ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಲ್ಲಿ ಜಿಎಸ್‌ಟಿ ಆದಾಯ 87,422 ಕೋಟಿ ರೂಪಾಯಿ ಸಂಗ್ರಹ

|
Google Oneindia Kannada News

ನವದೆಹಲಿ, ಆಗಸ್ಟ್‌ 01: ಜುಲೈ 2020ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 87,422 ಕೋಟಿ ರೂಪಾಯಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಒಟ್ಟು ಜಿಎಸ್‌ಟಿ ಆದಾಯಲ್ಲಿ ಸಿಜಿಎಸ್‌ಟಿ 16,147 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 21,418 ಕೋಟಿ ರೂಪಾಯಿ ಮತ್ತು ಐಜಿಎಸ್‌ಟಿ 42,592 ಕೋಟಿ ರೂಪಾಯಿಗಳಾಗಿದೆ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 20,324 ಕೋಟಿ ರೂ. ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 807 ಕೋಟಿ).

ರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಪಾವತಿಸಲು ಕಷ್ಟಸಾಧ್ಯ: ಕೇಂದ್ರ ಸರ್ಕಾರರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಪಾವತಿಸಲು ಕಷ್ಟಸಾಧ್ಯ: ಕೇಂದ್ರ ಸರ್ಕಾರ

ಅನುಕ್ರಮ ಆಧಾರದ ಮೇಲೆ, ಆದಾಯ ಸಂಗ್ರಹವು ಜೂನ್‌ನಿಂದ ಕುಸಿಯಿತು. ಜೂನ್‌ನಲ್ಲಿ ಸರ್ಕಾರ, 90,917 ಕೋಟಿ ಸಂಗ್ರಹಿಸಿತ್ತು. ಜುಲೈ 2019 ರಲ್ಲಿ ಸರ್ಕಾರದ ಜಿಎಸ್‌ಟಿ ಮಾಪ್ ಅಪ್ 1.02 ಲಕ್ಷ ಕೋಟಿ ರೂಪಾಯಿ.

GST Revenue collection for July, 2020 Rs. 87,422 crore

ಸಿಜಿಎಸ್‌ಟಿಗೆ, 23,320 ಕೋಟಿ ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ, 18,838 ಕೋಟಿಯನ್ನು ನಿಯಮಿತವಾಗಿ ಇತ್ಯರ್ಥಪಡಿಸಲಾಗಿದೆ. 2020 ರ ಜುಲೈ ತಿಂಗಳಲ್ಲಿ ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್‌ಟಿಗೆ, 39,467 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ, 40,256 ಕೋಟಿ ರೂ.

ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯದ ಶೇ. 86ರಷ್ಟು ಈ ತಿಂಗಳ ಆದಾಯವಾಗಿದೆ. ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ. 84ರಷ್ಟು ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯದ ಶೇ. 96 ನಷ್ಟಿತ್ತು.

ಇನ್ನು ಲಾಕ್‌ಡೌನ್ ಸಡಿಲಿಕೆ ಬಳಿಕ ಜೂನ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 90,917 ಕೋಟಿ ರುಪಾಯಿ.

English summary
GST revenue collected in July, 2020 is Rs 87,422 crore of which CGST is Rs 16,147 cr, SGST is Rs 21,418 cr, IGST is Rs 42,592 cr says Ministry of Finance
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X