ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ ತಿಂಗಳಿನಲ್ಲಿ 1,33,026 ಕೋಟಿ ರೂ. ಜಿಎಸ್​ಟಿ ಸಂಗ್ರಹ

|
Google Oneindia Kannada News

ನವದೆಹಲಿ, ಮಾರ್ಚ್ 1: 2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​ಟಿ ಆದಾಯವು 1,33,026 ಕೋಟಿ ರೂ.ಗಳಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಕಳೆದ ಜನವರಿ ತಿಂಗಳಿನಲ್ಲಿ ದಾಖಲೆಯ 1,40,986 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಫೆಬ್ರವರಿ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಸಿಜಿಎಸ್​ಟಿ (CGST) 24,435 ಕೋಟಿ ರೂ., ಎಸ್​ಜಿಎಸ್​ಟಿ (SGST) 30,779 ಕೋಟಿ ರೂ., ಐಜಿಎಸ್​ಟಿ (IGST) 67,471 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 33,837 ಕೋಟಿ ಸೇರಿದಂತೆ) ಮತ್ತು ಸೆಸ್ ರೂ. 10,340 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 638 ಕೋಟಿ ಸೇರಿದಂತೆ) ಒಳಗೊಂಡಿದೆ.

GST Collection : 2022ರ ಜನವರಿಯಲ್ಲಿ ದಾಖಲೆಯ ಜಿಎಸ್‌ಟಿ ಮೊತ್ತ ಸಂಗ್ರಹGST Collection : 2022ರ ಜನವರಿಯಲ್ಲಿ ದಾಖಲೆಯ ಜಿಎಸ್‌ಟಿ ಮೊತ್ತ ಸಂಗ್ರಹ

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 26,347 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 21,909 ಕೋಟಿ ರೂ. ಇತ್ಯರ್ಥ ಮಾಡಿದೆ. ನಿಯಮಿತ ಇತ್ಯರ್ಥದ ನಂತರ 2022ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿಗಾಗಿ 50,782 ಕೋಟಿ ರೂ. ಮತ್ತು ಎಸ್‌ಜಿಎಸ್​ಟಿಗಾಗಿ 52,688 ಕೋಟಿ ರೂ. ಆಗಿದೆ.

GST Revenue Collection in The Month of February 2022 Are Rs 1,33,026 Crores

2022ರ ಫೆಬ್ರವರಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್​ಟಿ ಆದಾಯಕ್ಕಿಂತ ಶೇ.18ರಷ್ಟು ಹೆಚ್ಚಾಗಿದೆ ಮತ್ತು 2020ರ ಫೆಬ್ರವರಿಯಲ್ಲಿನ ಜಿಎಸ್​ಟಿ ಆದಾಯಕ್ಕಿಂತ ಶೇ.26ರಷ್ಟು ಹೆಚ್ಚಾಗಿದೆ.

ತಿಂಗಳ ಅವಧಿಯಲ್ಲಿ ಸರಕುಗಳ ಆಮದುಗಳಿಂದ ಆದಾಯವು ಶೇ.38ರಷ್ಟು ಹೆಚ್ಚಾಗಿದೆ ಮತ್ತು ಆದಾಯಗಳು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ.

ಫೆಬ್ರವರಿಯಲ್ಲಿ 28-ದಿನಗಳಿದ್ದು, ಸಾಮಾನ್ಯವಾಗಿ ಜನವರಿಗಿಂತ ಕಡಿಮೆ ಆದಾಯವನ್ನು ಹೊಂದಿದೆ. 2022ರ ಫೆಬ್ರವರಿಯಲ್ಲಿನ ಈ ಹೆಚ್ಚಿನ ಬೆಳವಣಿಗೆಯನ್ನು ಭಾಗಶಃ ಲಾಕ್‌ಡೌನ್‌ಗಳು, ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂಗಳು ಹಾಗೂ ಜನವರಿ 20ರ ಸುಮಾರಿಗೆ ಉತ್ತುಂಗಕ್ಕೇರಿದ ಓಮಿಕ್ರಾನ್ ಅಲೆಯಿಂದ ವಿವಿಧ ರಾಜ್ಯಗಳು ಜಾರಿಗೊಳಿಸಿದ ವಿವಿಧ ನಿರ್ಬಂಧಗಳ ಸಂದರ್ಭದಲ್ಲಿಯೂ ನೋಡಬೇಕಾಗುತ್ತದೆ.

ಇದು ಐದನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1.30 ಲಕ್ಷ ಕೋಟಿ ರೂ. ದಾಟಿದೆ. ಜಿಎಸ್‌ಟಿ ಜಾರಿ ಆದಾಗಿನಿಂದ ಮೊದಲ ಬಾರಿಗೆ ಸೆಸ್ ಸಂಗ್ರಹವು 10,000 ಕೋಟಿ ರೂ. ಗಡಿ ದಾಟಿದ್ದು, ಇದು ಕೆಲವು ಪ್ರಮುಖ ವಲಯಗಳ ಚೇತರಿಕೆಯನ್ನು ಸೂಚಿಸಿದ್ದು, ವಿಶೇಷವಾಗಿ ವಾಹನ ಮಾರಾಟವನ್ನು ತೋರಿಸುತ್ತದೆ.

English summary
GST Revenue Collection in February 2022: The gross GST collections for the month of February 2022 are Rs 1,40,986 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X