ಜಿಎಸ್ ಟಿ ಜಾರಿ, ಬೇಡಿಕೆ ಕುಸಿತ; ಉತ್ಪಾದನಾ ವಲಯಕ್ಕೆ ಪೆಟ್ಟು

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 13: ಕೈಗಾರಿಕಾ ಉತ್ಪಾದನೆಯನ್ನು ಅಳೆಯುವ ಕೈಗಾರಿಕೆ ಉತ್ಪನ್ನ ಸೂಚ್ಯಂಕವು (ಐಐಪಿ) ಕುಂಠಿತವಾಗಿದ್ದು, ಅಕ್ಟೋಬರ್ ತಿಂಗಳ ಕೊನೆಗೆ 2.2 ಪರ್ಸೆಂಟ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆ ಪ್ರಮಾಣ 4.2 ಪರ್ಸೆಂಟ್ ಇತ್ತು ಎಂಬ ಮಾಹಿತಿಯನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದೆ.

6.3ಕ್ಕೇರಿದ ಜಿಡಿಪಿ ಹಿಂದೆ ಜಿಎಸ್ಟಿ, ಅಪನಗದೀಕರಣದ ಕೊಡುಗೆ: ಅರುಣ್ ಜೇಟ್ಲಿ

ಸೆಪ್ಟೆಂಬರ್ ನಲ್ಲಿ 3.8 ಪರ್ಸೆಂಟ್ ದಾಖಲಾಗಿದ್ದಕ್ಕಿಂತ ಕಡಿಮೆ ಪ್ರಮಾಣ ಇದಾಗಿದೆ. ಅಂದಹಾಗೆ ಆಗಸ್ಟ್ ನಲ್ಲಿ ಕೈಗಾರಿಕೆ ಉತ್ಪನ್ನ ಸೂಚ್ಯಂಕ 4.5 ಪರ್ಸೆಂಟ್ ಇತ್ತು. ಖಾಸಗಿ ಸಂಸ್ಥೆಯೊಂದರ ಆರ್ಥಿಕ ತಜ್ಞರ ಪ್ರಕಾರ ಅಭಿವೃದ್ಧಿ ದರವು 3 ಪರ್ಸೆಂಟ್ ಇರಲಿದೆ. ಈಗಿನ ಅಂಕಿ-ಅಂಶದ ಪ್ರಕಾರ, ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ ಒಟ್ಟಾರೆ 2.5 ಪರ್ಸೆಂಟ್ ಇದೆ.

GST roll out, demand decline leads Industrial production slows to 3 month low

ಕಳೆದ ವರ್ಷದ ಇದೇ ಅವಧಿಯಲ್ಲಿ 5.5 ಪರ್ಸೆಂಟ್ ಇತ್ತು. ಉತ್ಪಾದನಾ ವಲಯದಲ್ಲಿ ಬೇಡಿಕೆ ಕಡಿಮೆ ಆಗಿರುವುದರಿಂದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಕುಸಿತ ಕಂಡಿದೆ. ಜಿಎಸ್ ಟಿ ಜಾರಿಯಿಂದ ಉತ್ಪಾದನಾ ವಲಯಕ್ಕೆ ಹಿನ್ನಡೆಯಾಗಿದೆ. ಗ್ರಾಹಕ ಬಳಕೆ ವಸ್ತುಗಳ ಉತ್ಪಾದನೆಯಲ್ಲೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಳಿಕೆ ಆಗಿದೆ.

ಕುಸಿದಿರುವ ಜಿಡಿಪಿ ಸದ್ಯಕ್ಕೆ ಎದ್ದೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲ

ಈ ವರ್ಷದ ಆರಂಭದ ಏಳು ತಿಂಗಳಲ್ಲಿ ಈ ಸರಕುಗಳ ಉತ್ಪಾದನೆಯಲ್ಲಿ 1.9 ಪರ್ಸೆಂಟ್ ಇಳಿಕೆ ಆಗಿದ್ದರೆ, ಕಳೆದ ವರ್ಷ 1.5 ಪರ್ಸೆಂಟ್ ಪ್ರಗತಿಯಾಗಿತ್ತು. ಕಳೆದ ವರ್ಷದ ಅಕ್ಟೋಬರ್ ಅವಧಿಗೆ ಹೋಲಿಸಿದರೆ ವಿದ್ಯುತ್ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳವಾಗಿದೆ. ಇನ್ನು ಗಣಿಗಾರಿಕೆ ಚಟುವಟಿಕೆಯಲ್ಲಿ ಬೆಳವಣಿಗೆ ಇಲ್ಲ.

ಐದು ತ್ರೈಮಾಸಿಕಗಳಿಂದ ಕುಸಿತದ ಹಾದಿಯಲ್ಲಿದ್ದ ಜಿಡಿಪಿ ದರ ಕಳೆದ ಬಾರಿ ಸಕಾರಾತ್ಮಕವಾಗಿ ಬದಲಾಗಿತ್ತು. ದೇಶದ ಆರ್ಥಿಕತೆ ಮತ್ತೆ ಪ್ರಗತಿ ಹಾದಿಯಲ್ಲಿ ಸಾಗುತ್ತದೆ ಎಂಬ ನಿರೀಕ್ಷೆಯಂತೂ ಇದ್ದೇ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Index of Industrial Production (IIP) which is the measure of factory output, grew at a sluggish pace of 2.2 per cent for the month of October, as compared to 4.2 per cent a year ago, government data showed on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ