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿವೆ. ಜಿಎಸ್‌ಟಿ ನಷ್ಟ ಪರಿಹಾರಕ್ಕೆ ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರವು ರಾಜ್ಯಗಳಿಗೆ ಮಹಾ ದ್ರೋಹ ಎಸಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

Recommended Video

Corona ಭೀತಿ ನಡುವೆಯೇ JEE ಪರೀಕ್ಷೆ ಶುರು | Oneindia Kannada

ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ 2.35 ಲಕ್ಷ ಕೋಟಿ ರೂ.ಗಳ ಅಂದಾಜು ಜಿಎಸ್‌ಟಿ ಪರಿಹಾರದ ಕೊರತೆಯನ್ನು ಪೂರೈಸಲು ರಾಜ್ಯಗಳು ಸಾಲ ಪಡೆಯಲು ಕೇಂದ್ರವು ಎರಡು ಆಯ್ಕೆಗಳನ್ನು ನೀಡಿತ್ತು. ಈ ಪೈಕಿ 97 ಸಾವಿರ ಕೋಟಿ ರು ಅಥವಾ 1.38 ಲಖ್ಶಹ್ ಕೋಟಿ ರುಗಳ ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಮೋದಿ ಸರ್ಕಾರದ ಪ್ರಸ್ತಾಪವನ್ನು ಸಂಪೂರ್ಣವಾಗಿ ತಳ್ಳಿ ಹಾಕುತ್ತಿರುವುದಾಗಿ ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

41ನೇ ಜಿಎಸ್‌ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ41ನೇ ಜಿಎಸ್‌ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ

ರಾಜ್ಯಗಳು 97 ಸಾವಿರ ಕೋಟಿ ರು ಸಾಲ ಪಡೆಯಬಹುದು ಇಲ್ಲವೇ ಪೂರ್ಣ 2.35 ಲಕ್ಷ ಕೋಟಿ ರು ಸಾಲ ಹೊಂದಬಹುದು ಎಂದು ಎರಡು ಆಫರ್ ನೀಡಿದ್ದ ಕೇಂದ್ರದ ಕ್ರಮವನ್ನು ಕೇರಳ ಪ್ರಶ್ನಿಸಿದಿದೆ. ಆತ್ಮ ನಿರ್ಭರವಾಗಿರುವ ಸ್ವಾವಲಂಬಿ ರಾಜ್ಯಗಳು ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಲು ಸಾಧ್ಯವೇ ಇಲ್ಲ. ಜಿಎಸ್ಟಿ ಪರಿಹಾರ ನಮ್ಮ ಸಂವಿಧಾನ ಹಕ್ಕು ಎಂದು ಥಾಮಸ್ ಹೇಳಿದ್ದಾರೆ.

Gst Shortfall: Kerala Rejects Centres Proposal Of Borrowing

ಪಂಜಾಬ್, ಕೇರಳ, ದೆಹಲಿ, ತೆಲಂಗಾಣ, ಛತ್ತೀಸ್ ಗಢ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರದ ಈ ಸಾಲ ಪ್ರಸ್ತಾಪವನ್ನು ಕಟುವಾಗಿ ಟೀಕಿಸಿವೆ. ರಾಜಸ್ಥಾನ, ಪುದುಚೇರಿ ಕೂಡಾ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿವೆ.

ಜಿಎಸ್‌ಟಿ ಪರಿಹಾರ: ಕೇಂದ್ರವು ರಾಜ್ಯಗಳಿಗೆ ದ್ರೋಹವೆಸಗಿದೆ ಎಂದ ಮನೀಶ್ ಸಿಸೋಡಿಯಾಜಿಎಸ್‌ಟಿ ಪರಿಹಾರ: ಕೇಂದ್ರವು ರಾಜ್ಯಗಳಿಗೆ ದ್ರೋಹವೆಸಗಿದೆ ಎಂದ ಮನೀಶ್ ಸಿಸೋಡಿಯಾ

2019-20ರಲ್ಲಿ 1.65 ಲಕ್ಷ ಕೋಟಿ ಜಿಎಸ್ಟಿ ಪರಿಹಾರವನ್ನು ಕೇಂದ್ರ ನೀಡಿದೆ. 2018-19ರ ಅವಧಿಯಲ್ಲಿ 69,275 ಕೋಟಿ ರು, 2017-18ರಲ್ಲಿ 41,146 ಕೋಟಿ ರು ಸಂದಾಯವಾಗಿದೆ. ಆದರೆ, ಹಲವು ರಾಜ್ಯಗಳು ಹೆಚ್ಚು ತೆರಿಗೆ ಪಾವತಿಸಿದ್ದರೂ ಜಿಎಸ್ಟಿ ಪರಿಹಾರ ಮೊತ್ತ ಕಡಿಮೆ ಪಡೆದುಕೊಳ್ಳುತ್ತಿವೆ.

ಜೊತೆಗೆ ಸೆಸ್ ಸಂಗ್ರಹ 2019-20ರ ಅವಧಿಯಲ್ಲಿ 95,444 ಕೋಟಿ ರು ಆಗಿದೆ. ಮಿಕ್ಕ 69,556 ಕೋಟಿ ರುಗಳನ್ನು 2017-18 ಹಾಗೂ 2018-19ರ ಅವಧಿಯಲ್ಲಿ ಪಡೆದ ಹೆಚ್ಚುವರಿ ಸೆಸ್ ನಿಂದ ಸರಿದೂಗಿಸಲಾಗಿದೆ.

English summary
GST Shortfall: Kerala and several state mostly non-BJP stated have opposed Centre's proposal of borrowing to make up GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X