ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ನಿಯಮ ಬದಲಾವಣೆ: ಓಲಾ, ಊಬರ್‌ ಪ್ರಯಾಣ ದುಬಾರಿ!

|
Google Oneindia Kannada News

ನವದೆಹಲಿ, ಜನವರಿ 02: ಈ ಹೊಸ ವರ್ಷ ಆರಂಭವಾದಂತೆ ಹೊಸ ವರ್ಷವೆಂಬ ಸಂತಸದ ನಡುವೆ ಹಲವಾರು ಹೊರೆಯು ಕೂಡಾ ಗ್ರಾಹಕರ ತಲೆಯ ಮೇಲೆ ಸರ್ಕಾರವು ಹೇರಿದೆ. ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ಈಗಾಗಲೇ ಆರ್ಥಿಕ ಹೊಡೆತವನ್ನು ಕಂಡಿರುವ ಜನರಿಗೆ ಈಗ ಜಿಎಸ್‌ಟಿ ಬದಲಾವಣೆಯು ಹೆಚ್ಚಿನ ಸಂಕಷ್ಟ ತರಲಿದೆ. ಪ್ರಮುಖ ಕ್ಯಾಬ್‌ ವಾಹನ ಸೌಲಭ್ಯ ಒದಗಿಸುವ ಸಂಸ್ಥೆಗಳಾ ಓಲಾ ಮತ್ತು ಊಬರ್‌ನಲ್ಲಿ ದ್ವಿಚಕ್ರ ಅಥವಾ ಕಾರಿನಲ್ಲಿ ಪ್ರಯಾಣವು ಈಗ ದುಬಾರಿ ಆಗಿದೆ. ಹೌದು ಜನವರಿ 1 ರಿಂದ ಜಾರಿಗೆ ಬರುವಂತೆ ಜಿಎಸ್‌ಟಿ ನಿಯಮ ಬದಲಾವಣೆ ಆಗಿದೆ. ಈ ನಿಯಮದ ಪ್ರಕಾರ ಓಲಾ ಮತ್ತು ಊಬರ್‌ ದ್ವಿಚಕ್ರ ಅಥವಾ ಕಾರಿನಲ್ಲಿ ಪ್ರಯಾಣಕ್ಕೆ ಶೇಕಡ 5 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ವಿಧಿಸಬೇಕಾಗಿದೆ.

ಸ್ವಿಗ್ಗಿ ಹಾಗೂ ಜೋಮಾಟೋದಂತಹ ಆಹಾರ ಡೆಲವರಿ ಸಂಸ್ಥೆಗಳು ಇಂದಿನಿಂದ ಶೇಕಡಾ 5ರಷ್ಟು ತೆರಿಗೆಯನ್ನು ಗ್ರಾಹಕರಿಂದ ಸಂಗ್ರಹ ಮಾಡಬೇಕಾಗಿದೆ. ಆದರೆ ಇದರಿಂದಾಗಿ ಗ್ರಾಹಕರಿಗೆ ಯಾವುದೇ ಲಾಭವಾಗಲಿ ನಷ್ಟವಾಗಲಿ ಇಲ್ಲ. ಈ ಹಿಂದೆ ರೆಸ್ಟೊರೆಂಟ್‌‌ಗಳು ಈ ಶೇಕಡ 5ರಷ್ಟು ತೆರಿಗೆಯನ್ನು ಗ್ರಾಹಕರಿಂದ ಸಂಗ್ರಹ ಮಾಡುತ್ತಿತ್ತು. ಆದರೆ ಈಗ ಈ ಸ್ವಿಗ್ಗಿ ಹಾಗೂ ಜೋಮಾಟೋದಂತಹ ಆಹಾರ ಡೆಲವರಿ ಸಂಸ್ಥೆಗಳು ಜಿಎಸ್‌ಟಿ ಸಂಗ್ರಹ ಮಾಡಬೇಕಾಗುತ್ತದೆ. ಜಿಎಸ್‌ಟಿಯನ್ನು ಗ್ರಾಹಕರಿಂದ ಸಂಗ್ರಹ ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಹೊಣೆ ಸ್ವಿಗ್ಗಿ ಹಾಗೂ ಜೋಮಾಟೋ ಸಂಸ್ಥೆದ್ದು ಆಗಿದೆ.

ಶೀಘ್ರದಲ್ಲೇ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ ಶೀಘ್ರದಲ್ಲೇ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ

ಇನ್ನು ಈ ನಡುವೆ ಇಂದಿನಿಂದ ಪಾದರಕ್ಷೆಗಳ ಮೇಲೆ ಶೇಕಡ 12 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಹೊಸ ವರ್ಷ 2022 ರಲ್ಲಿ ಜಾರಿಗೆ ಬಂದಿರುವ ಜಿಎಸ್‌ಟಿಯ ಹಲವಾರು ಬದಲಾವಣೆಯ ಕಾರಣದಿಂದಾಗಿ ಈ ವರ್ಷ ಜನರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಈಗಾಗಲೇ ಕೊರೊನಾವೈರಸ್‌ ಸೋಂಕಿನ ಹಿನ್ನೆಲೆ ಹಾಗೂ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಜನರಿಗೆ ಈ ಜಿಎಸ್‌ಟಿ ಏರಿಕೆ ಹೊರೆ ಹೆಚ್ಚಿಸಲಿದೆ.

GST Rule Change: Ola, Uber To Get Costlier From Jan 1, 2022

ಆಧಾರ್‌ ವೆರಿಫೀಕೇಶನ್‌ ಕಡ್ಡಾಯ

ಇನ್ನು ವಂಚನೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ತೆರಿಗೆ ಪಾವತಿದಾರನ GSTR 2B (ಖರೀದಿ ರಿಟರ್ನ್) ನಲ್ಲಿ ಕ್ರೆಡಿಟ್ ಕಾಣಿಸಿಕೊಂಡಾಗ ಮಾತ್ರ ಇನ್‌ಪುಟ್ ತೆರಿಗೆ ಕ್ರೆಡಿಟ್ ಈಗ ಲಭ್ಯವಿರುತ್ತದೆ ಎಂದು ಈ ಹೊಸ ಜಿಎಸ್‌ಟಿ ತಿದ್ದುಪಡಿ ಹೇಳುತ್ತದೆ. ಜಿಎಸ್‌ಟಿ ಪಾವತಿಯಲ್ಲಿ ನಡೆಯುತ್ತಿವೆ ಎನ್ನಲಾದ ವಂಚನೆ ತಡೆಗಟ್ಟಲು ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಕಂಪನಿಗಳು ಜಿಎಸ್‌ಟಿಯನ್ನು ಸರ್ಕಾರಕ್ಕೆ ಪಾವತಿಸಿದ ಬಳಿಕ, ಕಟ್ಟಿದ ಹಣದಲ್ಲಿ ಕೆಲ ಭಾಗವನ್ನು ಪುನಃ ರೀಫಂಡ್‌ ಮಾಡಿಸಿಕೊಳ್ಳುವ ಅವಕಾಶವಿದೆ. ಆದರೆ ಈ ವೇಳೆ ಕೆಲವು ಅವ್ಯವಹಾರ ನಡೆದಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಿಂದಾಗಿ ಈ ವಂಚನೆಯನ್ನು ತಡೆಯಲು ಜಿಎಸ್‌ಟಿ ರೀಫಂಡ್‌ ಕ್ಲೇಮ್‌ಗೆ ಆಧಾರ್‌ ಕಡ್ಡಾಯವಾಗಲಿದೆ.

ದಿನಬಳಕೆ ವಸ್ತುಗಳ ಬೆಲೆ ಏರಿಕೆ!

ಹಾಲು, ಹಣ್ಣು, ತರಕಾರಿ, ಕಾಫಿ, ಟೀ, ಸೋಪು, ಎಣ್ಣೆ, ಟೂತ್‌ಪೇಸ್ಟ್‌, ತಂಪು ಪಾನೀಯ ಮೊದಲಾದ ವಸ್ತುಗಳ ಬೆಲೆ 2020ರ ಡಿಸೆಂಬರ್‌ ಬಳಿಕ ಶೇ.5-12ರಷ್ಟುಏರಿಕೆಯಾಗಿದೆ. ಮುಂದಿನ 2-3 ತಿಂಗಳಲ್ಲಿ ಮತ್ತೆ ಶೇ.4-10ರಷ್ಟು ಏರಿಕೆ ಆಗಲಿದೆ. ಇನ್ನು ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎ.ಸಿ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆಯು ಶೇ.4ರಿಂದ 10ರಷ್ಟು ಅಧಿಕ ಆಗುವ ಸಾಧ್ಯತೆ ಇದೆ. ಇನ್ನು ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳೂ ಸಹ ಬೆಲೆ ಏರಿಕೆ ಮಾಡಲಿವೆ. ವಾಹನಗಳ ಬೆಲೆ ಶೇ.4-5ರಷ್ಟುಹೆಚ್ಚಾಗುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)

Recommended Video

ಹೊಸ ವರ್ಷಕ್ಕೆ ಟೀಂ‌ ಇಂಡಿಯಾ ಆಟಗಾರರ ಮೋಜು ಮಸ್ತಿ ಫುಲ್ ವೈರಲ್ | Oneindia Kannada

English summary
GST Rule Change: Ola, Uber To Get Costlier From Jan 1, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X